For Quick Alerts
  ALLOW NOTIFICATIONS  
  For Daily Alerts

  ಮತ್ತೆ ಟಾಲಿವುಡ್ ನತ್ತ ಕಿಚ್ಚ ಸುದೀಪ್, ಸಿನಿಮಾ ಯಾವುದು?

  By Suneetha
  |

  ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ, ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ಕ್ಷೇತ್ರದಲ್ಲೂ ಚಿರಪರಿಚಿತರು. ತೆಲುಗಿನ 'ಈಗ' ಮತ್ತು ತಮಿಳಿನಲ್ಲಿ ಇಳೆಯದಳಪತಿ ವಿಜಯ್ ಅವರ ಜೊತೆ 'ಪುಲಿ' ಚಿತ್ರದಲ್ಲಿ ಮಿಂಚಿದ ನಂತರ ದಕ್ಷಿಣ ಭಾರತದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆದರು.

  ತಮಿಳಿನ 'ಪುಲಿ' ಚಿತ್ರದ ನಂತರ ಸುದೀಪ್ ಅವರು ಅತ್ತ ಕಡೆ ತಲೆ ಹಾಕಿರಲಿಲ್ಲ. ಇದೀಗ ಹೊರ ಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ, ನಮ್ಮೆಲ್ಲರ ಮೆಚ್ಚಿನ ಕಿಚ್ಚ ಸುದೀಪ್ ಅವರು ಮತ್ತೆ ಟಾಲಿವುಡ್-ಕಾಲಿವುಡ್ ನಲ್ಲಿ ಮಿಂಚಲಿದ್ದಾರೆ.[ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

  ಹೌದು ಖ್ಯಾತ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರವೊಂದರಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ನಿರ್ದೇಶಕ ಕೃಷ್ಣ ವಂಶಿ ಅವರ ಕೊನೆಯ ಚಿತ್ರ 'ಗೋವಿಂದುಡು ಅಂದರಿವಾಲೆ' ಎಂಬ ಪಕ್ಕಾ ರೋಮ್ಯಾಂಟಿಕ್ ಮತ್ತು ಫ್ಯಾಮಿಲಿ ಮನರಂಜನಾತ್ಮಕ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದಲ್ಲಿ ಕಾಜಲ್ ಅಗರ್ ವಾಲ್, ರಾಮ್ ಚರಣ್ ತೇಜಾ, ಪ್ರಕಾಶ್ ರೈ, ಶ್ರೀಕಾಂತ್ ಮತ್ತು ನಟಿ ಕಮಲಿನಿ ಮುಖರ್ಜಿ ಅವರು ಮಿಂಚಿದ್ದರು.[ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್]

  ಅಷ್ಟಕ್ಕೂ ಇದೀಗ ಕೃಷ್ಣ ವಂಶಿ ಅವರ ಯಾವ ಸಿನಿಮಾ ಹಾಗೂ ಈ ಚಿತ್ರದಲ್ಲಿ ಸುದೀಪ್ ಅವರು ಯಾವ ಪಾತ್ರ ವಹಿಸಲಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಯಾವ ಸಿನಿಮಾ?

  ಯಾವ ಸಿನಿಮಾ?

  'ಮುರಾರಿ', ಚಂದಮಾಮ' ಮತ್ತು 'ಮುಗುಡು' ಖ್ಯಾತಿಯ ನಿರ್ದೇಶಕ ಕೃಷ್ಣ ವಂಶಿ ಅವರು 'ನಕ್ಷತ್ರಂ' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಅವರಿಗೆ ಪ್ರಮುಖ ಪಾತ್ರವಿದೆ.[ಈಗ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾದ ಕಿಚ್ಚ ಸುದೀಪ್]

  ನಾಯಕ ಯಾರು?

  ನಾಯಕ ಯಾರು?

  ಚಿತ್ರದಲ್ಲಿ ನಾಯಕ ನಟನಾಗಿ 'ವೆಂಕಟಾದ್ರಿ ಎಕ್ಸ್ ಪ್ರೆಸ್' 'ಒಕ ಅಮ್ಮಾಯಿ ತಪ್ಪಾ' ಚಿತ್ರಗಳ ಖ್ಯಾತಿಯ ತೆಲುಗು ನಟ ಸಂದೀಪ್ ಕಿಶನ್ ಅವರು ಮಿಂಚಲಿದ್ದಾರೆ.[ದಕ್ಷಿಣ ಕೊರಿಯಾದಲ್ಲಿ ಸುದೀಪ್ 'ಈಗ' ಶೋ]

  ಕಿಚ್ಚ ಸುದೀಪ್ ಪಾತ್ರ ಏನು?

  ಕಿಚ್ಚ ಸುದೀಪ್ ಪಾತ್ರ ಏನು?

  'ವೀರ ಮದಕರಿ', 'ವರದನಾಯಕ' ಮತ್ತು 'ಕೆಂಪೇಗೌಡ' ಚಿತ್ರಗಳಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಸಿಂಹದಂತೆ ಘರ್ಜನೆ ಮಾಡಿದ್ದ ಕಿಚ್ಚ ಸುದೀಪ್ ಅವರು ತೆಲುಗಿನ 'ನಕ್ಷತ್ರಂ' ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರೆ.

  ಏನಿದು 'ನಕ್ಷತ್ರಂ'?

  ಏನಿದು 'ನಕ್ಷತ್ರಂ'?

  ದಕ್ಷ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸು ಹೊಂದಿರುವ ಯುವಕನೊಬ್ಬನ ಕಥೆಯುಳ್ಳ 'ನಕ್ಷತ್ರಂ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಫುಲ್ ಟೈಮ್ ಟಫ್ ಅಂಡ್ ರಫ್ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಸುದೀಪ್ ಜೊತೆ ಡ್ಯುಯೆಟ್ ಹಾಡೋ ಬೆಡಗಿ

  ಸುದೀಪ್ ಜೊತೆ ಡ್ಯುಯೆಟ್ ಹಾಡೋ ಬೆಡಗಿ

  ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಾಯಕಿಯಾಗಿ ಖ್ಯಾತ ನಟಿ ಕಾಜಲ್ ಅಗರ್ ವಾಲ್ ಅವರು ಕಾಣಿಸಿಕೊಳ್ಳಲಿದ್ದು, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

  ಮೂವರು ನಾಯಕಿಯರು

  ಮೂವರು ನಾಯಕಿಯರು

  ಚಿತ್ರದಲ್ಲಿ ಕಾಜಲ್ ಅಗರ್ ವಾಲ್, ರೆಜಿನಾ ಸಸ್ಸೇಂದ್ರ ಮತ್ತು ನಂದಿತಾ ರಾಜ್ ಎಂಬ ಮೂವರು ಬೆಡಗಿಯರು ಕಾಣಿಸಿಕೊಳ್ಳಲಿದ್ದಾರೆ. ಕಾಜಲ್ ಅವರು ಸುದೀಪ್ ಅವರಿಗೆ ನಾಯಕಿಯಾದರೆ, ರೆಜಿನಾ ಮತ್ತು ನಂದಿತಾ ರಾಜ್ ಅವರು ಸಂದೀಪ್ ಕಿಶನ್ ಅವರ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

  ಪ್ರಕಾಶ್ ರಾಜ್ ಗೂ ಪಾಲಿದೆ

  ಪ್ರಕಾಶ್ ರಾಜ್ ಗೂ ಪಾಲಿದೆ

  ನಿರ್ದೇಶಕ ಕೃಷ್ಣ ವಂಶಿ ಅವರ ಕುಚಿಕು ಗೆಳೆಯರಾಗಿರುವ ಖ್ಯಾತ ನಟ ಪ್ರಕಾಶ್ ರಾಜ್ ಅವರು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತಿದ್ದು, ಕಮಿಷನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಸದ್ಯದಲ್ಲೇ ಚಿತ್ರೀಕರಣ

  ಸದ್ಯದಲ್ಲೇ ಚಿತ್ರೀಕರಣ

  ಈಗಾಗಲೇ ನಿರ್ದೇಶಕ ಕೃಷ್ಣವಂಶಿ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದು, ಸ್ಕ್ರಿಪ್ಟ್ ಓದಿದ ಸುದೀಪ್ ಅವರು ಕೂಡ ತಕ್ಷಣ ಸಂತಸದಿಂದಲೇ ಒಪ್ಪಿಕೊಂಡಿದ್ದಾರೆ. ನಾಯಕ ನಟನಲ್ಲದಿದ್ದರೂ ಪ್ರಮುಖ ಪಾತ್ರವಾದ್ದರಿಂದ ಸುದೀಪ್ ಒಪ್ಪಿಗೆ ಸೂಚಿದ್ದು, ಸದ್ಯದಲ್ಲೇ ಶೂಟಿಂಗ್ ಸೆಟ್ ಗೆ ಹಾಜರಾಗಲಿದ್ದಾರೆ.

  'ಹೆಬ್ಬುಲಿ'ಯಲ್ಲಿ ಸುದೀಪ್ ಬ್ಯುಸಿ

  'ಹೆಬ್ಬುಲಿ'ಯಲ್ಲಿ ಸುದೀಪ್ ಬ್ಯುಸಿ

  ಸುದೀಪ್ ಅವರು ಸದ್ಯಕ್ಕೆ 'ಹೆಬ್ಬುಲಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ 8 ದಿನಗಳ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ರವಿ ಕುಮಾರ್ ನಿರ್ದೇಶನದ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.['ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!]

  English summary
  Telugu director Krishna Vamsi directorial and Telugu Actor Sundeep starrer Telugu Movie 'Nakshatram' which went on to floors recently. Kannada Actor Sudeep in a powerful role. And pairing with the Kannada Actor Sudeep would be Actress Kajal Aggarwal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X