»   » ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?

ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?

Posted By:
Subscribe to Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 'ರಥಾವರ' ಸಕ್ಸಸ್ ಖುಷಿಯಲ್ಲೇ ತಮ್ಮ ಅಭಿಮಾನಿಗಳೊಂದಿಗೆ 35ನೇ ಜನ್ಮದಿನವನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ ಶ್ರೀಮುರಳಿ.

ಇದೇ ಸಡಗರದಲ್ಲಿ ಶ್ರೀಮುರಳಿ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ನಿರ್ಮಾಪಕ ಜಯಣ್ಣ-ಭೋಗೇಂದ್ರ ಪ್ರೊಡಕ್ಷನ್ ನಲ್ಲಿ ತಯಾರಾಗುವ ಬಿಗ್ ಬಜೆಟ್ ಚಿತ್ರವೇ (PRODUCTION NO-15) ಶ್ರೀಮುರಳಿ ನೆಕ್ಸ್ಟ್ ಪ್ರಾಜೆಕ್ಟ್.

Kannada Actor Srimurali 35th Birthday ; New movie announced

ಹೌದು, ಜಯಣ್ಣ-ಭೋಗೇಂದ್ರ ನಿರ್ಮಾಣದ 15ನೇ ಚಿತ್ರಕ್ಕೆ (PRODUCTION NO-15) ಶ್ರೀಮುರಳಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯುವ ನಿರ್ದೇಶಕ ನರ್ತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. [ಜಯಣ್ಣ ನಿರ್ಮಾಣದಲ್ಲಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಶ್ರೀಮುರಳಿ]

'ರಥಾವರ', 'ಮಾಸ್ಟರ್ ಪೀಸ್' ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನರ್ತನ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.

ಅಂದ್ಹಾಗೆ ಸಿನಿಮಾಗಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಸ್ಕ್ರಿಪ್ಟಿಂಗ್ ಕಾರ್ಯ ಇನ್ನೂ ಚಾಲ್ತಿಯಲ್ಲಿರುವುದರಿಂದ ನಾಯಕಿ ಸೇರಿದಂತೆ ಉಳಿದ ತಾರಾಗಣ ಫೈನಲ್ ಆಗಿಲ್ಲ. [ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕಿದೆ ಬಂಪರ್ ಉಡುಗೊರೆ!]

'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಶ್ರೀಮುರಳಿ ಬಾಯ್ಬಿಟ್ಟಂತೆ, ಬರ್ತಡೆ ದಿನ ಅಭಿಮಾನಿಗಳಿಗೆ ಶ್ರೀಮುರಳಿ ಸರ್ಪ್ರೈಸ್ ನೀಡಿದ್ದಾರೆ. ಫ್ಯಾನ್ಸ್ ಗೆ ಇದಕ್ಕಿಂತ ಬೇರೇನು ಬೇಕು.?!

English summary
Kannada Actor Sriimurali is celebrating his 35th Birthday today (December 17th). On this occasion, his next venture under Jayanna Combines 'Production No-15' is announced.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada