»   » ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ

ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ

Posted By:
Subscribe to Filmibeat Kannada

ತಮಿಳಿನ 'ವರುತೆಪಡಾದೆ ವಲಿಬರ ಸಂಗೋ' ಸಿನಿಮಾವನ್ನು ಕನ್ನಡದಲ್ಲಿ 'ಅಧ್ಯಕ್ಷ' ರಿಮೇಕ್ ಮಾಡಿ ಅದರಲ್ಲಿ ಕಾಮಿಡಿ ನಟ ಶರಣ್ ಅವರು ಮಿಂಚಿ ಅಭಿಮಾನಿಗಳನ್ನು ರಂಜಿಸಿದ ಬಳಿಕ ಮತ್ತೆ ಇನ್ನೊಂದು ರಿಮೇಕ್ ಸಿನಿಮಾದತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಹೌದು 'ರ್ಯಾಂಬೋ', 'ವಿಕ್ಟರಿ', 'ಅಧ್ಯಕ್ಷ' ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದ ನಟ ಶರಣ್ ಅವರು ಈ ಬಾರಿ ಇತ್ತೀಚೆಗೆ ತೆರೆಕಂಡು ಹಿಟ್ ಆದ ನಟ ಶಿವಕಾರ್ತಿಕೇಯನ್ ಅವರ 'ರಜಿನಿ ಮುರುಗನ್' ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ.['ನಟರಾಜ ಸರ್ವಿಸ್' ಸ್ಟೇಷನ್ ನಲ್ಲಿ ಭರ್ಜರಿ ಟಪ್ಪಾಂಗುಚ್ಚಿ, ಡಾನ್ಸ್.!]

Kannada Actor Sharan in 'Rajini Murugan' kannada remake

ಅಂದಹಾಗೆ ರಾಮು ಎಂಟರ್ ಪ್ರೈಸಸ್ ನಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಈಗಾಗಲೇ ಚಿತ್ರದ ರಿಮೇಕ್ ಹಕ್ಕನ್ನು ಖರೀದಿ ಮಾಡಿದ್ದು, ನಟ ಶರಣ್ ಅವರು ಈ ಸಿನಿಮಾದಲ್ಲಿ ನಟಿಸಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ನಾಯಕಿ ನಟಿ ಸೇರಿದಂತೆ ಇನ್ನುಳಿದ ಪಾತ್ರವರ್ಗದ ಆಯ್ಕೆ ಪ್ರಗತಿಯಲ್ಲಿದ್ದು ಅತೀ ಶೀಘ್ರದಲ್ಲಿ ಶೂಟಿಂಗ್ ಆರಂಭವಾಗಲಿದೆ.['ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ]

ತಾವು ಅಭಿನಯಿಸುವ ಪಾತ್ರ ರಿಮೇಕ್ ಆಗಲೀ ಸ್ವಮೇಕ್ ಆಗಲಿ, ಅದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ ಎನ್ನುವ ಶರಣ್ ಅವರು 'ನಾನು ಎಲ್ಲಾ ಪಾತ್ರಕ್ಕೂ ಜೀವ ತುಂಬುತ್ತೇನೆ. ಕನ್ನಡ ಸಿನಿಮಾ ನೋಡುವವರಿಗೆ ಮನರಂಜನೆ ನೀಡುವುದಷ್ಟೇ ನನಗೆ ತಿಳಿದಿರುವುದು. ಶಿವಕಾರ್ತಿಕೇಯನ್ ಅವರ ಪಾತ್ರಗಳಿಗೆ ಕನ್ನಡದಲ್ಲಿ ನಾನು ನ್ಯಾಯ ನೀಡಬಹುದು ಎಂಬ ವಿಷಯವೇ ಖುಷಿ ನೀಡುತ್ತದೆ' ಎಂದಿದ್ದಾರೆ.[ಒಡೆಯರ್, 'ನಟರಾಜ ಸರ್ವಿಸ್' ಸ್ಟೇಷನ್ ಗೆ, ವಿಲನ್ ಫಿಕ್ಸ್!]

ಶನಿವಾರದಂದು ಹರ್ಷ ನಿರ್ದೇಶನದ 'ಜೈ ಮಾರುತಿ 800' ಸಿನಿಮಾದ ಸೆಟ್ ನಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಶರಣ್ ಪ್ರತೀ ವರ್ಷ ತಮ್ಮ ಕುಟುಂಬದವರ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರಂತೆ.

ಸದ್ಯಕ್ಕೆ 'ನಟರಾಜ ಸರ್ವಿಸ್' ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಶರಣ್ 'ಜೈ ಮಾರುತಿ 800' ಸೆಟ್ ಗೆ ಶೂಟಿಂಗ್ ಗೆ ಹಾಜರಾಗಿದ್ದಾರೆ.

English summary
Sandalwood filmmaker Sharan think only he can make hits of Kannada remakes of Shivakarthikeyan's movies. producer-distributor Ramu has roped in Sharan for a remake of another of Shivakarthikeyan's films, 'Rajini Murugan', which hit theatres in January.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada