For Quick Alerts
  ALLOW NOTIFICATIONS  
  For Daily Alerts

  ಸಾಧು ಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಹಿಂದಿದೆ ಕಿಡಿಗೇಡಿಗಳ ಕೈವಾಡ

  |

  ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಸಾಧು ಮಹಾಜಾರ್ ಇತ್ತೀಚಿಗೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಧು ಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಾವಿರಾರು ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ಮೇಲೆ ಸಾಧು ಸಾಮಾಜಿಕ ಜಾಲತಾಣದ ಮೂಲಕ ನೇರ ಸಂಪರ್ಕದಲ್ಲಿ ಇರುತ್ತಾರೆ ಎಂದು ಅಭಿಮಾನಿಗಳು ಸಂತಸಪಟ್ಟಿದ್ದಾರೆ.

  ಆದರೆ ಸಾಧುಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎನ್ನುವುದು ಗೊತ್ತಾಗಿದೆ. ಹೌದು, ಸಾಧು ಕೋಕಿಲ ಟ್ವಿಟ್ಟರ್ ಲೋಕಕ್ಕೆ ಎಂಟ್ರಿನೇ ಕೊಟ್ಟಿಲ್ಲ. ಅಂದ್ಹಾಗೆ ಸಾಧು ಕೋಕಿಲ ಹೆಸರಿನಲ್ಲಿ ತೆರೆದಿರುವ ಖಾತೆ ನಕಲಿ ಎನ್ನುವುದು ಗೊತ್ತಾಗಿದೆ. ಸಾಧು ಕೋಕಿಲ ಯಾವುದೇ ಸಾಮಾಜಿಕ ಜಾಲತಾಣದಲ್ಲಿಲ್ಲ ಎಂದು ನಟ ರಘು ರಾಮ್ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ..

  ಟ್ವಿಟ್ಟರ್ ಲೋಕಕ್ಕೆ ಬಂದರು ಕಾಮಿಡಿ ಕಿಂಗ್ ಸಾಧು ಮಹಾರಾಜ್ಟ್ವಿಟ್ಟರ್ ಲೋಕಕ್ಕೆ ಬಂದರು ಕಾಮಿಡಿ ಕಿಂಗ್ ಸಾಧು ಮಹಾರಾಜ್

  ಸಾಧು ಕೋಕಿಲ ಫೇಕ್ ಟ್ವಿಟ್ಟರ್ ಅಕೌಂಟ್

  ಸಾಧು ಕೋಕಿಲ ಫೇಕ್ ಟ್ವಿಟ್ಟರ್ ಅಕೌಂಟ್

  ಸಾಧು ಕೋಕಿಲ ಹೆಸರಿನಲ್ಲಿ ಓಪನ್ ಆಗಿರುವ ಖಾತೆ ಫೇಕ್. ಯಾರೋ ಕಿಡಿಗೇಡಿಗಳು ಸಾಧು ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಆದರೆ ಸಾಧು ಕೋಕಿಲ ಅವರೆ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಫುಲ್ ಖುಷ್ ಆಗಿ ಅವರನ್ನು ಫಾಲೋ ಮಾಡಲು ಪ್ರಾರಂಭಿಸಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲದೆ ಸಾಧು ಸಾಮಾಜಿಕ ಜಾಲತಾಣದಲ್ಲಿಯೂ ಅಭಿಮಾನಿಗಳಿಗೆ ಕಚಗುಳಿ ಇಡಲು ಬಂದಿದ್ದಾರೆ ಎಂದು ಸಂತಸಪಟ್ಟಿದ್ದರು. ಆದರೀಗ ಇದು ನಕಲಿ ಎನ್ನುವ ಸತ್ಯ ಗೊತ್ತಾಗಿದೆ.

  ಫೇಕ್ ಅಕೌಂಟ್ ಬಗ್ಗೆ ಸ್ಪಷ್ಟಪಡಿಸಿದ ನಟ ರಘುರಾಮ್

  ಫೇಕ್ ಅಕೌಂಟ್ ಬಗ್ಗೆ ಸ್ಪಷ್ಟಪಡಿಸಿದ ನಟ ರಘುರಾಮ್

  ಸಾಧುಕೋಕಿಲ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ತಿಳಿದ ನಟ ರಘುರಾಮ್ ಸಾಧು ಅವರ ಬಳಿ ವಿಚಾರಿಸಿದ್ದಾರೆ. ಆಗ ಇದು ಫೇಕ್ ಅಕೌಂಟ್ ಎನ್ನುವ ಸತ್ಯ ಬಹಿರಂಗವಾಗಿದೆ. ಈ ಬಗ್ಗೆ ರಾಘುರಾಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಸಾಧುಕೋಕಿಲ ಬಳಿ ಮಾತನಾಡಿದೆ. ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಫೇಕ್ ಅಕೌಂಟ್" ಎಂದು ಹೇಳಿದ್ದಾರೆ.

  ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ: ಕಹಿ ಸತ್ಯ ಬಿಚ್ಚಿಟ್ಟ ಸಾಧು ಮಹಾರಾಜ್.!ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ: ಕಹಿ ಸತ್ಯ ಬಿಚ್ಚಿಟ್ಟ ಸಾಧು ಮಹಾರಾಜ್.!

  ಫೇಕ್ ಅಕೌಂಟ್ ನಿಂದ ಬಂದ ಮೊದಲ ಟ್ವೀಟ್

  ಫೇಕ್ ಅಕೌಂಟ್ ನಿಂದ ಬಂದ ಮೊದಲ ಟ್ವೀಟ್

  'My first Tweet. ಶನಿವಾರದಂದೇ ನಾನು ಇಲ್ಲಿಗೆ ಕಾಲಿಟ್ಟಿದ್ದೇನೆ, ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ' ಎಂದು ಸಾಧು ಕೋಕಿಲ ಫೇಕ್ ಅಕೌಂಟ್ ನಿಂದ ಮಾರ್ಚ್ 21ರಂದು ಸಂದೇಶ ಬಂದಿತ್ತು. ಆದರೆ ಈ ಸಂದೇಶ ಸಾಧು ಕೋಕಿಲ ಕಳುಹಿಸಿದಲ್ಲ ಎನ್ನುವುದು ಈಗ ಬಹಿರಂಗವಾಗಿದೆ.

  ಫೇಕ್ ಅಂತ ಗೊತ್ತಾಗುತ್ತಿದ್ದಂತೆ ಅಕೌಂಟ್ ಡಿಲೀಟ್

  ಫೇಕ್ ಅಂತ ಗೊತ್ತಾಗುತ್ತಿದ್ದಂತೆ ಅಕೌಂಟ್ ಡಿಲೀಟ್

  ಸಧ್ಯ ಸಾಧು ಕೋಕಿಲಾ ಅವರ ಹೆಸರಿನಲ್ಲಿ ಇದ್ದ ಫೇಕ್ ಅಕೌಂಟ್ ಕಾಣಿಸುತ್ತಿಲ್ಲ. ಅವರ ಅಭಿಮಾನಿಗಳು ಖಾತೆ ತೆರೆದಿದ್ದೇ ಆಗಿದ್ದರೆ ಡಿಲೀಟ್ ಮಾಡುತ್ತಿರಲಿಲ್ಲ. ಆದರೀಗ ಸಾಧು ಫೇಕ್ ಅಕೌಂಟ್ ಡಿಲೀಟ್ ಆಗಿದೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಅಕೌಂಟ್ ಗಳು ಓಪನ್ ಮಾಡಿರುತ್ತಾರೆ. ಆದರೆ ಇದು ಅಭಿಮಾನಿಗಳು ಮಾಡಿರುವ ಕೆಲಸವಲ್ಲ ಎನ್ನುವುದು ಗೊತ್ತಾಗುತ್ತಿದೆ.

  ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ

  ಫೇಕ್ ಅಕೌಂಟ್ ನಿಂದ 'ರಾಬರ್ಟ್' ಹಾಡು ಶೇರ್ ಆಗಿತ್ತು

  ಫೇಕ್ ಅಕೌಂಟ್ ನಿಂದ 'ರಾಬರ್ಟ್' ಹಾಡು ಶೇರ್ ಆಗಿತ್ತು

  ಚಡ್ಡಿ ದೋಸ್ತ್ ನೆನಪು... ಇದರ ಬಳಿಕ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ 'ದೋಸ್ತಾ ಕಣೋ' ಹಾಡನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ, 'ಈ ಹಾಡು ಕೇಳಿದ ಕೂಡಲೇ 'ಚಡ್ಡಿ ದೋಸ್ತ್' ಸಿನಿಮಾ ನೆನಪಾಯಿತು' ಎಂದು ರಂಗಾಯಣ ರಘು ನಟನೆಯ ಸಿನಿಮಾವನ್ನು ನೆನಪಿಸಿಕೊಂಡಿದ್ದರು.

  English summary
  Kannada Actor Sadhu Kokila Twitter Account is fake. Actor Raghuram clarified about saadhu kokila fake twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X