For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?

  By Harshitha
  |

  ಇಂದು ಬೆಳ್ಳಂಬೆಳಗ್ಗೆಯೇ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅಭಿಮಾನಿಗಳ ಕಿವಿಗೆ ಶಾಕಿಂಗ್ ನ್ಯೂಸ್ ಬರಸಿಡಿಲಿನಂತೆ ಬಡಿದಿದೆ.

  ನಟ ಶಿವರಾಜ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಣ್ಣಾವ್ರ ಮಗನಿಗೆ ಲಘು ಹೃದಯಾಘಾತವಾಗಿದೆ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿದೆ. [ಶಿವಣ್ಣನಿಗೆ ಲಘು ಹೃದಯಾಘಾತ : ಅಣ್ಣಾವ್ರ ಮಗನಿಗೆ ಶಸ್ತ್ರಚಿಕಿತ್ಸೆ?]

  ಶಿವರಾಜ್ ಕುಮಾರ್ ಗೆ ಆಂಜಿಯೋಗ್ರಾಮ್ ನಡೆಸಿದ ಮಲ್ಯ ಆಸ್ಪತ್ರೆ ವೈದ್ಯ ವಿ.ಕೆ.ಶ್ರೀನಿವಾಸ್, ಶಿವಣ್ಣನ ಆರೋಗ್ಯದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

  ಶಿವಣ್ಣ ಫಿಟ್ ಅಂಡ್ ಫೈನ್

  ಶಿವಣ್ಣ ಫಿಟ್ ಅಂಡ್ ಫೈನ್

  ಶಿವಣ್ಣ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ತೊಂದರೆ ಇಲ್ಲ. ಗಾಬರಿ ಪಡುವಂತದ್ದು ಏನೂ ಆಗಿಲ್ಲ ಅಂತ ಮಲ್ಯ ಆಸ್ಪತ್ರೆ ವೈದ್ಯ ವಿ.ಕೆ.ಶ್ರೀನಿವಾಸ್ ಸ್ಪಷ್ಟ ಪಡಿಸಿದ್ದಾರೆ.[ನಟ ಶಿವರಾಜ್ ಕುಮಾರ್ ಅಸ್ವಸ್ಥ: ಮಲ್ಯ ಆಸ್ಪತ್ರೆಗೆ ದಾಖಲು]

  ಶಿವಣ್ಣನಿಗೆ ಲಘು ಹೃದಯಾಘಾತವಾಗಿತ್ತಾ?

  ಶಿವಣ್ಣನಿಗೆ ಲಘು ಹೃದಯಾಘಾತವಾಗಿತ್ತಾ?

  'ECGಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಹೃದಯಾಘಾತ ಅಂತ ಸಸ್ಪೆಕ್ಟ್ ಮಾಡುವುದು ಸಹಜ. ಆದ್ರೆ, ಶಿವಣ್ಣನ ಹೃದಯ ಆರೋಗ್ಯವಾಗಿದೆ. ಅವರು ಅಥ್ಲೀಟ್ ಪರ್ಸನ್. ಸೋ, ಅವರ ಹೃದಯದಲ್ಲಿ ಯಾವುದೇ ಸಮಸ್ಯೆ ಇಲ್ಲ'' ಅಂತ ವಿ.ಕೆ.ಶ್ರೀನಿವಾಸ್ ಹೇಳಿದರು.

  ಶಿವಣ್ಣನ ಹೃದಯದ ರಕ್ತನಾಳ ಬ್ಲಾಕ್ ಆಗಿತ್ತಾ?

  ಶಿವಣ್ಣನ ಹೃದಯದ ರಕ್ತನಾಳ ಬ್ಲಾಕ್ ಆಗಿತ್ತಾ?

  ''ಆಂಜಿಯೋಗ್ರಾಮ್ ಮಾಡಿದ್ವಿ. ಬ್ಲಾಕೇಜ್ ಸಸ್ಪೆಕ್ಟ್ ಮಾಡಿದ್ವಿ. ಅದೃಷ್ಟವಶಾತ್ ಬ್ಲಾಕ್ಸ್ ಇಲ್ಲ. ಈಗ ಮೆಡಿಕೇಷನ್ ಶುರುಮಾಡಿದ್ದೀವಿ. ಎಲ್ಲವನ್ನ ಮೆಡಿಕೇಷನ್ ನಲ್ಲೇ ಕ್ಲಿಯರ್ ಮಾಡ್ತೀವಿ. ಸೀರಿಯಸ್ ಏನು ಇಲ್ಲ'' ಅಂತ ವಿ.ಕೆ.ಶ್ರೀನಿವಾಸ್ ತಿಳಿಸಿದರು.

  ಕಾರಣವೇನು?

  ಕಾರಣವೇನು?

  ಮಲ್ಯ ಆಸ್ಪತ್ರೆ ವೈದ್ಯರು ಹೇಳುವ ಪ್ರಕಾರ, ಅತಿಯಾದ ಸ್ಪ್ರೆಸ್ ಮತ್ತು ಪ್ರೆಶರ್ ಈ ಸ್ಥಿತಿಗೆ ಕಾರಣವಾಗಿದೆ.

  ಬೆಡ್ ರೆಸ್ಟ್ ಅವಶ್ಯಕ.!

  ಬೆಡ್ ರೆಸ್ಟ್ ಅವಶ್ಯಕ.!

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಸದ್ಯ ವಿಶ್ರಾಂತಿ ಅಗತ್ಯವಿದೆ. ಎರಡು ದಿನಗಳ ಕಾಲ ಶಿವಣ್ಣರನ್ನ ಅಬ್ಸರ್ವೇಷನ್ ನಲ್ಲಿಡಲು ಮಲ್ಯ ಆಸ್ಪತ್ರೆ ವೈದ್ಯರು ನಿರ್ಧರಿಸಿದ್ದಾರೆ.

  English summary
  V.K.Srinivas, Mallya Hospital Doctor who is giving treatment to Kannada Actor Shivarajkumar has reacted to the media regarding the Actor's health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X