twitter
    For Quick Alerts
    ALLOW NOTIFICATIONS  
    For Daily Alerts

    ನಿಮ್ಮನ್ನು ಪಡೆದ ಈ ನಾಡು ಪುನೀತ: ಸೃಜನ್ 'ನುಡಿ ನಮನ'

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಸದಾ ನಗುಮುಖದ ಸರದಾರನಂತಿದ್ದ ಅಪ್ಪು ಕಂಡರೆ ಎಲ್ಲರಿಗೂ ಪ್ರೀತಿ, ಗೌರವ. ಸ್ಯಾಂಡಲ್‌ವುಡ್‌ನ ಈ ಪರಮಾತ್ಮ ಇಂದು ನಮ್ಮೊಂದಿಗಿಲ್ಲ. ಈ ಮಾತು ಅಪ್ಪುವನ್ನು ಹತ್ತಿರದಿಂದ ಬಲ್ಲವರಿಗೆ ಅರಗಿಸಿಕೊಳ್ಳಲು ಅಸಾಧ್ಯ. ತಮ್ಮೊಂದಿಗೆ ಆತ್ಮೀಯತೆಯಿಂದ ಇದ್ದ ರಾಜಕುಮಾರ ಇನ್ನು ನೆನಪು ಮಾತ್ರ ಅಂದ್ರೆ, ಅಭಿಮಾನಿಗಳಿಗೆ, ಚಿತ್ರರಂಗ ಸಹೋದ್ಯೋಗಿಗಳಿಗೆ ಹೇಗಾಗಿರಬೇಡ? ಬಾಲ್ಯದಿಂದಲೂ ಅಪ್ಪು ಜೊತೆ ಒಡನಾಟವಿಟ್ಟುಕೊಂಡಿದ್ದ ಸಜೃನ್ ಲೋಕೇಶ್ ಭಾವನಾತ್ಮಕವಾಗಿ ನುಡಿ ನಮನ ಸಲ್ಲಿಸಿದ್ದಾರೆ.

    ಪುನೀತ್ ರಾಜ್‌ಕುಮಾರ್ ಅಗಲಿಕೆ ಸೃಜನ್ ಲೋಕೇಶ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೆಷ್ಟೋ ಅಸಹಾಯಕರ ಬಾಳಲ್ಲಿ ಬೆಳಕಾಗಿದ್ದ ಪುನೀತ್ ರಾಜ್‌ಕುಮಾರ್ ಹಲವರ ಪಾಲಿಗೆ ಪರಮಾತ್ಮನಿದ್ದಂತೆ. ಅಪ್ಪು ತೆರೆಮೇಲಿನ ಮಾಡಿದ ಸಾಧನೆ ಎಷ್ಟಿದೆಯೋ.. ಅದಕ್ಕಿಂತ ಹೆಚ್ಚು ಸಾಧನೆ ತೆರೆ ಹಿಂದೆ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ, ಆ ಸಮಾಜಮುಖಿ ಕೆಲಸಗಳೆಲ್ಲಾ ಪುನೀತ್ ನಿಧನದ ಬಳಿಕ ಒಂದೊಂದಾಗೇ ಜಗತ್ತಿಗೆ ಗೊತ್ತಾಗುತ್ತಿದೆ. ಇಂತಹ ಅದ್ಭುತ ವ್ಯಕ್ತಿ, ಗೆಳೆಯನನ್ನು ಕಳೆದುಕೊಂಡ ಸೃಜನ್ ಲೋಕೇಶ್ ಅವರ ಭಾವುಕ ನುಡಿಗಳ ಸಾರಾಂಶ ಹೀಗಿದೆ.

