For Quick Alerts
  ALLOW NOTIFICATIONS  
  For Daily Alerts

  ಮಲ್ಯ ಆಸ್ಪತ್ರೆ ಮುಂದೆ ಗದ್ದಲ, ಗಲಾಟೆ, ಪಿಕ್ ಪಾಕೆಟ್

  By Harshitha
  |

  ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್ ದಾಖಲಾಗಿದ್ದಾರೆ. ಸುದ್ದಿ ಕೇಳಿದ ಕೂಡಲೆ, ಎಲ್ಲಾ ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ಮಿತ್ರರು ಮಲ್ಯ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

  ಹಾಗೆ, ರಾಜ್ ಕುಮಾರ್ ಕುಟುಂಬದ ಸದಸ್ಯರು, ಕನ್ನಡ ಚಿತ್ರರಂಗದ ಗಣ್ಯರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದರಿಂದಾಗಿ ವಿಠಲ್ ಮಲ್ಯ ರೋಡ್ ನಲ್ಲಿ ಜನವೋ ಜನ. ಫುಲ್ ರೋಡ್ ಟ್ರಾಫಿಕ್ ಜ್ಯಾಮ್. [ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?]

  ನೂರಾರು ಸಂಖ್ಯೆಯಲ್ಲಿ ಶಿವಣ್ಣನ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಎಲ್ಲರಿಗೂ ಆಸ್ಪತ್ರೆ ಒಳಗೆ ಪ್ರವೇಶವಿಲ್ಲ. ಆದ್ದರಿಂದ ಕೆಲ ಅಭಿಮಾನಿಗಳು ಆಸ್ಪತ್ರೆ ಮುಂದೆ ಗದ್ದಲದ ವಾತಾವರಣ ಸೃಷ್ಟಿಸಿದರು. [ಶಿವಣ್ಣನಿಗೆ ಲಘು ಹೃದಯಾಘಾತ : ಅಣ್ಣಾವ್ರ ಮಗನಿಗೆ ಶಸ್ತ್ರಚಿಕಿತ್ಸೆ?]

  ಇನ್ನು ಪುನೀತ್ ರಾಜ್ ಕುಮಾರ್ ರವರ ಆಪ್ತ ಸಹಾಯಕ, ನಿರ್ಮಾಪಕ ರಾಜ್ ಕುಮಾರ್ ರಿಗೂ ಪೊಲೀಸರು ಪ್ರವೇಶ ನಿರಾಕರಿಸಿದ್ದರಿಂದ ಕೆಲಕಾಲ ಮಾತಿನ ಚಕಮಕಿ ನಡೆಯಿತು.

  ಗೊಂದಲದ ವಾತಾವರಣವನ್ನೇ ಲಾಭ ಮಾಡಿಕೊಂಡ ಓರ್ವ ವ್ಯಕ್ತಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೇಬಿಗೆ ಕತ್ರಿ ಹಾಕುವುದಕ್ಕೆ ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.

  English summary
  Kannada Actor Shivarajkumar is admitted to Mallya Hospital today (October 6th) due to minor heart attack. Since, fans are not allowed inside the hospital, few of Shivarajkumar's fans created a havoc in front of Mallya Hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X