For Quick Alerts
  ALLOW NOTIFICATIONS  
  For Daily Alerts

  ಫೇಸ್ ಬುಕ್, ಟ್ವಿಟ್ಟರ್ ಆಯ್ತು ಶಿವಣ್ಣ ಈಗ ಇನ್ಸ್ಟಾಗ್ರಾಮ್ ಗೆ ಎಂಟ್ರಿ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದರು. ಅಭಿಮಾನಿಗಳ ಬೇಡಿಕೆಯ ಮೇರೆಗೆ ಶಿವರಾಜ್ ಕುಮಾರ್ ಟ್ವಿಟ್ಟರ್ ಮತ್ತು ಪೇಸ್ ಬುಕ್ ಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಲಂಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಇಂದು(ಜುಲೈ 18) ಇನ್ಸ್ಟಾಗ್ರಾಮ್ ಗೂ ಎಂಟ್ರಿ ಕೊಟ್ಟಿದ್ದಾರೆ.

  ಸದ್ಯ ಅತೀ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಗೆ ಸೆಂಚುರಿ ಸ್ಟಾರ್ ಎಂಟ್ರಿ ಕೊಡುತ್ತಿದ್ದಂತೆ ಸಾಕಷ್ಟು ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟ ವಿಚಾರವನ್ನು ಹ್ಯಾಟ್ರಿಕ್ ಹೀರೋ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಈ ಮೂವರನ್ನ ಬಿಟ್ಟು ಉಳಿದವರಿಗೆಲ್ಲಾ Faceappನಲ್ಲಿ ವಯಸ್ಸಾಗಿದೆ.!

  ಶಿವಣ್ಣ ಇನ್ಸ್ಟಾಗ್ರಾಮ್ ಹೆಸರು ನಿಮ್ಮಶಿವರಾಜ್ ಕುಮಾರ್ ಎಂದು ಇಂಗ್ಲೀಷ್ ನಲ್ಲಿದೆ. ಇನ್ಸ್ಟಾದಲ್ಲಿ ಶಿವಣ್ಣ ಲಂಡನ್ ನ ಒಂದಿಷ್ಟು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇಂದು ಶಿವಣ್ಣ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಮತ್ತಷ್ಟು ಫೈಟ್ ಮತ್ತು ಡ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

  ಬೆಂಗಳೂರಿಗೆ ವಾಪಾಸ್ ಆಗಿ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುವ ಕ್ಷಣಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಶಿವಣ್ಣ ಅವರಿಗೆ ಬಲಭುಜದ ಸರ್ಜರಿ ಆಗಿದ್ದು ಸದ್ಯ ರೆಸ್ಟ್ ನಲ್ಲಿದ್ದಾರೆ. ಇದೆ ತಿಂಗಳು 23ರಂದು ಶಿವಣ್ಣ ಬೆಂಗಳೂರಿಗೆ ವಾಪಾಸ್ ಆಗುವ ಸಾಧ್ಯತೆ ಇದೆ. ಆನಂತರ ಒಂದಿಷ್ಟು ದಿನಗಳು ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  English summary
  Kannada actor Shivaraj Kumar entered to Instagram. Shivaraj Kumar undergo shoulder surgery in London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X