For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು 'ಉಗ್ರಂ', 'ರಥಾವರ'ದ ಸೂಚನೆ ಕೊಟ್ಟ ಶ್ರೀಮುರುಳಿ 'ಮಫ್ತಿ'!

  By Bharath Kumar
  |

  ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರಿಗಿಂದು ಜನುಮದಿನದ ಸಂಭ್ರಮ. ಈ ವಿಶೇಷ ದಿನದಲ್ಲಿ ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶ್ರೀಮುರುಳಿ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಶ್ರೀಮುರುಳಿ ಹುಟ್ಟುಹಬ್ಬದಂದು ಮಫ್ತಿ' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ನಾವೇ ಫಿಲ್ಮ್ ಬೀಟ್ ನಲ್ಲಿ ಹೇಳಿದ್ವಿ. ಈಗ 'ಮಫ್ತಿ' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.

  'ಉಗ್ರಂ', 'ರಥಾವರ' ಚಿತ್ರಗಳ ಸೂಪರ್ ಸಕ್ಸಸ್ ಬಳಿಕ ನಟ ಶ್ರೀಮುರಳಿ ಅಭಿನಯಿಸುತ್ತಿರುವ 'ಮಫ್ತಿ' ಈಗಾಗಲೇ ಹಲವು ವಿಷಯಗಳಿಗೆ ಕುತೂಹಲ ಹುಟ್ಟುಹಾಕಿದೆ. ಇದೇ ಮೊದಲ ಬಾರಿಗೆ ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ್, ಶ್ರೀಮುರುಳಿ ಅವರ ಜೊತೆಯಲ್ಲಿ ಸ್ಕ್ರೀರ್ ಶೇರ್ ಮಾಡಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಆಗಿತ್ತು.[ಶ್ರೀಮುರಳಿ ಹುಟ್ಟುಹಬ್ಬಕ್ಕೆ 'ಮಫ್ತಿ' ಟೀಸರ್ ಉಡುಗೊರೆ ]

  ಈಗ, ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದ್ದು, ರೋರಿಂಗ್ ಸ್ಟಾರ್ ಶ್ರೀಮುರುಳಿ ಮತ್ತೆ ಅಬ್ಬರಿಸುವ ಸೂಚನೆ ಕೊಟ್ಟಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರುಳಿ

  ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರುಳಿ

  ಸ್ಯಾಂಡಲ್ ವುಡ್ ನಟ ಶ್ರೀಮುರುಳಿ ಅವರಿಗಿಂದು 35ನೇ ಹುಟ್ಟುಹಬ್ಬದ ಸಂಭ್ರಮ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು, ಸೆಲೆಬ್ರೇಟಿಗಳು ರೋರಿಂಗ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ. ಇನ್ನೂ ಬರ್ತ್ ಡೇ ಸಂತಸದಲ್ಲಿರುವ ಶ್ರೀಮುರುಳಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೂಡ ನೀಡಿದ್ದಾರೆ.

  'ಮಫ್ತಿ' ಟೀಸರ್ ಉಡುಗೊರೆ!

  'ಮಫ್ತಿ' ಟೀಸರ್ ಉಡುಗೊರೆ!

  35ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಶ್ರೀಮುರುಳಿಗೆ ಈ ಬರ್ತ್ ಡೇ ವಿಶೇಷವಾಗಿತ್ತು. ಯಾಕಂದ್ರೆ, ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರದ ಫಸ್ಟ್ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ರೋರಿಂಗ್ ಸ್ಟಾರ್ ಅಬ್ಬರಿಸಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ.

  'ಮಫ್ತಿ'ಯ ಖದರ್ ಡೈಲಾಗ್

  'ಮಫ್ತಿ'ಯ ಖದರ್ ಡೈಲಾಗ್

  ''ಚೂಪಾಗಿರೋವರೆಗೂನೇ ಚಾಕುಗೆ ವ್ಯಾಲ್ಯೂ, ಬುಲೆಟ್ ಇರೋವರೆಗೂನೇ ಗನ್ ಗೆ ವ್ಯಾಲ್ಯೂ, ಧಮ್ ಇರೋ ಗುಂಡಿಗೆಗೆ ಉಸಿರು ಇರೋವರೆಗೂ ವ್ಯಾಲ್ಯೂ ಇರುತ್ತೆ'' ಎಂಬ ಖಡಕ್ ಡೈಲಾಗ್‌ನೊಂದಿಗೆ ಶ್ರೀಮುರಳಿ ಜಬರ್ ದಸ್ತ್ ಎಂಟ್ರಿ ಕೊಟ್ಟಿದ್ದಾರೆ.

  ಮತ್ತೊಂದು 'ಉಗ್ರಂ' ಅಥವಾ 'ರಥಾವರ'!

  ಮತ್ತೊಂದು 'ಉಗ್ರಂ' ಅಥವಾ 'ರಥಾವರ'!

  'ಮಫ್ತಿ' ಚಿತ್ರದ ಟೀಸರ್ ಗಮನಿಸಿದ್ರೆ, ಇದು ಮತ್ತೊಂದು 'ಉಗ್ರಂ' ಅಥವಾ 'ರಥಾವರ' ಆಗುವ ಮುನ್ಸೂಚನೆ ಕಾಣುತ್ತಿದೆ. ಯಾಕಂದ್ರೆ, 'ಮಫ್ತಿ' ಚಿತ್ರವೂ ಅಂತಾಹದ್ದೇ ಮಾಸ್ ಎಲಿಮೆಂಟ್ಸ್ ಹೊಂದಿರುವ ಆಕ್ಷನ್ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

  ಶಿವಣ್ಣ ಜೊತೆ ಶ್ರೀಮುರುಳಿ

  ಶಿವಣ್ಣ ಜೊತೆ ಶ್ರೀಮುರುಳಿ

  'ಮಫ್ತಿ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಶಾನ್ವಿ ಶ್ರೀವತ್ಸವ್ ನಾಯಕಿ

  ಶಾನ್ವಿ ಶ್ರೀವತ್ಸವ್ ನಾಯಕಿ

  'ಮಾಸ್ಟರ್ ಪೀಸ್' ಖ್ಯಾತಿಯ ಶಾನ್ವಿ ಶ್ರೀವಾತ್ಸವ್ ಇದೇ ಮೊದಲ ಬಾರಿಗೆ ಶ್ರೀಮುರುಳಿಗೆ ಜೋಡಿಯಾಗಿದ್ದಾರೆ. ಇನ್ನೂ ನರ್ತನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

  English summary
  Kannada Actor Shiva Rajkumar and SriMurali starrer 'Mufti' teaser released Today (December 17th) for Srimurali's birthday special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X