»   » ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವರಾಜ್ ಕುಮಾರ್ ಹೃದಯ

ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವರಾಜ್ ಕುಮಾರ್ ಹೃದಯ

Posted By:
Subscribe to Filmibeat Kannada

'ಅಭಿಮಾನಿಗಳೇ ನಮ್ಮನೇ ದೇವ್ರು' ಎಂಬುದು ಡಾ.ರಾಜ್ ಕುಮಾರ್ ಅವರ ಧ್ಯೇಯವಾಗಿತ್ತು. ಅದರಂತೆ ಅಣ್ಣಾವ್ರ ಮಕ್ಕಳು ಕೂಡ ಅವರ ಅಭಿಮಾನಿಗಳನ್ನ ನೋಡಿಕೊಳ್ಳುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆಗೆ ಸಾಕ್ಷಿಯಾದರು ಶಿವರಾಜ್ ಕುಮಾರ್ ಮತ್ತು ಅವರ ಅಭಿಮಾನಿ.

ಹೌದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೂ ಶಿವಣ್ಣನನ್ನ ನೋಡಬೇಕು ಎಂದು ಕನವರಿಸುತ್ತಿದ್ದ ಅಭಿಮಾನಿಗೆ, ಹ್ರ್ಯಾಟ್ರಿಕ್ ಹೀರೋ ನೆರವಾಗಿದ್ದಾರೆ. ಬುಧವಾರ ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ಆಂಬುಲೆನ್ಸ್ ಮೂಲಕ ಕರೆಸಿಕೊಂಡ ಶಿವರಾಜ್ ಕುಮಾರ್, ತಮ್ಮಿಂದ ಆಗುವ ಸಹಾಯವನ್ನ ನಾವು ಮಾಡುತ್ತೇವೆ ಎಂದು ಆ ಅಭಿಮಾನಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಮೈಸೂರು ಮೂಲದ ಜಯಕುಮಾರ್!

ಮೈಸೂರು ಮೂಲದ ಜಯಕುಮಾರ್ ಎಂಬ ಯುವಕ ಕಳೆದ ಕೆಲ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ ಕುಟುಂಬ ವರ್ಗ ಕಷ್ಟ ಪಡುತ್ತಿದೆ. ಹೀಗಿರುವಾಗ, ಜಯಕುಮಾರ್ ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನ ನೋಡಬೇಕು ಎಂಬ ತಮ್ಮ ಕೊನೆ ಆಸೆಯನ್ನ ಈಡೇರಿಸುವಂತೆ ಬೇಡಿಕೆಯಿಟ್ಟಿದ್ದರು.

'ಅಭಿಮಾನ'ಕ್ಕಾಗಿ ಮಿಡಿದ ಸೆಂಚುರಿ ಸ್ಟಾರ್!

ಈ ವಿಷ್ಯ ತಿಳಿದ ಶಿವರಾಜ್ ಕುಮಾರ್, ತಕ್ಷಣ ಜಯಕುಮಾರ್ ಅವರನ್ನ ಭೇಟಿ ಮಾಡಲು ಮುಂದಾದರು. ಮೈಸೂರಿನಿಂದ ವಿಶೇಷ ಆಂಬುಲೇನ್ಸ್ ವ್ಯವಸ್ಥೆ ಮಾಡಿ, ಅಭಿಮಾನಿಯನ್ನ ಬೆಂಗಳೂರಿಗೆ ಕರೆಸಿಕೊಂಡರು.

ಅಭಿಮಾನಿಯ ಆರೋಗ್ಯ ವಿಚಾರಿಸಿದ ಶಿವಣ್ಣ!

ಬೆಂಗಳೂರಿನ ಎಚ್.ಎ.ಎಲ್ ಬಳಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಶಿವರಾಜ್ ಕುಮಾರ್, ತಮ್ಮ ಅಭಿಮಾನಿಯನ್ನ ಅಲ್ಲಿಗೆ ಕರೆಸಿಕೊಂಡು ಆ ಯುವಕನ ಆರೋಗ್ಯ ವಿಚಾರಿಸಿದರು. ಜೊತೆಗೆ ಆ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅಭಿಮಾನಿಗೆ ಹ್ಯಾಟ್ರಿಕ್ ಹೀರೋ ಸಹಾಯ ಹಸ್ತ!

ಈ ವೇಳೆ ಮಾಧ್ಯಮದವರು ಜೊತೆ ಮಾತನಾಡಿದ ಶಿವರಾಜ್ ಕುಮಾರ್, ಜಯಕುಮಾರ್ ಅವರ ಆರೋಗ್ಯ ಸುಧಾರಿಸಿಲು ಆರ್ಥಿಕವಾಗಿ ನೆರವು ನೀಡುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ, ಸದ್ಯ, ಶಿವಣ್ಣ ಅಭಿನಯಿಸುತ್ತಿರುವ 3 ಚಿತ್ರದ ನಿರ್ಮಾಪಕರಿಂದಲೂ ಜಯಕುಮಾರ್ ಗೆ ಕೈಲಾಗುವ ಸಹಾಯ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.

ಶಿವಣ್ಣನನ್ನ ನೋಡಿ ಖುಷಿಯಾದ ಅಭಿಮಾನಿ!

ಇನ್ನೂ ತಾನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದಿದ್ದರು, ಶಿವರಾಜ್ ಕುಮಾರ್ ನೋಡಬೇಕು ಎಂದಿದ್ದ ಅಭಿಮಾನಿ, ಕೊನೆಗೂ ತನ್ನ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಬುಧವಾರ ಬೆಂಗಳೂರಿಗೆ ಬಂದು ಶಿವರಾಜ್ ಕುಮಾರ್ ಅವರನ್ನ ನೋಡಿ, ಖುಷಿಯಿಂದ ಮೈಸೂರಿಗೆ ವಾಪಸ್ಸಾಗಿದ್ದಾರೆ.

English summary
Actor Shivarajakumar has announced full financial aid to his fan Jayakumar, who is suffering from Kidney failure. Jayakumar who hails from Mysore, is a die-hard fan of the actor and had announced his desire to meet the actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada