For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಸೋನು ಲಕ್ ಚೇಂಜ್: ಶಿವಣ್ಣ, ದರ್ಶನ್ ಚಿತ್ರಗಳಿಂದ ಆಫರ್.?

  |
  ಬಿಗ್ ಬಾಸ್ ಕನ್ನಡ ಸೀಸನ್ 6 ನಂತರ ಸೋನು ಪಾಟೀಲ್ ಅದೃಷ್ಟ ಬದಲಾಯ್ತು | FILMIBEAT KANNADA

  ಕನ್ನಡ ಚಿತ್ರರಂಗಕ್ಕೆ ಸೋನು ಪಾಟೀಲ್ ಕಾಲಿಟ್ಟು ವರ್ಷಗಳೇ ಉರುಳಿವೆ. ಆದರೆ ಸೋನು ಪಾಟೀಲ್ ಗೆ ಜನಪ್ರಿಯತೆ ತಂದುಕೊಟ್ಟಿತ್ತು ಮಾತ್ರ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ.

  ''ನಿಮ್ಮ ಉತ್ತರ ಕರ್ನಾಟಕದ ಮನೆಮಗಳು ಸೋನು ಪಾಟೀಲ್'' ಎನ್ನುತ್ತಾ 'ಬಿಗ್ ಬಾಸ್' ಮನೆಯಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತನಾಡುತ್ತಾ ಜನಮನ ಗೆದ್ದ ಸೋನು ಪಾಟೀಲ್ ಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಜಾಸ್ತಿಯಾಗಿದೆಯಂತೆ.

  'ಬಿಗ್ ಬಾಸ್' ಮನೆಗೆ ಹೋಗಿ ಬಂದಮೇಲೆ ಅವಕಾಶಗಳಿಗಾಗಿ ಹಾತೊರೆಯುತ್ತಿದ್ದ ಸೋನು ಪಾಟೀಲ್ ಗೆ ಅದೃಷ್ಟ ಖುಲಾಯಿಸಿದೆ. ಸೋನು ಪಾಟೀಲ್ ಗೆ ಸಹಾಯ ಮಾಡುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇರೆ ಭರವಸೆ ಕೊಟ್ಟಿದ್ದಾರಂತೆ.

  ಇನ್ನು ಸೋನು ಪಾಟೀಲ್ ಪ್ಲಾನ್ ಪ್ರಕಾರ ನಡೆದರೆ, ಆಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮುರಳಿ ಅಭಿನಯದ ಚಿತ್ರಗಳಲ್ಲಿ ಅಭಿನಯಿಸುವುದು ಗ್ಯಾರಂಟಿ. ಮುಂದೆ ಓದಿರಿ...

  'ಗರ' ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಿವಣ್ಣ

  'ಗರ' ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಿವಣ್ಣ

  'ಪಂಚಕಜ್ಜಾಯ', 'ಶ್ರೀಮಾನ್ ಶ್ರೀಮತಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಈಗಾಗಲೇ ಸೋನು ಪಾಟೀಲ್ ಅಭಿನಯಿಸಿದ್ದಾರೆ. ಸೋನು ಪಾಟೀಲ್ ನಟನೆಯ 'ಗರ' ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. 'ಗರ' ಚಿತ್ರದ ಪ್ರೆಸ್ ಮೀಟ್ ಗೆ ಬಂದಿದ್ದ ಶಿವಣ್ಣ, ಸೋನು ಪಾಟೀಲ್ ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರಂತೆ. ಹಾಗಂತ ಸ್ವತಃ ಸೋನು ಪಾಟೀಲ್ ಹೇಳಿಕೊಂಡಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಪ್ಲಾನ್ ವರ್ಕೌಟ್ ಆಗಲಿಲ್ಲ.!

