»   » ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ

ಚಿತ್ರಗಳು : ಬಸವಣ್ಣಗೆ ನಮಿಸಿದ ಶಿವಣ್ಣಗೆ ಲಂಡನ್ನಿನಲ್ಲಿ ಸನ್ಮಾನ

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ತಮ್ಮ 'ಶಿವಲಿಂಗ' ಚಿತ್ರದ ಪ್ರೀಮಿಯರ್ ಶೋ ಗಾಗಿ ಲಂಡನ್ ಗೆ ತೆರಳಿರುವ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿ ಬೀಟಲ್ಲಿ ಹೇಳಿದ್ವಿ ತಾನೆ.

  ಇದೀಗ ಮಾರ್ಚ್ 19, ಶನಿವಾರದಂದು ಲಂಡನ್ ನ ಲ್ಯಾಂಬೆತ್ ನಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ವಿಶ್ವಮಟ್ಟದ ಅತ್ಯುನ್ನತ ಗೌರವ ಸಂದಿದೆ.[ಲಂಡನ್ ಗೆ ಹಾರಿದ ಶಿವಣ್ಣ: ಪುನೀತ್, ಯಶ್ ಏನಂದ್ರು ಗೊತ್ತಾ?]

  ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂತರ, ಇದೇ ಮೊದಲ ಬಾರಿಗೆ ನಮ್ಮ ಕನ್ನಡಿಗರ ಹೆಮ್ಮೆಯ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಲಂಡನ್ ನ ಬಸವಣ್ಣ ಪುತ್ಥಳಿಯ ಮುಂಭಾಗ ಗೌರವದಿಂದ ಸನ್ಮಾನ ಮಾಡಲಾಗಿದೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಮಗಳು ನಿರುಪಮಾ, ಅಳಿಯ ದಿಲೀಪ್ ಸಣ್ಣ ಮಗಳು ನಿವೇದಿತಾ ಹಾಗೂ ಶಿವಲಿಂಗ ಚಿತ್ರತಂಡದ ಜೊತೆಗೆ ಲಂಡನ್ ಗೆ ಹಾರಿದ್ದರು.[ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ]

  ಲಂಡನ್ ನಲ್ಲಿ ಶಿವಣ್ಣ ಅವರಿಗೆ ಭರ್ಜರಿಯಾಗಿ ಸನ್ಮಾನಿಸಲಾದ ಚಿತ್ರಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಶಿವಣ್ಣನಿಗೆ ಸನ್ಮಾನ

  ಲ್ಯಾಂಬೆತ್ ಲಂಡನ್ ನ ಬಸವಣ್ಣ ಪುತ್ಥಳಿಯ ಮುಂಭಾಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಗಳಿಗೆ ಅದ್ಧೂರಿಯಾಗಿ ಸನ್ಮಾನ ನಡೆಸಲಾಯಿತು.[ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ']

  ನೀರಜ್ ಪಾಟೀಲ್

  ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 30 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಲ್ಯಾಂಬೆತ್ ಲಂಡನ್ ನ ಮಾಜಿ ಮೇಯರ್ ಹಾಗೂ ಬಸವೇಶ್ವರ ಫೌಂಡೇಶನ್ ನ ಅಧ್ಯಕ್ಷ ಡಾ.ನೀರಜ್ ಪಾಟೀಲ್ ಅವರು ಶಿವರಾಜ್ ಕುಮಾರ್ ಅವರಿಗೆ ವಿಷನೇರ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.[ಚಿತ್ರರಂಗದಲ್ಲಿ ಶಿವಣ್ಣನಿಗಿರುವ ಬೇಡಿಕೆಯ ಹಿಂದಿರುವ ಗುಟ್ಟೇನು]

  ಸ್ಟೈಲಿಷ್ ಶಿವಣ್ಣ

  ಲಂಡನ್ ನಲ್ಲಿ ಶಿವಣ್ಣ ಅವರು ಸೂಟು ಧರಿಸಿ ಸಖತ್ ಸ್ಟೈಲಿಷ್ ಲುಕ್ ನಲ್ಲಿ ಮಿಂಚಿದ್ದರು ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ.

  ಫ್ಯಾಮಿಲಿ ಜೊತೆ ಶಿವಣ್ಣ

  ತಮ್ಮ ಮುದ್ದಾದ ಕುಟುಂಬದ ಜೊತೆ ಶಿವಣ್ಣ ಲಂಡನ್ ನಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದು ಹೀಗೆ.

  ಕನ್ನಡಿಗರೊಂದಿಗೆ ಶಿವಣ್ಣ

  ಲಂಡನ್ ನ ಕನ್ನಡಿಗರ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಫೋಸ್ ಕೊಟ್ಟ ಪರಿ ನೋಡಿ.

  ಅಭಿಮಾನಿಗಳೊಂದಿಗೆ ಶಿವಣ್ಣ

  ಸನ್ಮಾನ ಸ್ವೀಕರಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ತದನಂತರ ತಮ್ಮ ಅಭಿಮಾನಿಗಳೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡರು.

