For Quick Alerts
  ALLOW NOTIFICATIONS  
  For Daily Alerts

  ಅಂತೂ 'ಇರುವೆ' ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ ಸಂಚಾರಿ ವಿಜಯ್

  |

  ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ಮೇಲೊಬ್ಬ ಮಾಯಾವಿ' ಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ. ಈಗಾಗಲೇ ಚಿತ್ರವು ವಿಭಿನ್ನ ಪೋಸ್ಟರ್ ಮತ್ತು ಹಾಡುಗಳ ಮೂಲಕ ಬಹು ನಿರೀಕ್ಷೆಯನ್ನು ಮೂಡಿಸಿದೆ.

  ಪತ್ರಕರ್ತರಾದ ಬಿ.ನವೀನ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಅವರ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವಿದೆ.

  ಮೈಸೂರು ಅರಮನೆ ಮುಂದೆ 'ಮಾಯಾವಿ' ಸಂಚಾರಿ ವಿಜಯ್

  ವಿಶೇಷ ಅಂದ್ರೆ, 'ಮೇಲೊಬ್ಬ ಮಾಯಾವಿ' ಚಿತ್ರದಲ್ಲಿ ಸಂಚಾರಿ ವಿಜಯ್ ಪಾತ್ರದ ಹೆಸರು 'ಇರುವೆ'. ಕರಾವಳಿಯ ಮಾಫಿಯಾವೊಂದನ್ನು ಅಲ್ಲಿಯದೇ ಕಲೆಯ ಮೂಲಕ ಹೇಳಲು ಹೊರಟಿರುವ ಸಿನಿಮಾ 'ಮೇಲೊಬ್ಬ ಮಾಯಾವಿ'.

  'ಇರುವೆ' ಪಾತ್ರದ ಡಬ್ಬಿಂಗ್ ಬಗ್ಗೆ ಸಂಚಾರಿ ವಿಜಯ್ ಏನಂತಾರೆ.?

  ''ಇರುವೆ' ಹೆಸರಿನ ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವುದು ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ನನ್ನ ಸಿನಿ ಪಯಣದಲ್ಲಿ ಇಂತಹದೊಂದು ಪಾತ್ರ ಇಲ್ಲಿಯವರೆಗೆ ಮಾಡಿಲ್ಲ. ಇಂತಹ ಪಾತ್ರ ಒಬ್ಬ ನಟನಿಗೆ ಸಿಗುವುದೇ ಅಪರೂಪ. ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡಿದ್ದ ನಿರ್ದೇಶಕರು ಈ ಪಾತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡದ್ದಕ್ಕೆ ಥ್ಯಾಂಕ್ಸ್. ನನ್ನ ಇರುವೆ ಪಾತ್ರಕ್ಕೆ ಡಬ್ಬ್ ಮಾಡುವುದು ಯಾಕೆ ಚಾಲೆಂಜಿಂಗ್ ಅಂದ್ರೆ, ಆ ಪಾತ್ರಕ್ಕೆ ಯಾವುದೇ ರೆಫೆರೆನ್ಸ್ ಇಲ್ಲ. ಉದಾಹರಣೆಗೆ.. ಮಂಗಳಮುಖಿ, ಡಾಕ್ಟರ್, ಹುಚ್ಚ.. ಇಂತಹ ಪಾತ್ರ ಮಾಡುವುದಾದರೆ ಅವರ ಬದುಕನ್ನು ಸ್ಟಡಿ ಮಾಡುವುದಕ್ಕೆ ಅವಕಾಶವಿರುತ್ತದೆ. ಇಲ್ಲಿ ಅದಕ್ಕೇ ಛಾನ್ಸೇ ಇಲ್ಲ. ಇನ್ನು, ಪಾತ್ರದ ಧ್ವನಿ ಕೂಡ ವಿಭಿನ್ನವಾಗಿರಬೇಕು. ಇಂತಹದೊಂದು ಅಪರೂಪದ ಕಥೆಗೆ ಬಂಡವಾಳ ಹೂಡಿರುವ ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಅವರ ಸಿನಿಮಾ ಪ್ರೀತಿಯನ್ನು ಮೆಚ್ಚಲೇಬೇಕು"

  English summary
  Kannada Actor Sanchari Vijay starrer Kannada Movie 'Mellobba Mayavi' dubbing completed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X