    ಅಪ್ಪುಗೆ ಸೃಜನ್ ನುಡಿ ನಮನ

    ಅಪ್ಪುಗೆ ಸೃಜನ್ ನುಡಿ ನಮನ

    "ಒಬ್ಬ ವ್ಯಕ್ತಿ ಜೀವನದಲ್ಲಿ ವೃತ್ತಿಯಲ್ಲಿ ಸಾಧಿಸುವುದಷ್ಟೇ ಮುಖ್ಯನಾ? ಖಂಡಿತಾ ಅಲ್ಲ. ಅವನ ಸಾಧನೆಯನ್ನು ಸಮಾಜಕ್ಕೆ ಹಾಗೂ ಜನರಿಗೆ ಒಳ್ಳೆಯದನ್ನು ಮಾಡಲು ಉಪಯೋಗಿಸಿಕೊಳ್ಳುತ್ತಾನೆ ಅನ್ನುವುದು ಬಹಳ ಮುಖ್ಯ ಆಗುತ್ತೆ. ಒಬ್ಬ ಹೀರೊ ಹೇಗೆ ವಿಲನ್‌ಗಳಿಂದ ಎಲ್ಲರನ್ನೂ ಕಾಪಾಡುತ್ತಾನೋ, ಅದೇ ನಮ್ಮ ಅಪ್ಪು ಪರದೆ ಮೇಲೆ ಮಾತ್ರ ಹೀರೊ ಆಗಿರಲಿಲ್ಲ. ನಿಜ ಜೀವನದಲ್ಲೂ ಒಬ್ಬ ಸೂಪರ್ ಹೀರೊ ಆಗಿದ್ದರು. ಅಪ್ಪು ಬಹಳ ಸರಳ ಜೀವಿ. ಇವರು ನಿಜಕ್ಕೂ ಒಬ್ಬ ಪುಟ್ಟ ಮಗುವಿನಂತೆ ಎಲ್ಲಾ ವಿಷಯಗಳಲ್ಲೂ ಒಂದು ಆಚ್ಚರಿಯನ್ನು ತೋರಿಸುತ್ತಿದ್ದರು. ಅಪ್ಪು ಯಾವತ್ತೂ ಯಾರನ್ನೂ ನೋಯಿಸುತ್ತಿರಲಿಲ್ಲ." ಎಂದು ಅಪ್ಪು ವ್ಯಕ್ತಿತ್ವ ಬಿಚ್ಚಿದ್ದಾರೆ ಸೃಜನ್.

    ಸಮಾಜದ ಮಗನಾಗಿದ್ದ ಅಪ್ಪು

    ಸಮಾಜದ ಮಗನಾಗಿದ್ದ ಅಪ್ಪು

    " ತಮ್ಮ ಕುಟುಂಬಕ್ಕೆ ಅಪ್ಪು ಬೆನ್ನೆಲುಬಾಗಿದ್ದರು. ಮಗ, ತಮ್ಮ, ಗಂಡ, ಅಪ್ಪ, ಈ ಜೀವನದ ಎಲ್ಲಾ ಪಾತ್ರಗಳನ್ನು ಸರಿಯಾಗಿ ನಿಭಾಯಿಸಿದವರು ನಮ್ಮ ಅಪ್ಪು. ಇಷ್ಟು ಕಡಿಮೆ ಸಮಯದಲ್ಲಿ ತಾವು ಮಾಡಿದ ಸಾಧನೆ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು. ಬರೀ ತಮ್ಮ ಮನೆಯ ಮಗನಾಗದೆ. ಸಮಾಜದ ಮಗನಾಗಿ ನಮ್ಮ ಪವರ್‌ಸ್ಟಾರ್ ಇಡೀ ಕರುನಾಡೇ ಕಣ್ಣೀರಿಡುವಂತೆ ಥಟ್ ಅಂತ ಮಾಯಾವಾಗಿ ಹೋದರು. ಕನ್ನಡ ಚಿತ್ರರಂಗದ ದೊಡ್ಡ ಹೆಸರು, ಜೀವಾಳ ಪುನೀತ್ ರಾಜ್‌ಕುಮಾರ್. ಎಲ್ಲರನ್ನೂ ಅನಾಥರನ್ನಾಗಿಸಿ ಹೊರಟೇ ಹೋದರು.

    ಅಪ್ಪುಗೆ ಕವಿತೆ ಮೂಲಕ ಗೌರವ

    ಅಪ್ಪುಗೆ ಕವಿತೆ ಮೂಲಕ ಗೌರವ

    " ಸರಳ ವ್ಯಕ್ತಿತ್ವ ಹಾಗೂ ಸಜ್ಜನಿಕೆಯ ವ್ಯಕ್ತಿ. ಯಾರೇ ಆಗಲಿ ಆಲಂಗಿಸಿ, ಆತ್ಮೀಯತೆ ಮೆರೆವ ಹುಡುಗ ಎಲ್ಲರ ಸ್ಮೈಲಿಗೆ ಕಾರಣರಾದ ನೀವು ಪುನೀತ. ಡ್ಯಾನ್ಸಿಂಗ್, ಆಕ್ಟಿಂಗ್, ಫೈಟಿಂಗ್, ಎಲ್ಲಾ ನೋಡಿದಾಗ ನಿಮ್ಮ ಅಭಿಮಾನಿಗಳು ಹೇಳಿದ್ದು ಒಂದೇ ನಿಮ್ಮ ಅಭಿಮಾನಿಯಾದ ನಾವುಗಳೇ ಪುನೀತ. ದೊಡ್ಮನೆ ಹುಡುಗ ದೊಡ್ಡ ತನ ಮೆರೆದಿದ್ದು, ಜನರಿಗಾಗಿ ಮಾಡಿದ ಸೇವೆಯಿಂದ ಇದನ್ನು ನೆನೆದು ಎಲ್ಲರೂ ಹೇಳಿದ್ದು, ನಿಮ್ಮನ್ನು ಪಡೆದ ಈ ನಾಡು ಪುನೀತ. ತಾಯಿ ಅಕ್ಕಂದಿರ ಮುದ್ದಿನ ಕೂಸಾಗಿ, ತಂದೆ ಅಣ್ಣಂದಿರ ಆದರ್ಶ ಮುಂದುವರೆಸಿ, ಇಡೀ ಮನೆಗೆ ನೀವಾದಿರಿ ಪುನೀತ. ಹಲವಾರು ಪ್ರಶಸ್ತಿಗಳ ಸುರಿಮಳೆ. ಚಿಕ್ಕ ವಯಸ್ಸಿನಲ್ಲೇ ನ್ಯಾಷನಲ್ ಅವಾರ್ಡ್, ಪವರ್‌ಸ್ಟಾರ್ ಜನಗಳು ಕೊಟ್ಟ ಪ್ರೀತಿಯ ರಿವರ್ಡ್. ಅವಾರ್ಡ್ , ರಿವಾರ್ಡ್ ಲೆಕ್ಕಿಸದೆ ನೀವು ಮಾಡಿದ ಕಲಾ ಸೇವೆ ಪುನೀತ. ಸಾವಿರಾರು ಮಕ್ಕಳು, ಪ್ರಾಣಿಗಳಿಗೆ ಹಾಗೂ ಹಿರಿಯರ ಬದುಕಿಗೆ ಮುಡುಪಿಟ್ಟ ನಿಮ್ಮ ಜೀವನವೇ ಪುನೀತ." ಎಂದು ಅಪ್ಪುಗಾಗಿ ಕವಿತೆಯ ಸಾಲುಗಳನ್ನು ಬರೆದು ನಮನ ಸಲ್ಲಿಸಿದ್ದಾರೆ.

    ಅಪ್ಪು ಸಾವು ಅನ್ಯಾಯ

    ಅಪ್ಪು ಸಾವು ಅನ್ಯಾಯ

    ಅಪ್ಪು ನಿಧನದ ಸುದ್ದಿ ತಿಳಿದ ದಿನವೇ ಸೃಜನ್ ಲೋಕೇಶ್ ಭಾವುಕರಾಗಿದ್ದರು. ಇದು ಅನ್ಯಾಯ. 46 ವಯಸ್ಸು ಹೋಗುವ ವಯಸ್ಸಾ? ಹೊರಗಡೆ ಕಳ್ಳರು, ಕೆಟ್ಟ ಕೆಲಸ ಮಾಡಿದವರೆಲ್ಲಾ ಆರಾಮಾಗಿದ್ದಾರೆ. ಇಂತಹವ್ರು ಹೋಗಬಾರದು. ಇದು ಅನ್ಯಾಯ ಅಲ್ಲದೆ ಇನ್ನೇನು. ಇವತ್ತು ಇದ್ದವರು ನಾಳೆ ಇಲ್ಲ ಅಂದರೆ ಏನು? 6 ದಿನ ಬದುಕಿರುತ್ತೇವೋ.. 6 ತಿಂಗಳು ಬದುಕಿರುತ್ತೇವೋ ಯಾರಿಗೆ ಗೊತ್ತಿದೆ. ಬದುಕಿನ ಬಗ್ಗೆ ಏನು ಪ್ಲ್ಯಾನ್ ಮಾಡೋದು ಹೇಳಿ. ಆ ದೇವರೊಂದಿಗೆ ಬೇಡಿಕೊಳ್ಳುವುದಕ್ಕೆ ಅರ್ಥನೇ ಇಲ್ಲ ಅನ್ನುವ ಹಾಗಾಗಿದೆ." ಎಂದು ಅಪ್ಪು ನಿಧನದ ಸುದ್ದಿ ಕೇಳಿ ಸೃಜನ್ ಲೋಕೇಶ್ ಬೇಸರ ಹೊರ ಹಾಕಿದ್ದರು.

    English summary
    Talking star Srujan Lokesh wrote emotional letter to tribute Puneeth Rajakumar. Puneeth and Srujan Lokesh both known each other from childhood days.
    Tuesday, November 16, 2021, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X