  ಸೋನು ಪಾಟೀಲ್ ಗೆ ಖುಷಿಯೋ ಖುಷಿ

  ಸೋನು ಪಾಟೀಲ್ ಗೆ ಖುಷಿಯೋ ಖುಷಿ

  ''ಗರ' ಚಿತ್ರದ ಪ್ರೆಸ್ ಮೀಟ್ ಗೆ ಶಿವಣ್ಣ ಬಂದಿದ್ದರು. ಅವರಿಗೆ ವಿಶ್ ಮಾಡಲು ಹೋದಾಗ ನನ್ನನ್ನು ಬಿಗ್ ಬಾಸ್ ಸೋನು ಪಾಟೀಲ್ ಅಂತ ಗುರುತಿಸಿದರು. ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಬಳಿ ನಾನು ದುಡ್ಡು ಕೇಳಲ್ಲ. ದುಡಿಯುವ ಶಕ್ತಿ ಇದೆ. ಹೀಗಾಗಿ ನನಗೆ ಅವಕಾಶ ಕೊಡಿಸಿ, ಸ್ವಲ್ಪ ಸಪೋರ್ಟ್ ಮಾಡಿ ಎಂದು ಕೇಳಿಕೊಂಡೆ. ಅದಕ್ಕೆ ಒಪ್ಪಿದ ಶಿವಣ್ಣ ಕೂಡಲೇ ತಮ್ಮ ಫೋನ್ ನಂಬರ್ ನ ಬರೆದುಕೊಟ್ಟರು. ''ನನಗೆ ಫೋನ್ ಮಾಡಿ ಖಂಡಿತ ಸಪೋರ್ಟ್ ಮಾಡುವೆ'' ಎಂದು ಶಿವಣ್ಣ ಹೇಳಿದ್ದಾರೆ. ಇದರಿಂದ ನನಗೆ ಬಹಳ ಖುಷಿಯಾಗಿದೆ'' ಅಂತಾರೆ ಸೋನು ಪಾಟೀಲ್.

  'ಉತ್ತರ ಕರ್ನಾಟಕ' ಅಂತ ಕರೆಯುವುದು ಯಾಕೆ ಅಂತ್ಲೇ ಸೋನು ಪಾಟೀಲ್ ಗೆ ಗೊತ್ತಿಲ್ಲ.!

  ದರ್ಶನ್ ಚಿತ್ರದಲ್ಲಿ ಸೋನು.?

  ದರ್ಶನ್ ಚಿತ್ರದಲ್ಲಿ ಸೋನು.?

  ''ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಮೂವಿಗೆ ಮಾತುಕತೆ ನಡೆದಿದೆ. ಅದಿನ್ನೂ ಫೈನಲ್ ಆಗಿಲ್ಲ. ಹಾಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ನಿರ್ದೇಶಕ ಮಹೇಶ್ ಹೇಳಿದ್ದಾರೆ. ಅದು ಕೂಡ ಇನ್ನೂ ಪಕ್ಕಾ ಆಗಿಲ್ಲ. ಒಟ್ನಲ್ಲಿ ಅವಕಾಶಗಳು ಜಾಸ್ತಿ ಆಗಿರುವುದಕ್ಕೆ ಸಂತಸ ಇದೆ'' ಎಂದರು ಸೋನು ಪಾಟೀಲ್.

  ಯಾರೀ ಜವಾರಿ ಹುಡುಗಿ ಸೋನು ಪಾಟೀಲ್.? ಆಕೆಯ ನಿಜ ನಾಮ ನಿಮ್ಗೆ ಗೊತ್ತೇನು.?

  ಮಜಾ ಟಾಕೀಸ್ ನಲ್ಲಿ ಸೋನು

  ಮಜಾ ಟಾಕೀಸ್ ನಲ್ಲಿ ಸೋನು

  ''ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಬೇಕು ಎಂದು ಬಹಳ ಆಸೆ ಇತ್ತು. ಅದು ಈಗ ನೆರವೇರಿದೆ. 'ಬಿಗ್ ಬಾಸ್' ಕಡೆಯಿಂದ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಇತ್ತೀಚಿಗಷ್ಟೇ ಹೋಗಿದ್ದೆ'' ಎಂದು ಮಾಧ್ಯಮಗಳ ಮುಂದೆ ತಮ್ಮ ಹರ್ಷವನ್ನು ಸೋನು ಪಾಟೀಲ್ ವ್ಯಕ್ತಪಡಿಸಿದ್ದಾರೆ.

  English summary
  Kannada Actor Shiva Rajkumar has agreed to help Bigg Boss Kannada 6 Contestant Sonu Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X