  ಲಂಡನ್ ಕನ್ನಡಿಗರ ಸಂಭ್ರಮ

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಮಾಡಿರುವ ಸನ್ಮಾನ ಅವರಿಗೆ ಸೂಚಿಸಿರುವ ಗೌರವವಲ್ಲ, ಬದ್ಲಾಗಿ ಇಷ್ಟೊಂದು ಕನ್ನಡಿಗರ ಪ್ರೀತಿಗೆ ನಮ್ಮ ಚಿಕ್ಕ ಕಾಣಿಕೆಯಷ್ಟೇ. ಈ ಮೂಲಕ ನಾವು ಅಭಿಮಾನಕ್ಕೆ ಗೌರವ ಸಲ್ಲಿಸಿದ್ದೇವೆ ಎನ್ನುತ್ತಾರೆ ಲಂಡನ್ ಕನ್ನಡಿಗರು.

  ಶಿವಣ್ಣನ ಹೆಸರಿನಲ್ಲಿ ಕಾರು

  ಶಿವಣ್ಣನ ಹೆಸರಿನಲ್ಲಿರುವ ಸುಂದರ ಲಕ್ಷುರಿ ಕಾರು ನೋಡಿ.

  ನಿರ್ಮಾಪಕ ಶ್ರೀಕಾಂತ್ ಜೊತೆ ಶಿವಣ್ಣ

  ನಿರ್ಮಾಪಕರಾದ ಶ್ರೀಕಾಂತ್ ಅವರ ಜೊತೆ ಶಿವಣ್ಣ ಅವರು ಫೋಸ್ ಕೊಟ್ಟಿದ್ದು.

  ಶಿವಣ್ಣನ ಸೆಲ್ಫಿ

  ಬಸವಣ್ಣನ ಪುತ್ಥಳಿಯ ಮುಂದೆ ಶಿವರಾಜ್ ಕುಮಾರ್ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು.

  ಮೋದಿ ನಂತರ ಶಿವಣ್ಣ

  ಬಸವಣ್ಣನ ಪುತ್ಥಳಿಯನ್ನು ನರೇಂದ್ರ ಮೋದಿ ಅವರು ಅನಾವರಣ ಮಾಡಿದ ನಂತರ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಸವಣ್ಣನ ಪುತ್ಥಳಿಯ ಮುಂದೆ ಸನ್ಮಾನಿತರಾಗಿದ್ದಾರೆ. (ಚಿತ್ರಕೃಪೆ: ಫೇಸ್ ಬುಕ್ಕ್)

  'ಶಿವಲಿಂಗ' ಪ್ರದರ್ಶನ

  ಲಂಡನ್ ನ ಬಯ್ಲಿನ್ ಸಿನಿಮಾಸ್ ನಲ್ಲಿ ರೂಬಿನ್ ರಾಜ್ ಪ್ರೊಡಕ್ಷನ್ಸ್ ವತಿಯಿಂದ 'ಶಿವಲಿಂಗ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವಣ್ಣ ಅವರ ಜೊತೆ ನಿರ್ದೇಶಕ ಪಿ.ವಾಸು ಮತ್ತು ಕೆ.ಪಿ. ಶ್ರೀಕಾಂತ್ ಅವರು ಹಾಜರಿದ್ದರು.

  ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಶಿವಣ್ಣ

  ಡಾ. ನೀರಜ್ ಪಾಟೀಲ್ ಮತ್ತು ಬಸವಣ್ಣ ಫೌಂಡೇಶನ್ ನ ಸದಸ್ಯರು ಶಿವರಾಜ್ ಕುಮಾರ್ ಮತ್ತು ಅವರ ಕುಟುಂಬವನ್ನು ವಿಶೇಷ ಪ್ರವಾಸ ಎಂದು ಲಂಡನ್ ನ ಬ್ರಿಟಿಷ್ ಪಾರ್ಲಿಮೆಂಟ್ ಗೆ ಕರೆದೊಯ್ದಿದ್ದರು.

  ಬಿಬಿಸಿಯಲ್ಲಿ ಲೈವ್ ಶೋ

  ಲಂಡನ್ ನ ಪ್ರತಿಷ್ಠಿತ ಬಿ.ಬಿ.ಸಿ ರೇಡಿಯೋ ಸ್ಟೇಷನ್ ನಲ್ಲಿ ಲೈವ್ ಶೋ ಹಾಗೂ ಸಂದರ್ಶನ ಕೊಟ್ಟ ಪ್ರಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಸೆಂಚುರಿ ಸ್ಟಾರ್ ಶಿವಣ್ಣ ಅವರು ಭಾಜನರಾಗಿದ್ದಾರೆ.

  English summary
  Hat-trick Hero Shivaraj Kumar paid tribute to the 12th century Indian philosopher and social reformer Basaveshwara during his visit to London on 19thMarch 2016. His wife Mrs. Geeta Shivaraj Kumar and daughters Nivedita and Niroopama also accompanied him.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more