»   » 3ನೇ ವಯಸ್ಸಿಗೆ ಗ್ಲಾಮರ್ ಗುಂಗಿನಲ್ಲಿರುವ ಶ್ರೀಮುರಳಿ ಸುಪುತ್ರಿ

3ನೇ ವಯಸ್ಸಿಗೆ ಗ್ಲಾಮರ್ ಗುಂಗಿನಲ್ಲಿರುವ ಶ್ರೀಮುರಳಿ ಸುಪುತ್ರಿ

Posted By:
Subscribe to Filmibeat Kannada

ಚಂದನವನದ ರೋರಿಂಗ್ ಸ್ಟಾರ್ 'ರಥಾವರ' ಶ್ರೀಮುರಳಿ ಅವರ ಮಗಳು ಮೂರು ವರ್ಷದ ಮುದ್ದು ಕಂದಮ್ಮ ಪುಟಾಣಿ ಅತೀವ ಶ್ರೀಮುರಳಿ ಮೊನ್ನೆ ಮೊನ್ನೆ ಶಾಪಿಂಗ್ ಮಾಲ್ ನಲ್ಲಿ ಮಾಡಿದ ಅವಾಂತರ ನೋಡಿ 'ಹುಡುಗೀರು ಯಾವತ್ತಿಗೂ ಮೇಕಪ್ ಮತ್ತು ಧರಿಸುವ ಡ್ರೆಸ್ ಮೇಲೇನೇ ಜಾಸ್ತಿ ಸೆಳೆತಕ್ಕೊಳಗಾಗ್ತಾರೆ' ಅಂತ ನಟ ಮುರಳಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೌದು ನಟ ಶ್ರೀಮುರಳಿ ಅವರು ವೀಕೆಂಡ್ ನಲ್ಲಿ ತಮ್ಮ ಮುದ್ದು ಮಗಳು ಅತೀವಳನ್ನು ಜೊತೆಗೆ ಕರೆದುಕೊಂಡು ಬೆಂಗಳೂರಿನ ಯಾವುದೋ ಮಾಲ್ ಗೆ ಶಾಪಿಂಗ್ ಗೆ ಕಾಲಿಟ್ಟಿದ್ದರು.[ರೋರಿಂಗ್ ಸ್ಟಾರ್ 'ರಥಾವರ' ತಮಿಳಿಗೆ ರಿಮೇಕ್ ಆಗುತ್ತಾ?]

ಮಾಲ್ ನಲ್ಲಿ ನಟ ಶ್ರೀಮುರಳಿ ಅವರು ತಮಗೆ ಬೇಕಾದ ವಸ್ತುಗಳ ಕಡೆಗೆ ಗಮನ ಹರಿಸಿದ್ರೆ ಮಗಳು ಅತೀವಳ ಗಮನ ಮಾತ್ರ ಅಲ್ಲಿರುವ ಕಾಸ್ಮೆಟಿಕ್ಸ್ ಮತ್ತು ಮೇಕಪ್ ವಸ್ತುಗಳ ಕಡೆ ಗಮನ ಹರಿದು ಅಪ್ಪನ ತೋಳಿಂದ ಕೊಸರಾಡಿ ನೈಲ್ ಪಾಲೀಷ್ ಬಾಟಲ್ ಒಂದನ್ನು ಎತ್ತಿಕೊಂಡಿದ್ದಾಳೆ.

ಸರಿಯಾಗಿ ಇನ್ನೂ ಮೂರು ವರ್ಷ ಕೂಡ ತುಂಬಿರದ ಮುದ್ದು ಮಗಳು ಅತೀವಳಿಗೆ ಈಗಲೇ ಬಣ್ಣಗಳೆಡೆಗೆ ಆಕರ್ಷಣೆ ಬಂದಿರುವುದನ್ನು ಕಂಡು ಶ್ರೀಮುರಳಿ ಅವರು 'ಅಮ್ಮುಗೆ ಶಾಪಿಂಗ್ ಅಂದ್ರೆ ತುಂಬಾ ಪ್ರೀತಿ...ಪ್ರಪಂಚದ ಅತ್ಯುತ್ತಮ ಘಳಿಗೆ. ಹುಡುಗೀರಂದ್ರೆ, ಹುಡುಗೀರು' ಅಂತ ಟ್ವೀಟ್ ಮಾಡಿದ್ದಾರೆ.

ನಟ ಶ್ರೀಮುರಳಿ ಅವರ ಸ್ವೀಟ್ ಫ್ಯಾಮಿಲಿಯ ಮೋಜು ಮಸ್ತಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ರಥಾವರ'ನದು ಮುದ್ದಾದ ಸಂಸಾರ

ಕನ್ನಡ ನಟ ಶ್ರೀಮುರಳಿ ಅವರದು ಮುದ್ದಾದ ಮತ್ತು ಸುಂದರವಾದ ಚಿಕ್ಕ ಕುಟುಂಬ. ಮುರಳಿ ಅವರು ತಮ್ಮ ಪತ್ನಿ ವಿದ್ಯಾ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ತುಂಬಾ ಪ್ರೀತಿಸ್ತಾರೆ. ಈ ಮುದ್ದಾದ ಜೋಡಿಗೆ ಅಗಸ್ತ್ಯ ಮತ್ತು ಅತೀವ ಎಂಬ ಎರಡು ಮುದ್ದಾದ ಮಕ್ಕಳಿದ್ದಾರೆ. ಮುರಳಿ ಅವರದು ಲವ್ ಮ್ಯಾರೇಜ್.(ಚಿತ್ರಕೃಪೆ: ಚಂದನ್)[ರೋರಿಂಗ್ ಸ್ಟಾರ್ ಶ್ರೀಮುರಳಿ ಎಕ್ಸ್ ಕ್ಲೂಸಿವ್ ಸಂದರ್ಶನ]

ಮಕ್ಕಳೊಂದಿಗೆ ವಿಹಾರ

ಸಿನಿಮಾದ ಕೆಲಸ ಬಿಟ್ಟರೆ ಶ್ರೀಮುರಳಿ ಅವರು ಹೆಚ್ಚು ಹೊತ್ತು ತಮ್ಮ ಫ್ಯಾಮಿಲಿಯೊಂದಿಗೆ ಕಳೆಯುತ್ತಾರೆ. ಆರತಿಗೊಬ್ಬಳು, ಕೀರುತಿಗೊಬ್ಬ ಅಂತ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದು ಚಿಕ್ಕದಾದ ಸಂಸಾರದಲ್ಲಿ ನಟ ಮುರಳಿ ಅವರು ಸಂತೋಷವಾಗಿದ್ದಾರೆ. ಪ್ರತೀ ವಾರ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಮುರಳಿ ಅವರು ವಾಯು ವಿಹಾರ ಮಾಡುತ್ತಾರೆ.

ಅಗಸ್ತ್ಯನೊಂದಿಗೆ ಫನ್ನಿ

ಮನೆಯಲ್ಲಿದ್ದಾಗ ತಮ್ಮ ಮಕ್ಕಳೊಂದಿಗೆ ತಾವು ಮಗು ಆಗುವ ನಟ ಶ್ರೀಮುರಳಿ ಅವರು ಮಗ ಅಗಸ್ತ್ಯನೊಂದಿಗಿರುವ ಫನ್ನಿ ಕ್ಷಣಗಳು.

ಸ್ವಿಮ್ಮಿಂಗ್ ಕಲಿಸುತ್ತಿರುವ ಅಪ್ಪ

ತಮ್ಮ ಮುದ್ದಾದ ಮಕ್ಕಳಾದ ಅಗಸ್ತ್ಯ ಮತ್ತು ಅತೀವಳಿಗೆ ವೀಕೆಂಡ್ ನಲ್ಲಿ ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ವಿಮ್ಮಿಂಗ್ ಕಲಿಸುತ್ತಿರುವ ನಟ ಶ್ರೀಮುರಳಿ. ಮುರಳಿ ಅವರು ಒನ್ ಆಫ್ ದ ಬೆಸ್ಟ್ ಅಪ್ಪ.

ಅಮ್ಮನೊಂದಿಗೆ ಕಂದಮ್ಮ

ಹಬ್ಬದ ಸಂದರ್ಭದಲ್ಲಿ ಕಲರ್ ಫುಲ್ ಬಟ್ಟೆಯಲ್ಲಿ ಅಮ್ಮ ವಿದ್ಯಾ ಶ್ರೀಮುರಳಿ ತೋಳಿನಲ್ಲಿ ಮುದ್ದಾದ ನಗು ಬೀರಿರುವ ಮುದ್ದು ಕಂದಮ್ಮ ಅತೀವ ಶ್ರೀಮುರಳಿ.

ಅಪ್ಪ-ಮಗಳು

ಮಗಳು ಅತೀವ ಶ್ರೀಮುರಳಿಯ ತುಂಟಾಟಗಳನ್ನು ಸವಿಯುತ್ತಿರುವ ಅಪ್ಪ ಶ್ರೀಮುರಳಿ.

ಶಾಪಿಂಗ್ ಮಾಲ್ ನಲ್ಲಿ ಮಸ್ತಿ

ವೀಕೆಂಡ್ ಬಂದ್ರೆ ಮತ್ತು ಸ್ವಲ್ಪ ಬಿಡುವು ಸಿಕ್ಕರೆ ನಟ ಶ್ರೀಮುರಳಿ ಅವರು ತಮ್ಮ ಮುದ್ದು ಮಕ್ಕಳಿಬ್ಬರನ್ನು ಎತ್ತಿಕೊಂಡು ಪರ್ಚೆಸ್, ಶಾಪಿಂಗ್ ಮಾಲ್ ಅಂತ ಸುತ್ತಾಡುತ್ತಾರೆ. ಶಾಪಿಂಗ್ ಮಾಲ್ ನಲ್ಲಿ ಮಕ್ಕಳ ಜೊತೆ ಮುರಳಿ ಮೋಜು-ಮಸ್ತಿ.

ಅಪ್ಪ-ಮಗಳ ಬಾಂಧವ್ಯ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳ ಮದುವೆಯ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ಅವರು ತಮ್ಮ ಮಗಳು ಅತೀವಳೊಂದಿಗೆ ಪೋಸ್ ನೀಡಿದ್ದು ಹೀಗೆ.(ಚಿತ್ರಕೃಪೆ: ಚಂದನ್)

ಅಪ್ಪನ ತೋಳಲ್ಲಿ ಅತೀವ

ಎಲ್ಲೇ ಹೋದರೂ ಮಗಳು ಅತೀವಳನ್ನು ಎತ್ತಿಕೊಂಡು ಹೋಗುವ ಶ್ರೀಮುರಳಿ ಜನ ಜಂಗುಳಿ ಪ್ರದೇಶದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೀಗೆ.

ಮರಿ 'ರಥಾವರ'

ನಟ ಶ್ರೀಮುರಳಿ ಅವರ ಮಗ ಅಗಸ್ತ್ಯ. 'ಉಗ್ರಂ' ಸಿನಿಮಾದಲ್ಲಿ ಮುರಳಿ ಅವರು ತಮ್ಮ ಹೆಸರನ್ನು ಅಗಸ್ತ್ಯ ಎಂದಿಟ್ಟುಕೊಂಡಿದ್ದರು. ತದನಂತರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ನಿಮಗೆ ಗೊತ್ತೇ ಇದೆ. ಆದ್ದರಿಂದ ಮುರಳಿ ಅವರಿಗೆ ಮುದ್ದು ಮಗ ಅಗಸ್ತ್ಯ ಅದೃಷ್ಟ ಅಂತೆ.

ಮಗಳ ಜೊತೆ ಮುರಳಿ

ಮಗಳು ಅತೀವಳಿಗೆ ಮುರಳಿ ಅವರ 'ರಥಾವರ' ಚಿತ್ರದ 'ಹುಡುಗಿ ಕಣ್ಣು ಲೋಡೇಡ್ ಗನ್ನು' ಹಾಡೆಂದರೆ ತುಂಬಾ ಇಷ್ಟವಂತೆ. ಮಗಳ ಜೊತೆ ಮಸ್ತಿ ಮಾಡಿದ್ದನ್ನು ಈ ಸಣ್ಣ ವಿಡಿಯೋದಲ್ಲಿ ನೋಡಿ.

English summary
Kannada Actor Srimurali's daughter Atheeva's Makeup love. Here is the family phots of Actor Srimurali. Check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada