»   » ಕುಂಬಳಕಾಯಿ ಒಡೆದ 'ರಥಾವರ' ಚಿತ್ರತಂಡ

ಕುಂಬಳಕಾಯಿ ಒಡೆದ 'ರಥಾವರ' ಚಿತ್ರತಂಡ

Posted By:
Subscribe to Filmibeat Kannada

'ಉಗ್ರಂ' ಶ್ರೀಮುರಳಿ ಅವರು 'ರಥಾವರ' ಚಿತ್ರದ ಮೂಲಕ ಗಾಂಧಿನಗರಕ್ಕೆ ಕಮ್ ಬ್ಯಾಕ್ ಆಗಿದ್ದು, ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಇನ್ನೇನು ಸದ್ಯದಲ್ಲೇ ಚಿತ್ರ ತೆರೆ ಮೇಲೆ ಅಪ್ಪಳಿಸಲಿದ್ದು, ಪ್ರೇಕ್ಷಕರನ್ನು ಕಾತರದಿಂದ ಕಾಯುವಂತೆ ಮಾಡಿದೆ.

ಮಂಗಳೂರಿನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ 'ರಥಾವರ' ಚಿತ್ರತಂಡ ಅಕ್ಟೋಬರ್ 7 ರಂದು ಕುಂಬಳಕಾಯಿ ಒಡೆಯುವ ಕಾರ್ಯಕ್ರಮ ಮಾಡಿದ್ದಾರೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರು ಆಕ್ಷನ್-ಕಟ್ ಹೇಳಿರುವ ಚಿತ್ರ ಡಿಸೆಂಬರ್ 2015ಕ್ಕೆ ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ.['ರಥಾವರ' ಚಿತ್ರಕ್ಕೆ ಶ್ರೀಮುರಳಿ ಗಾನಬಜಾನ]

Kannada Actor Srimurali's Rathavara Shooting Complete

ಇನ್ನು ಶ್ರೀಮುರಳಿ ಅವರ ಹುಟ್ಟುಹಬ್ಬದಂದು 'ರಥಾವರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಆ ಪೋಸ್ಟರ್ ನೋಡುತ್ತಿದ್ದರೆ ಮುರಳಿ ಅವರು 'ರಥಾವರ' ಚಿತ್ರದ ಮೂಲಕ ಮತ್ತೊಮ್ಮೆ ಉಗ್ರ ರೂಪ ತಾಳೋದು ಪಕ್ಕಾ ಅನಿಸುತ್ತದೆ.

ಚಿತ್ರದಲ್ಲಿ ಮುರಳಿ ಜೊತೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಅವರು ರೊಮ್ಯಾನ್ಸ್ ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರುವ 'ರಥಾವರ' ಚಿತ್ರದ ಇನ್ನೊಂದು ಪೋಸ್ಟರ್ ನೋಡುತ್ತಿದ್ದರೆ, ಶ್ರೀಮುರಳಿ ಅವರು ಸಿನಿಮಾದಲ್ಲಿ ಸಖತ್ ಹ್ಯಾಡ್ಸಂಮ್ ಆಗಿಯೂ ಮಿಂಚಿದ್ದಾರೆ.[ಶ್ರೀಮುರಳಿ 'ಉಗ್ರಂ' ಸ್ಯಾಟಲೈಟ್ ರೈಟ್ಸ್ ಗೆ ಅಷ್ಟೇನಾ ಛೇ ಛೇ!]

2014 ರಲ್ಲಿ 'ಉಗ್ರಂ' ಚಿತ್ರ ತೆರೆ ಕಂಡ ನಂತರ ನಟ ಶ್ರೀಮುರಳಿ ಅವರು ಗಾಂಧಿನಗರದಲ್ಲಿ 'ಉಗ್ರಂ' ಶ್ರೀಮುರಳಿ ಅಂತಾನೇ ಫೇಮಸ್ ಆಗಿದ್ದಾರೆ. ಅಷ್ಟರಮಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ 'ಉಗ್ರಂ' ಹಿಟ್ ಪಡೆದುಕೊಂಡ ಚಿತ್ರವಾಗಿದೆ.

Kannada Actor Srimurali's Rathavara Shooting Complete

ಜೊತೆಗೆ ಸುಮಾರು ವರ್ಷಗಳ ನಂತರ ಶ್ರೀಮುರಳಿ ಅವರಿಗೆ 'ಉಗ್ರಂ' ಒಂದೊಳ್ಳೆ ಬ್ರೇಕ್ ನೀಡಿದ ಚಿತ್ರ. ಎಲ್ಲೆಡೆ ಭಾರಿ ಪ್ರಚಾರ ಪಡೆದುಕೊಂಡ ಸಿನಿಮಾ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಕೂಡ ಗಿಟ್ಟಿಸಿಕೊಂಡಿತ್ತು.[ಮೈಸೂರಿನಲ್ಲಿ ಬರ್ತ್ ಡೇ ಬಾಯ್ ಶ್ರೀಮುರಳಿ ಸಂಭ್ರಮ]

ಒಟ್ನಲ್ಲಿ 'ಉಗ್ರಂ' ಯಶಸ್ಸಿನ ನಂತರ ಶ್ರೀಮುರಳಿ ಅವರು 'ರಥಾವರ' ಮೂಲಕ ಚಂದನವನದಲ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

English summary
Sri Murali has completed shooting his latest film Rathavara. The shooting was wrapped up with the traditional 'kumblakai' ceremony in Mangaluru on Wednesday (October 07). The film team has returned to Bengaluru. 'Rathavara' movie features Kannada Actor Srimurali, Kannada Actress Rachita Ram in the lead role. The movie is directed by Chandrashekar Bandiyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada