For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ ಸುದೀಪ್

  |

  ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 64 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿರಂಜೀವಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಜೊತೆಗೆ ಸೌತ್ ಮತ್ತು ನಾರ್ತ್ ಸಿನಿ ಇಂಡಸ್ಟ್ರಿಯ ಗಣ್ಯರು ಶುಭಕೋರುತ್ತಿದ್ದಾರೆ.

  ಚಿರಂಜೀವಿ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಕೂಡ ಶುಭಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ "ಸದಾ ಸಂತೋಷ ಮತ್ತು ಆರೋಗ್ಯವಾಂತರಾಗಿರಿ. ಸೈರಾ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಗಲಿ. ಸಮಯವು ಯಾಗಲು ಎಲ್ಲದರಲ್ಲೂ ನಿಮಗೆ ಅತ್ಯುತ್ತಮವಾದುದ್ದನ್ನ ನೀಡಿದೆ. ಈ ಸಂತೋಷ ಸದಾ ನಿಮ್ಮಲ್ಲಿ ಇರಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ" ಎಂದು ಸುದೀಪ್ ವಿಶ್ ಮಾಡಿದ್ದಾರೆ.

  ಚಿರಂಜೀವಿ ಮುಂದೆ ತನ್ನ ಅಭಿಪ್ರಾಯ ಹಂಚಿಕೊಂಡ ಕಿಚ್ಚ..! | FILMIBEAT KANNADA

  ಮೆಗಾ ಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸುಮಲತಾ

  ಕಿಚ್ಚ ಸುದೀಪ್ ಸದ್ಯ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಮೊದಲ ಬಾರಿಗೆ ಕಿಚ್ಚ ಮತ್ತು ಮೆಗಾ ಸ್ಟಾರ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್ ಅವುಕು ರಾಜು ಪಾತ್ರದಲ್ಲಿ ಮಿಂಚಿದ್ದಾರೆ.

  ಚಿರಂಜೀವಿ ಹುಟ್ಟುಹಬ್ಬದಕ್ಕೂ ಮೊದಲೆ ಅಭಿಮಾನಿಗಳಿಗೆ 'ಸೈರಾ' ಚಿತ್ರದ ಟೀಸರ್ ಗಿಫ್ಟ್ ಆಗಿ ನೀಡಲಾಗಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೆ ಇದೆ. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಒಟ್ನಲ್ಲಿ ಚಿರು ಅಭಿಮಾನಿಗಳಿಂದು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ.

  English summary
  Kannada actor Sudeep birthday wishes to Tollywood Megastar Chiranjeevi. Megastar Chiranjeevi is celebrating his 64th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X