»   » ಡೈಲಾಗ್ ಕಿಂಗ್‌ಗೆ ಅವರದೇ ಸ್ಟೈಲಲ್ಲಿ ಹ್ಯಾಪಿ ಬರ್ತಡೇ ಹೇಳಿ

ಡೈಲಾಗ್ ಕಿಂಗ್‌ಗೆ ಅವರದೇ ಸ್ಟೈಲಲ್ಲಿ ಹ್ಯಾಪಿ ಬರ್ತಡೇ ಹೇಳಿ

Posted By:
Subscribe to Filmibeat Kannada

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಹೊಸಬರ ಚಿತ್ರ 'ರಂಗಿತರಂಗ'ದಲ್ಲಿ ತೆಂಕಬೈಲ್ ಕಾಳಿಂಗ ಭಟ್ಟರಾಗಿ ಸ್ಯಾಂಡಲ್ ವುಡ್ ನಲ್ಲಿ ಮರುಹುಟ್ಟು ಪಡೆದುಕೊಂಡ 'ಡೈಲಾಗ್ ಕಿಂಗ್' ಎಂದೇ ಖ್ಯಾತಿಯಾಗಿರುವ ಪುದಿಪೆಡ್ಡಿ ಸಾಯಿ ಕುಮಾರ್ ಸರ್ಮಾ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ತಮ್ಮ ಖಡಕ್ ಡೈಲಾಗ್ಸ್, ಹಾಗೂ ಮಾತಿನಲ್ಲಿಯೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆಯನ್ನು ಹೊಂದಿರುವ ಕನ್ನಡದ ಕಲಾವಿದನಿಗೆ ಇಂದು ಜನುಮ ದಿನದ ಸಡಗರ.

Kannada actor Saikumar, celebrates his 55th birthday

ಇಂದು ಕಲಾವಿದ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕನ್ನಡ, ತಮಿಳು, ತೆಲುಗು, ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಸಾಯಿಕುಮಾರ್ ಇದೀಗ 55ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

1960ನೇ ಇಸವಿ ಜುಲೈ 27ರಂದು ಆಂಧ್ರ ಪ್ರದೇಶದ ವಿಜಯನಗರಮ್ ನಲ್ಲಿ ಜನಿಸಿದ ಸಾಯಿಕುಮಾರ್ ತಂದೆ ಪಿ.ಜೆ ಶರ್ಮಾ, ತಾಯಿ ಕೃಷ್ಣ ಜ್ಯೋತಿ. ಪತ್ನಿ ಸುರೇಖಾ ಮಗ ಆದಿತ್ಯ(ತೆಲುಗು ನಟ) ಹಾಗು ಮಗಳು ಜ್ಯೋತಿರ್ಮಯಿ. ಇಂತಹ ಸಾಯಿಕುಮಾರ್ ಅವರ ಸುಂದರ ಕುಟುಂಬದಲ್ಲಿ, ಅಣ್ಣನಂತೆ ತಮ್ಮ ರವಿಶಂಕರ್ ಕೂಡ ಬಹುಭಾಷಾ ಚಿತ್ರರಂಗದಲ್ಲಿ ಫೇಮಸ್.

ಸಾಯಿಕುಮಾರ್ ತಂದೆ ಪಿ.ಜೆ ಶರ್ಮಾ ಅವರು ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು, ಆದ್ದರಿಂದ ಅಪ್ಪನ ಹಾದಿಯನ್ನೇ ಅನುಸರಿಸಿದ ಸಾಯಿಕುಮಾರ್ ಕೂಡ ಮೊದಲಿಗೆ ಡಬ್ಬಿಂಗ್ ಕಲಾವಿದರಾಗಿ ಸಿನೆಮಾ ಲೋಕಕ್ಕೆ ಪರಿಚಯವಾದರು.

Kannada actor Saikumar, celebrates his 55th birthday

ಕನ್ನಡದಲ್ಲಿ ನಟಿಸಿದ 'ಅಗ್ನಿ ಐ.ಪಿ.ಎಸ್', 'ಪೋಲಿಸ್ ಸ್ಟೋರಿ ಭಾಗ-1' ಹಾಗೂ 'ಭಾಗ-2', ಸಾಯಿಕುಮಾರ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಕೊಟ್ಟ ಚಿತ್ರ ಎನ್ನಬಹುದು.

ಕನ್ನಡದ ಹಿಟ್ ಚಿತ್ರ 'ರಂಗಿತರಂಗ' ಹಾಗೂ 'ಕಲ್ಪನಾ' ಚಿತ್ರದಲ್ಲಿ ಅಭೂತಪೂರ್ಣ ನಟನೆಯನ್ನು ಪ್ರೇಕ್ಷಕರಿಗೆ ಕೊಡುಗೆಯಾಗಿ ನೀಡಿದ ಸಾಯಿಕುಮಾರ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತಾರೆ.

ಇವರಿಗೂ ಕರ್ನಾಟಕದ ರಾಜಕೀಯಕ್ಕೂ ಒಂಥರಾ ನಂಟಿದೆ ಅಂದರೂ ತಪ್ಪಾಗಲಾದರು. ಏಕೆಂದರೆ ವಿಧಾನಸೌದ ಚುನಾವಣೆಗೆ ಕೋಲಾರ ಜಿಲ್ಲೆಯ ಬಾಗೇಪಲ್ಲಿ ಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಒಟ್ನಲ್ಲಿ ಒಬ್ಬ ಬಹುಮುಖ ಕಲಾವಿದನಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಲೂ 25ರ ಚಿರಯುವಕನಂತೆ ಗುರುತಿಸಿಕೊಳ್ಳುತ್ತಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

English summary
Kannada actor 'Dialogue King' Saikumar celebrated his 55th birthday Today (July 27)with his family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada