For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ವಿರುದ್ದ ಶಿವಣ್ಣ ಮತ್ತೆ ಶಿವತಾಂಡವ

  |

  ಡಬ್ಬಿಂಗ್ ಸಂಸ್ಕೃತಿಯ ವಿರುದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಮ್ಮೆ ಮಗುದೊಮ್ಮೆ ಹರಿಹಾಯ್ದಿದ್ದಾರೆ. ಡಬ್ಬಿಂಗ್ ಬೇಕೆಂದು ಬಯಸುವುವರು ಕೆಲವರು ಮಾತ್ರ, ಅಂಥವರಿಗೆ ಕನ್ನಡ ಚಿತ್ರರಂಗಕ್ಕೆ ಇದರಿಂದಾಗುವ ಹಾನಿಯ ಬಗ್ಗೆ ತಿಳುವಳಿಕೆ ಇದೆಯೇ ಎಂದಿದ್ದಾರೆ.

  ಪಬ್ಲಿಕ್ ಟಿವಿಯಲ್ಲಿ ಎಚ್ ಆರ್ ರಂಗನಾಥ್ ಅವರಿಗೆ ನೀಡಿದ ಸಂದರ್ಶನದಲ್ಲಿ (ಶನಿವಾರ, ಆ 25) ಮಾತನಾಡುತ್ತಿದ್ದ ಶಿವಣ್ಣ, ಡಬ್ಬಿಂಗ್ ಚಿತ್ರಕ್ಕೆ ಅನುಮತಿ ನೀಡುವುದಾದರೆ ಬೇರೆ ಭಾಷೆಯ ಚಿತ್ರಗಳು ಕೂಡಾ ಕನ್ನಡ ಭಾಷೆಯಲ್ಲೇ ಬಿಡುಗಡೆಯಾಗಲಿ ಎಂದು ಪ್ರತಿಪಾದಿಸಿದರು.

  ಹಿಂದಿ, ತಮಿಳು, ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ, ಮೂಲ ಭಾಷೆಯಲ್ಲಿ ಯಾಕೆ ಬಿಡುಗಡೆಯಾಗ ಬೇಕು? ಇತರ ಭಾಷೆಯ ಚಿತ್ರಗಳು ಕನ್ನಡದಲ್ಲೂ ಡಬ್ ಆಗಿ, ಮೂಲ ಭಾಷೆಯಲ್ಲೂ ಬಿಡುಗಡೆಯಾದರೆ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಏನಾದಾರೂ ಸಿಗುತ್ತಾ ಎಂದು ಪ್ರಶ್ತ್ನಿಸಿದ್ದಾರೆ.

  ನಾವು ಡಬ್ಬಿಂಗ್ ವಿರೋಧಿಸುತ್ತಿದ್ದೇವೆ ಅಂದರೆ ಅದರ ಹಿಂದೆ ನಮ್ಮ ಚಿತ್ರರಂಗದ ಹಿತದೃಷ್ಟಿಯಿದೆ ಎನ್ನುವುದನ್ನು ಡಬ್ಬಿಂಗ್ ಪರವಿರುವವರು ಅರಿಯಬೇಕು ಅಂದು ಶಿವಣ್ಣ ಸಂದರ್ಶನದಲ್ಲಿ ಹೇಳಿದ್ದಾರೆ.

  ನಮ್ಮದು ಚಿಕ್ಕ ಮಾರುಕಟ್ಟೆ, ಅದರಲ್ಲಿ ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೆ ನಮ್ಮ ಚಿತ್ರಗಳು ಗತಿಯೇನು. ನಮ್ಮ ಚಿತ್ರರಂಗ ಈಗ ಸ್ವಲ್ಪ ಸುಧಾರಿಸಿ ಕೊಳ್ಳುತ್ತಿದೆ. ಇದಕ್ಕೆ ಕಲ್ಲು ಹಾಕಬೇಡಿ, ಹಾಕಕ್ಕೆ ಬರುವವರನ್ನು ತಡಿಯಿರಿ ಎಂದು ಶಿವಣ್ಣ ಕೇಳಿಕೊಂಡಿದ್ದಾರೆ.

  ಡಬ್ಬಿಂಗ್ ವಿರುದ್ದ ಶಿವಣ್ಣ ಅಲ್ಲದೆ ಕನ್ನಡ ಚಿತ್ರರಂಗ ಕೂಡಾ ವಿರೋಧ ವ್ಯಕ್ತ ಪಡಿಸಿತ್ತು. ಡಬ್ಬಿಂಗ್ ಮೂಲಕ ರಾಜ್ ಅವರ ಮಕ್ಕಳನ್ನು ಬಲಿ ಹಾಕುವ ಷಡ್ಯಂತ್ರ ಎಂದು ನವರಸನಾಯಕ ಜಗ್ಗೇಶ್ ಕೂಡಾ ಗಂಭೀರ ಹೇಳಿಕೆ ನೀಡಿದ್ದರು.

  ಅಪ್ಪಿತಪ್ಪಿ ಯಾರಾದರೂ ಡಬ್ಬಿಂಗ್ ಪರ ಮಾತನಾಡಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಈ ಹಿಂದೆ ಎಚ್ಚರಿಸಿದ್ದರು.

  ದಿವಂಗತ ಶಂಕರನಾಗ್ ಅವರ ಜನಪ್ರಿಯ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಕನ್ನಡೀಕರಿಸಬೇಕೆಂದು ಬನವಾಸಿ ಬಳಗ ಜನಶ್ರೀ ವಾಹಿನಿಯನ್ನು ಆಗ್ರಹಿಸಿತ್ತು.

  ಶಿವ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಶಿವಣ್ಣ, ನಮ್ಮ ಮೊದಲ ಮಗಳು ಎಂಬಿಬಿಎಸ್ ಮುಗಿಸಿದ್ದಾಳೆ, ಇನ್ನೊಬ್ಬಳು ಇಂಜಿನಿಯರಿಂಗ್ ಓದುತ್ತಿದ್ದಾಳೆ.

  ನನ್ನ ಇಬ್ಬರೂ ಮಕ್ಕಳಿಗೆ ಸಿನಿಮಾ ರಂಗದಲ್ಲಿ ಅಷ್ಟು ಆಸಕ್ತಿಯಂತೂ ಸದ್ಯಕ್ಕೆ ಇಲ್ಲ. ನನ್ನ ಪತ್ನಿ ರಾಜಕೀಯ ಕುಟುಂಬದಿಂದ ಬಂದವಳು ಅವಳಿಗೆ ರಾಜಕೀಯದಲ್ಲಿ ಸುತರಾಂ ಇಷ್ಟವಿಲ್ಲ. ನನ್ನ ತಮ್ಮ ರಾಘಣ್ಣನ ಮಗನನ್ನು ಚಿತ್ರರಂಗಕ್ಕೆ ಸದ್ಯದಲ್ಲೇ ಪರಿಚಯಿಸುತ್ತೇವೆ. ನಮಗೆಲ್ಲಾ ಆಶೀರ್ವದಿಸಿದಂತೆ ಅವನ ಮೇಲೂ ಅಭಿಮಾನಿಗಳ ಪ್ರೀತಿಯಿರಲಿ ಎಂದು ಶಿವಣ್ಣ ಈ ಸಂದರ್ಭದಲ್ಲಿ ಹೇಳಿದ್ದಾರೆ.

  ಡಬ್ಬಿಂಗ್ ಪರ, ವಿರೋಧ ಚರ್ಚೆ ಹೇಳಿಕೆಗಳು ಕೆಲ ತಿಂಗಳ ಹಿಂದೆ ಮುಗಿಲು ಮುಟ್ಟಿತ್ತು . ಆ ನಂತರ ವಿಷಯ ತಣ್ಣಗಾಗಿತ್ತು. ಈಗ ಮತ್ತೆ ಶಿವರಾಜ್ ಕುಮಾರ್ ಡಬ್ಬಿಂಗ್ ವಿರೋಧಿಸಿ ಹೇಳಿಕೆ ನೀಡಿದ್ದಾರೆ.

  English summary
  Hatrick hero Shivaraj Kumar oppose dubbing culture in Kannada again. He was talking to Mr. H R Ranganath in Public TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X