ಬಾಲಿವುಡ್ ಸಿನಿಮಾದಲ್ಲಿ 'ಪಂಚತಂತ್ರ'ದ ಬೆಡಗಿ
'ಪಂಚತಂತ್ರ' ಚಿತ್ರದ ಮೂಲಕ ಕನ್ನಡ ಚಿತ್ರಪ್ರೇಕ್ಷಕರನ್ನು ರಂಜಿಸಿದ್ದ ನಟಿ ಸೋನಲ್ ಮಾಂಟೆರೋ ಈಗ ಬಾಲಿವುಡ್ ನತ್ತ ಪಯಣ ಬೆಳೆಸಿದ್ದಾರೆ. ಕನ್ನಡ ಮತ್ತು ತುಳು ಚಿತ್ರದಲ್ಲಿ ಮಿಂಚಿರುವ ಸೋನಲ್ ಈಗ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚಿಗಷ್ಟೆ ಉಪೇಂದ್ರ ಅಭಿನಯದ 'ಬುದ್ಧಿವಂತ-2' ಚಿತ್ರದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಯೋಗರಾಜ್ ಭಟ್ ನಿರ್ದೇಶನದ ಬಹುನಿರೀಕ್ಷೆಯ 'ಗಾಳಿಪಟ-2' ಚಿತ್ರದಲ್ಲು ಸೋನಲ್ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.
ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಸೋನಲ್ ಏಕಕಾಲಕ್ಕೆ ಟಾಲಿವುಡ್ ಮತ್ತು ಬಾಲಿವುಡ್ ಎಂಟ್ರಿ ಕೊಡುತ್ತಿದ್ದಾರೆ. 1996ರಲ್ಲಿ ರಿಲೀಸ್ ಆಗಿದ್ದ 'ಸಾಜನ್ ಚಲೆ ಸಸುರಾಲ್' ಚಿತ್ರದ ಸೀಕ್ವೆಲ್ ಗೆ ಸಿದ್ಧತೆ ನಡೆಯುತ್ತಿದೆ.

'ಸಾಜನ್ ಚಲೆ ಸಸುರಾಲ್-2' ಚಿತ್ರದಲ್ಲಿ ಸೋನಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ಸಾಜನ್ ಚಲೆ ಸಸುರಾಲ್' ಚಿತ್ರದಲ್ಲಿ ಟಬು, ಕರೀಷ್ಮಾ ಮತ್ತು ಗೋವಿಂದ ಕಾಣಿಸಿಕೊಂಡಿದ್ದರು. ಪಾರ್ಟ್-2ನಲ್ಲಿ ಕರೀಷ್ಮಾ ಕಪೂರ್ ಪಾತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದಾರೆ. 'ಸಾಜನ್ ಚಲೆ ಸಸುರಾಲ್-2' ಚಿತ್ರೀಕರಣ ಸಧ್ಯದಲ್ಲೇ ಪ್ರಾರಂಭವಾಗಲಿದೆ.


Click it and Unblock the Notifications











