»   » ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಶಿವಲಿಂಗ' ಸಿನಿಮಾ ಭರ್ಜರಿ 25ನೇ ದಿನಗಳನ್ನೂ ಪೂರೈಸಿ 50ನೇ ದಿನದತ್ತ ದಾಪುಗಾಲಿಕ್ಕುತ್ತಿದೆ.

ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಶಿವಲಿಂಗ' ಸಿನಿಮಾ ಲಂಡನ್ ನಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣುತ್ತಿದೆ ಅನ್ನೋ ವಿಷಯವನ್ನು ನಾವೇ ನಿಮಗೆ ಹೇಳಿದ್ವಿ ತಾನೆ.[ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ']


Kannada Actor Shiva Rajkumar honoring in London

ಇದೀಗ ಲಂಡನ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಲುವಾಗಿ ವಿದೇಶಕ್ಕೆ ತೆರಳಲಿರುವ ನಮ್ಮೆಲ್ಲರ ಮೆಚ್ಚಿನ ಶಿವಣ್ಣ ಅವರಿಗೆ ಲಂಡನ್ ನಲ್ಲಿರುವ ಕನ್ನಡಿಗರು ಮತ್ತು ಶಿವಣ್ಣನ ಅಭಿಮಾನಿಗಳು ಸನ್ಮಾನ ಮಾಡಲು ನಿರ್ಧರಿಸಿದ್ದಾರೆ.


ಮಾರ್ಚ್ 19 ರಂದು ಲಂಡನ್ ನಲ್ಲಿ ನಿರ್ದೇಶಕ ಪಿ.ವಾಸು ಅವರು ನಿರ್ದೇಶನ ಮಾಡಿರುವ 'ಶಿವಲಿಂಗ' ಸಿನಿಮಾ ಬಿಡುಗಡೆಗೊಂಡು ಪ್ರೀಮಿಯರ್ ಶೋ ಕಾಣಲಿದ್ದು, ಅದೇ ದಿನ ಕನ್ನಡಿಗರು ಶಿವಣ್ಣ ಅವರಿಗೆ ವಿಶೇಷ ಸನ್ಮಾನ ಮಾಡಲು ತಯಾರಿ ನಡೆಸುತ್ತಿದ್ದಾರೆ.[ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು]


Kannada Actor Shiva Rajkumar honoring in London

ಇತ್ತೀಚೆಗಷ್ಟೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಅನಾವರಣಗೊಂಡ ಬಸವಣ್ಣನವರ ಪುತ್ಥಳಿಯ ಮುಂಭಾಗದಲ್ಲೇ ಕನ್ನಡದ ಹೆಮ್ಮೆಯ ಕುವರ ಶಿವರಾಜ್ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]


Kannada Actor Shiva Rajkumar honoring in London

ಶಿವಣ್ಣ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 30 ವರ್ಷ ಆದ ಹಿನ್ನಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಅಲ್ಲಿನ ಕನ್ನಡ ಪ್ರೇಮಿಗಳು ಮತ್ತು ಅಭಿಮಾನಿಗಳು ಏರ್ಪಡಿಸಿದ್ದಾರೆ.['ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?]


Kannada Actor Shiva Rajkumar honoring in London

ಲಂಡನ್ ನಲ್ಲಿ ಪ್ರದರ್ಶನಗೊಳ್ಳುವ 'ಶಿವಲಿಂಗ' ಚಿತ್ರದ ಪ್ರೀಮಿಯರ್ ಶೋನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ವೇದಿಕಾ, ನಿರ್ದೇಶಕ ಪಿ.ವಾಸು ಹಾಗೂ ನಿರ್ಮಾಪಕ ಕೆ.ಎ ಸುರೇಶ್ ಅವರು ಹಾಜರಿರುತ್ತಾರೆ. ಶಿವಣ್ಣ ಅವರ ಜೊತೆ ಅವರ ಮಗಳು ಹಾಜರಿರುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

English summary
Kannada Actor Shiva Rajkumar honoring in London. The makers of 'Shivalinga' have achieved a first in Sandalwood a full-fledged premiere before an audience in London on March 19. Kannada Actor Shiva Rajkumar, Actress Vedika in the lead role. The movie is directed by P.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada