For Quick Alerts
  ALLOW NOTIFICATIONS  
  For Daily Alerts

  ಆಪರೇಷನ್ ಬಳಿಕ ಮೊದಲ ಫೋಟೋ ಶೇರ್ ಮಾಡಿದ ಶಿವರಾಜ್ ಕುಮಾರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಲಭುಜದ ನೋವಿನಿಂದ ಬಳಲುತ್ತಿದ್ದರು. ನಿನ್ನೆ(ಜುಲೈ 11) ಲಂಡನ್ ನಲ್ಲಿ ಸರ್ಜರಿ ನಡೆಸಿಕೊಂಡಿದ್ದು, ಆಪರೇಶನ್ ಸಕ್ಸಸ್ ಆಗಿದೆ. ಶಿವಣ್ಣ ದೂರದ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದು ಅಭಿಮಾನಿಮಾನಿಗಳಿಗೆ ಆತಂಕ ಹೆಚ್ಚಾಗಿತ್ತು. ಶಿವಣ್ಣ ಅವರನ್ನು ನೋಡುವವರೆಗು ಅಭಿಮಾನಿಗಳಿಗೆ ಸಮಾಧಾನ ಇರಲಿಲ್ಲ.

  ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಿವಣ್ಣ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಫೇಸ್ ಬುಕ್ ಖಾತೆ ತೆರೆದಿರುವ ಶಿವಣ್ಣ ಮೊದಲ ಪೋಸ್ಟ್ ಮಾಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಶಿವಣ್ಣ ಮೊದಲ ಬಾರಿಗೆ ಸರ್ಜರಿ ಬಳಿಕ ಶಿವಣ್ಣ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  ಕೊನೆಗೂ ಸೋಷಿಯಲ್ ಮೀಡಿಯಾಗೆ ಬಂದ ಸೆಂಚುರಿ ಸ್ಟಾರ್

  ಬಲ ಕೈಯಿಗೆ ಬ್ಯಾಂಡೇಜ್ ಹಾಕಿರುವ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೂಲಕ ಸೇಫ್ ಆಗಿದ್ದೀನಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

  "ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe. ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ ಈ official facebook pageನಲ್ಲಿ LIVE ಬರುವೆ" ಎಂದು ಹೇಳಿದ್ದಾರೆ.

  ಹೌದು, ಶಿವಣ್ಣ ಇಂದು ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ತೆರೆಯುತ್ತಿದ್ದಂತೆ ಇಂದು ರಾತ್ರಿ ಫೇಸ್ ಬುಕ್ ಲೈವ್ ಬರುತ್ತಿದ್ದಾರೆ. ಕಾರಣ ನಾಳೆ ಶಿವಣ್ಣ ಹುಟ್ಟುಹಬ್ಬ. ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಿವಣ್ಣ ಫೇಸ್ ಬುಕ್ ಮೂಲಕ ಅಭಿಮಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು 20 ದಿನಗಳು ಲಂಡನ್ ನಲ್ಲಿ ವಿಶ್ರಾಂತಿ ಪಡೆಯಲಿದ್ದು ನಂತರ ವಾಪಾಸ್ ಆಗಲಿದ್ದಾರೆ.

  English summary
  Kannada actor Shivaraj Kumar Shared a photo after his shoulder surgery. Shivaraj Kumar will come to live in the night at 12 AM his official Facebook page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X