»   » ಸ್ಯಾಂಡಲ್ ವುಡ್ ಗೆ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್

ಸ್ಯಾಂಡಲ್ ವುಡ್ ಗೆ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗದ ಅಂಗಳಕ್ಕೆ ಹೊಸ ಯುವಕ ಎಂಟ್ರಿಕೊಡಲು ಸಿದ್ಧವಾಗುತ್ತಿದ್ದಾನೆ. ಇನ್ನೂ ಹದಿನೆಂಟರ ಹರೆಯದ ಚಿಗುರು ಮೀಸೆಯ ಈ ಯುವಕನ ಹೆಸರು ಸಂಚಿತ್. ಈಗಾಗಲೆ ಸಂಚಿತ್ ಕಿರುಚಿತ್ರವೊಂದನ್ನು ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವೂ ಇದೆ.

ಇದೆಲ್ಲದರ ಜೊತೆಗೆ ತಮ್ಮ ಸೋದರ ಮಾವ ಸುದೀಪ್ ಬೆನ್ನಿಗಿದ್ದಾರೆ. ಹಾಗಾಗಿ ಸಂಚಿತ್ ಗೆ ಆನೆಬಲ ಬಂದಂತಾಗಿದೆ. ಈಗಾಗಲೆ ಪಿಯುಸಿ ಮುಗಿಸಿರುವ ಸಂಚಿತ್ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ದೂರಶಿಕ್ಷಣದ ಮೂಲಕ ಮುಂದುವರಿಸಲು ನಿರ್ಧರಿಸಿದ್ದಾರೆ.


ಇದಕ್ಕೆ ಆತನ ಕುಟುಂಬಿಕರ ಪ್ರೋತ್ಸಾಹ ಜೊತೆಗೆ ಸೋದರ ಮಾವನಾದ ಸುದೀಪ್ ಬೆಂಬಲವೂ ಇದೆ. ತನ್ನ ಬಿಡುವಿನ ವೇಳೆಯಲ್ಲಿ ಸಾಕಷ್ಟು ಸಮಯವನ್ನು ಸುದೀಪ್ ಸ್ಟುಡಿಯೋದಲ್ಲಿ ಕಳೆಯುತ್ತಿದ್ದಾನೆ. ಹಾಗಾಗಿ ಸಿನಿಮಾದ ಅಆಇಈ ಅರ್ಥ ಮಾಡಿಕೊಂಡಿದ್ದಾರೆ.

ಸಿನಿಮಾದ ಬಗ್ಗೆ ಸಂಚಿತ್ ಗೆ ತುಂಬಾ ಆಸಕ್ತಿ ಹಾಗೂ ಅದನ್ನು ತಿಳಿದುಕೊಳ್ಳುವ ಕುತೂಹಲ ಇದೆ. ಸೆಟ್ಸ್ ನಲ್ಲೇ ಕಳೆದು ಫಿಲಂ ಮೇಕಿಂಗ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ್ದಾನೆ. ಹಾಗಾಗಿ ತನ್ನ ಚಿತ್ರದ ಸೆಟ್ಸ್ ನಲ್ಲಿ ಅವನು ತೊಡಗಿಕೊಂಡು ಸಿನಿಮಾ ತಂತ್ರಗಳನ್ನು ತಿಳಿದುಕೊಳ್ಳಲಿದ್ದಾನೆ ಎಂದು ಸುದೀಪ್ ಅವರು 'ಟೈಂ ಆಫ್ ಇಂಡಿಯಾ' ಜೊತೆ ಹೇಳಿದ್ದಾರೆ.

ಸಂಚಿತ್ ಬಣ್ಣ ಹಚ್ಚಿಕೊಳ್ಳುವ ಬಗ್ಗೆ ಸೀರಿಯಸ್ ಆಗಿ ಚಿಂತಿಸಿಲ್ಲ. ಸದ್ಯಕ್ಕೆ ಅವರ ಆಸಕ್ತಿ ಏನಿದ್ದರೂ ಸಿನಿಮಾ ನಿರ್ದೇಶನ ಹಾಗೂ ಅದರ ಮೇಕಿಂಗ್ ಕಡೆಗೆ ಅಷ್ಟೇ. ಸುದೀಪ್ ಅವರಂತೆಯೇ ಎತ್ತರದ ನಿಲುವು, ಧ್ವನಿ ಸಂಚಿತ್ ಅವರಿಗೂ ಇದೆ. ಹಾಗಾಗಿ ಮುಂದೊಂದು ದಿನ ಬೆಳ್ಳಿಪರದೆಗೆ ಬರುವ ಸಾಧ್ಯತೆಗಳೂ ಇವೆ.

ಸೋದರ ಮಾವನ ಚಿತ್ರದಲ್ಲಿ ತೊಡಗಿಕೊಂಡು ಪ್ರಾಕ್ಟಿಕಲ್ ಎಕ್ಸ್ ಪೀರಿಯನ್ಸ್ ತೆಗೆದುಕೊಂಡು ಆ ಬಳಿಕ ನಿರ್ದೇಶನಕ್ಕೆ ಸಂಬಂಧಿಸಿದಂತೆ ಯುಎಸ್ ನಲ್ಲಿ ಕೋರ್ಸ್ ಮಾಡಲಿದ್ದಾರೆ. We Are The Same ಎಂಬ ಕಿರುಚಿತ್ರವನ್ನು ಸಂಚಿತ್ ಮಾಡಿದ್ದಾರೆ. ಅಂದಹಾಗೆ ಸುದೀಪ್ ಅವರ ಅಕ್ಕ ಸುಜಾತಾ ಅವರ ಮಗ ಈ ಸಂಚಿತ್.

English summary
Kannada actor Sudeep's elder sister Sujatha’s son Sanchith all set to enter Sandalwood. Sanchith will pursue a course in filmmaking in the US before he kick-starts his career as director back home, reports Times of India. 
Please Wait while comments are loading...