For Quick Alerts
  ALLOW NOTIFICATIONS  
  For Daily Alerts

  'ರಾಜ್-ವಿಷ್ಣು'ಗೆ ಮುರಳಿ ಕಡೆಯಿಂದ ಕೂಡ ಒಂದು ಸಲಾಮ್

  By Suneetha
  |

  ತುಂಡು ಹೈಕಳಾದ ಶರಣ್ ಮತ್ತು ಚಿಕ್ಕಣ್ಣ ಅವರು 'ಅಧ್ಯಕ್ಷ' ಚಿತ್ರದ ನಂತರ ಮತ್ತೆ 'ರಾಜ್ ವಿಷ್ಣು' ಎಂಬ ಹೊಸ ಕಾಮಿಡಿ ಚಿತ್ರದ ಮೂಲಕ ಒಂದಾಗಿರುವ ವಿಚಾರವನ್ನು ನಾವು ನಿಮಗೆ ಮೊದಲೇ ಹೇಳಿದ್ವಿ.

  ಇದೀಗ ಇವರಿಬ್ಬರಿಗೆ ಇನ್ನೂ ಸ್ವಲ್ಪ ಜಾಸ್ತಿ ಎನರ್ಜಿ ಕೊಡಲು 'ರಾಜ್ ವಿಷ್ಣು' ಚಿತ್ರದ ಶೂಟಿಂಗ್ ಸೆಟ್ ಗೆ ನಟ ಶ್ರೀಮುರಳಿ ಅವರು ಸೇರಿಕೊಂಡಿದ್ದಾರೆ. ಅಂದಹಾಗೆ ಎಲ್ಲಾ ಓಕೆ ಶ್ರೀಮುರಳಿ ಅವರು ಯಾಕೆ ಅಂತ ಯೋಚನೆ ಮಾಡುತ್ತಿದ್ದೀರಾ?. ನಟ ಶ್ರೀಮುರಳಿ ಅವರು ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]

  ತಮಿಳಿನ 'ರಜಿನಿ ಮುರುಗನ್' ಚಿತ್ರದ ರೀಮೇಕ್ ಆಗಿರುವ 'ರಾಜ್ ವಿಷ್ಣು' ಚಿತ್ರದಲ್ಲಿ 'ರೋರಿಂಗ್ ಸ್ಟಾರ್' ಶ್ರೀಮುರಳಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ತಮ್ಮ ಭಾಗದ ಚಿತ್ರೀಕರಣ ಮುಗಿಸಲು ಶ್ರೀಮುರಳಿ ಅವರು ಈಗಾಗಲೇ ನಟ ಶರಣ್ ಮತ್ತು ಚಿಕ್ಕಣ್ಣ ಅವರನ್ನು ಸೇರಿಕೊಂಡಿದ್ದಾರೆ.

  ಪ್ರಸ್ತುತ ಮೈಸೂರಿನಲ್ಲಿ 'ರಾಜ್ ವಿಷ್ಣು' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೂಟಿಂಗ್ ಸಂದರ್ಭದಲ್ಲಿ ಚಿಕ್ಕಣ್ಣ ಮತ್ತು ಶರಣ್ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಶ್ರೀಮುರಳಿ ಅವರು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾರೆ.[ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ]

  ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರ ವಹಿಸುತ್ತಿದ್ದು, ಖಡಕ್ ಜಮಿನ್ದಾರರ ಪಾತ್ರದಲ್ಲಿ ಮಿಂಚಿದ್ದಾರೆ. ಕೆ.ಮಾದೇಶ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ನಿರ್ಮಾಪಕ ರಾಮು ಅವರು ಬಂಡವಾಳ ಹೂಡಿದ್ದಾರೆ.[ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?]

  ಇದೇ ಮೊದಲ ಬಾರಿಗೆ ನಟ ಶರಣ್ ಅವರ ಜೊತೆ ಡ್ಯುಯೆಟ್ ಹಾಡುವ ಮೂಲಕ ಮರಾಠಿ ನಟಿ ವೈಭವಿ ಶಾಂಡಿಲ್ಯ ಅವರು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನುಳಿದಂತೆ 'ವಿಕ್ಟರಿ' ಮತ್ತು 'ಅಧ್ಯಕ್ಷ' ಚಿತ್ರದ ನಂತರ ಮತ್ತೆ ಸಕಲಕಲಾವಲ್ಲಭ ರವಿಶಂಕರ್ ಮತ್ತು ಶರಣ್ ಜೋಡಿ ಈ ಚಿತ್ರದಲ್ಲಿ ಕೂಡ ಮೋಡಿ ಮಾಡಲಿದೆ.

  English summary
  Kannada Actor Sharan and Actor Chikkanna have joined hands, for a new movie titled 'Raj Vishnu' which is directed by K Madesh. The latest news is that Roaring Star Sri Murali, is playing a cameo role in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X