»   » ಅಚ್ಚರಿಯಾದರೂ ಸತ್ಯ....ಸುದೀಪ್, ದರ್ಶನ್ ನಡುವೆ ಕ್ಲ್ಯಾಷ್!

ಅಚ್ಚರಿಯಾದರೂ ಸತ್ಯ....ಸುದೀಪ್, ದರ್ಶನ್ ನಡುವೆ ಕ್ಲ್ಯಾಷ್!

By: ಸೋನು ಗೌಡ
Subscribe to Filmibeat Kannada

ಶಾಕಿಂಗ್!! ಸ್ಯಾಂಡಲ್ ವುಡ್ ನ ಕುಚಿಕು ಗೆಳೆಯರಿಬ್ಬರ ನಡುವೆ ಅವರಿಗೆ ಗೊತ್ತಿಲ್ಲದಂತೆ ಕ್ಲ್ಯಾಷಸ್ ಉಂಟಾಗಿದೆ ಅಂತ ಇಡೀ ಗಾಂಧಿನಗರದಲ್ಲಿ ಸುದ್ದಿಯಾಗಿದೆ.

ಹೌದು ಯಾರಪ್ಪ ಈ ಕುಚಿಕು ಗೆಳೆಯರು ಅನ್ಕೊಂಡ್ರ, ಅವರೇ ನಮ್ಮ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಹಾಗೂ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅಂದಹಾಗೆ ಇದು ರಿಯಲ್ ಲೈಫ್ ನಲ್ಲಿ ಆಗ್ತಿರೋ ಕ್ಲ್ಯಾಷಸ್ ಅಲ್ಲ ಕಣ್ರಿ ಬದ್ಲಾಗಿ ತಮ್ಮ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕಗಳಲ್ಲಿ ಉಂಟಾಗುತ್ತಿರುವ ಕ್ಲ್ಯಾಷ್.

darshan-and-sudeeptop

ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಇಳೆಯದಳಪತಿ ವಿಜಯ್ ಮುಂತಾದ ಬಹುದೊಡ್ಡ ತಾರಾಗಣವೇ ಇರುವ ಈ ವರ್ಷದ ಬಹುನಿರೀಕ್ಷಿತ ತಮಿಳು ಚಿತ್ರ 'ಪುಲಿ' ಯನ್ನು ಅಕ್ಟೋಬರ್ 1 ರಂದು ತೆರೆ ಮೇಲೆ ತರಲು ನಿರ್ದೇಶಕ ಚಿಂಬು ದೇವನ್ ಅವರು ನಿರ್ಧರಿಸಿದ್ದಾರೆ.[ರೈತರ ಹೋರಾಟಕ್ಕೆ ಜೈಕಾರ ಹಾಕಿದ ಕಿಚ್ಚ ಸುದೀಪ್]

ಇದೀಗ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಭಾನುವಾರದಂದು ನಿರ್ದೇಶಕ ಎ.ಪಿ ಅರ್ಜುನ್ ಅವರು ದರ್ಶನ್ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಮಿಸ್ಟರ್ ಐರಾವತ' ಚಿತ್ರವನ್ನು ಅಕ್ಟೋಬರ್ 1 ರಂದು ತೆರೆ ಮೇಲೆ ತರವುದಾಗಿ ಘೋಷಿಸಿದ್ದಾರೆ.

ಜೊತೆಗೆ ಭಾನುವಾರದಂದು ನಿರ್ದೇಶಕ ಎ.ಪಿ ಅರ್ಜುನ್ ಅವರು 'ಐರಾವತ' ಚಿತ್ರದ ಫೈನಲ್ ಶಾಟ್ ಒಂದನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಗಿಸಿ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

darshan-and-sudeeptop

ಹೀಗಾಗಿ ಸದ್ಯಕ್ಕೆ ಚಂದನವನದ ಎರಡು ಬಾಕ್ಸಾಫೀಸ್ ಸುಲ್ತಾನರಿಗೆ ತಮ್ಮ ತಮ್ಮ ಬಹುನಿರೀಕ್ಷೆಯ ಚಿತ್ರಗಳು ಒಂದೇ ದಿನ ತೆರೆ ಕಾಣುವುದರಿಂದ ಈ ಕುಚಿಕು ಗೆಳೆಯರ ನಡುವೆ ಮಾತ್ರವಲ್ಲದೆ ಅಭಿಮಾನಿಗಳ ನಡುವೆಯೂ ಕ್ಲ್ಯಾಷ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.[ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]

ಆದರೆ ಬೇರೆ ಬೇರೆ ಭಾಷೆಯಲ್ಲಿ ತೆರೆ ಕಾಣುವುದರಿಂದ ಈ ಇಬ್ಬರು ಕುಚಿಕು ಗೆಳೆಯರಲ್ಲಿ ಯಾರಿಗೆ ಲಾಭ ಆಗಲಿದೆ ಯಾರಿಗೆ ನಷ್ಟ ಉಂಟಾಗಲಿದೆ ಜೊತೆಗೆ ಅಭಿಮಾನಿಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Sandalwood's star friends Sudeep and Darshan are set for a clash! Their latest films are set to release on the same day. Sudeep in his first direct Tamil film Puli plays the antagonist. This film's release has been finalised as October 1. director AP Arjun who has directed Darshan's latest film Mr Airavatha announced that the Kannada film is releasing on October 1.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada