»   » ನಂದ -ಶರಣ್ ಜೋಡಿ, ಮತ್ತೆ ಮಾಡಲಿದೆ ಮೋಡಿ

ನಂದ -ಶರಣ್ ಜೋಡಿ, ಮತ್ತೆ ಮಾಡಲಿದೆ ಮೋಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಶರಣ್ ಇದೀಗ ಗಾಂಧಿನಗರದಲ್ಲಿ ಬ್ಯುಸಿ ಆಕ್ಟರ್. ಇವರ ಮುಂದಿನ ಪ್ರಾಜೆಕ್ಟ್ ಪಟ್ಟಿ ಉದ್ದಕ್ಕೆ ಬೆಳೆಯುತ್ತ ಹೋಗುತ್ತಿದ್ದು, ಸದ್ಯಕ್ಕೆ 'ಬುಲೆಟ್ ಬಸ್ಯಾ' ಚಿತ್ರದ ರಿಲೀಸ್ ಗೆ ಕಾಯುತ್ತಿರುವ ಶರಣ್ ಮುಂದಿನ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ 'ರನ್ನ' ಖ್ಯಾತಿಯ ನಂದ ಕಿಶೋರ್, ಶರಣ್ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಚಿತ್ರ ಸೆಟ್ಟೇರುತ್ತಿದೆ. ಶರಣ್ ಹಿಟ್ ಕಾಮಿಡಿ ಚಿತ್ರಗಳಾದ 'ವಿಕ್ಟರಿ', 'ಅಧ್ಯಕ್ಷ', ಚಿತ್ರಗಳನ್ನು ನೀಡಿದ ಅದೇ ನಂದ ಕಿಶೋರ್ ಇದೀಗ ಮತ್ತೆ ಇನ್ನೂ ಹೆಸರಿಡದ ಶರಣ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ']

Kannada actor Sharan and Director Nanda to Team up again

ಈಗಾಗಲೇ ಎ.ಹರ್ಷ ನಿರ್ದೇಶನದ 'ಮಾರುತಿ 800' ಚಿತ್ರಕ್ಕೆ ಅಣಿಯಾಗುತ್ತಿರುವ ಶರಣ್, ಈ ಚಿತ್ರ ಕಂಪ್ಲೀಟ್ ಆದ ಮೇಲೆ ನಂದ ಕಿಶೋರ್ ಅವರೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಅಂತೂ ಇಂತೂ ಗಾಂಧಿನಗರದಲ್ಲಿ ಸದ್ಯಕ್ಕೆ ಮೋಸ್ಟ್ ಬ್ಯುಸಿ ಪರ್ಸನ್ ಅಂದ್ರೆ ಅದು ಶರಣ್ ಅಂತಾನೇ ಹೇಳಬಹುದು.['ಶರಣ ಬಸವೇಶ್ವರ'ರಿಗೆ ಶರಣ್ ಶರಣು ಶರಣಾರ್ಥಿ]

ಕಿಚ್ಚ ಸುದೀಪ್ ಅಭಿನಯಿಸಿದ್ದ, ಬಾಕ್ಸಾಫೀಸ್ ಚಿಂದಿ ಉಡಾಯಿಸಿದ 'ರನ್ನ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಂದ ಕಿಶೋರ್ ಸದ್ಯಕ್ಕೆ ಪ್ರದೀಪ್ ಅಭಿನಯದ ಚಿತ್ರವೊಂದಕ್ಕೆ ಡೈರೆಕ್ಟ್ ಮಾಡುತ್ತಿದ್ದಾರೆ.[ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್]

ಅಂತೂ ಇದೇ ವರ್ಷದಲ್ಲಿ ಮತ್ತೆ ನಂದ ಕಿಶೋರ್, ಶರಣ್ ಒಂದಾದ್ರೆ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ನಗೆ ಹಬ್ಬ ಗ್ಯಾರಂಟಿ. ಇನ್ನೇನು ಮೂರು ತಿಂಗಳೊಳಗಾಗಿ ಶರಣ್ ಹೊಸ ಚಿತ್ರದ ಪ್ರಾಜೆಕ್ಟ್ ಬಗ್ಗೆ ನಿರ್ದೇಶಕ ನಂದ ಕಿಶೋರ್ ಹೇಳಲಿದ್ದಾರೆ. ಈ ಚಿತ್ರದ ಹೆಚ್ಚಿನ ಅಪ್ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ನೋಡುತ್ತಿರಿ.

English summary
Kannada actor Sharan, and director Nanda Kishore, are readying to start their respective new films. Nanda Kishore debuted as a director in Kannada movie 'Victory', starring Sharan. The two teamed up again for Kannada movie 'Adyaksha'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada