»   » ಮಾಲೆ ಧರಿಸಿ ಅಯ್ಯಪ್ಪ ವ್ರತಧಾರಿಯಾದ ಹ್ಯಾಟ್ರಿಕ್ ಹೀರೋ

ಮಾಲೆ ಧರಿಸಿ ಅಯ್ಯಪ್ಪ ವ್ರತಧಾರಿಯಾದ ಹ್ಯಾಟ್ರಿಕ್ ಹೀರೋ

Posted By:
Subscribe to Filmibeat Kannada

ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿನ್ನೆ (ಜನವರಿ 27) ಯಿಂದ ಅಯ್ಯಪ್ಪ ವ್ರತಧಾರಿಯಾಗಿದ್ದಾರೆ. ಬೆಂಗಳೂರಿನ ದೇಗುಲ ಒಂದರಲ್ಲಿ ಶಿವಣ್ಣ ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಜೊತೆಗಿದ್ದರು.

ಕಳೆದ ಕೆಲವು ವರ್ಷಗಳಿಂದ ನಟ ಶಿವರಾಜ್ ಕುಮಾರ್ ಅವರು ಶಬರಿಮಲೆಗೆ ಅಯ್ಯಪ್ಪ ದರ್ಶನಕ್ಕೆ ಹೋಗುತ್ತಿದ್ದಾರೆ. ಪ್ರತೀ ಬಾರಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೊತೆಯಾಗುತ್ತಿದ್ದರು.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]

Kannada Actor Shivarajkumar wears Ayyappa Maala

ಆದರೆ ಈ ಬಾರಿ ನಟ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರು ಮಾಲೆ ಧರಿಸಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ಅವರು 'ಚಕ್ರವ್ಯೂಹ' ಸಿನಿಮಾದಲ್ಲಿ ಬ್ಯುಸಿಯಾಗಿರೋದ್ರಿಂದ ಅವರಿಗೂ ಈ ಬಾರಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಿವಣ್ಣ ಅವರು ಒಬ್ಬರೇ ಶಬರಿಮಲೆ ದರುಶನಕ್ಕೆ ಹೋಗುತ್ತಿದ್ದಾರೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

Kannada Actor Shivarajkumar wears Ayyappa Maala

ಅಂದಹಾಗೆ ಶಿವರಾಜ್ ಕುಮಾರ್ ಅವರು ಕೆಲ ದಿನಗಳ ಹಿಂದೆಯೇ ಮಾಲೆ ಹಾಕಬೇಕಾಗಿತ್ತು ಆದರೆ 'ಐಐಎಫ್ಎ' ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈದ್ರಾಬಾದ್ ಗೆ ತೆರಳಿದ್ದರಿಂದ ನಿನ್ನೆ ಮಾಲೆ ಧರಿಸಿದ್ದಾರೆ. ಫೆಬ್ರವರಿ 11ರ ವರೆಗೂ ವ್ರತದಲ್ಲಿದ್ದು, ಫೆಬ್ರವರಿ 12 ರಂದು ಶಬರಿಮಲೆಗೆ ತೆರಳಲಿದ್ದಾರೆ.

    English summary
    Kannada Actor Shivarajkumar wears Ayyappa Mala, Sandalwood news in Kannada, ಅಯ್ಯಪ್ಪ ಮಾಲೆ ಧರಿಸಿದ ಕನ್ನಡ ನಟ ಶಿವರಾಜ್ ಕುಮಾರ್

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada