For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥ ಮಾಡಿಕೊಂಡ ದಕ್ಷಿಣ ಭಾರತದ ಖ್ಯಾತ ವಿಲನ್ : ಫನ್ನಿ ಟ್ವೀಟ್ ಮಾಡಿದ ಸುದೀಪ್

  |

  ದಕ್ಷಿಣ ಭಾರತದ ಖ್ಯಾತ ವಿಲನ್ ನಟ ಕಬೀರ್ ದುಹಾನ್ ಸಿಂಗ್ ಹೊಸ ಬಾಳಿನ ಹೊಸಿಲಲ್ಲಿ ನಿಂತಿದ್ದಾರೆ. ಹೌದು, ಇತ್ತೀಚಿಗಷ್ಟೆ ಕಬೀರ್ ದುಹಾನ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕಿ ಡಾಲಿ ಸಿಧು ಜೊತೆ ಎಂಗೇಜ್ ಆಗಿದ್ದಾರೆ ಕಬೀರ್.

  ಶಿನಿವಾರ(ಜೂನ್ 22)ರಂದು ಇಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಈ ಜೋಡಿ ಎಂಗೇಜ್ ಆಗಿದ್ದಾರೆ. ಈ ಬಗ್ಗೆ ಕಬೀರ್ ಮತ್ತು ಡಾಲಿ ಸಿಧು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರ ನಿಶ್ಚಿತಾರ್ಥದ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ನಟ ಶಾರುಖ್ ಖಾನ್ ಕೈಯಲ್ಲಿ ಸುದೀಪ 'ಪೈಲ್ವಾನ್' ಸಿನಿಮಾ

  ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿಗೆ ಚಿತ್ರರಂಗದ ಅನೇಕ ಗಣ್ಯರು ಶುಭಹಾರೈಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಬೀರ್ ದುಹಾನ್ ಸಿಂಗ್ ಅವರಿಗೆ ಫನ್ನಿಯಾಗಿ ವಿಶ್ ಮಾಡಿದ್ದಾರೆ.

  ನಿಮಗಿಂತ ಹೆಚ್ಚು ನಾನೆ ಫಿಟ್ಟಾಗುತ್ತೇನೆ

  ನಿಮಗಿಂತ ಹೆಚ್ಚು ನಾನೆ ಫಿಟ್ಟಾಗುತ್ತೇನೆ

  "ಅವರು ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಭಾವಿಸಿದ್ದೇನೆ. ಅವರು ಚೆನ್ನಾಗಿ ಅಡುಗೆ ಮಾಡಿ ಊಟ ಮಾಡಿಸಿದರೆ, ನಾನು ನಿಮಗಿಂತ ಫಿಟ್ಟಾಗಿ ಕಾಣಿಸುತ್ತೇನೆ. ಇಬ್ಬರು ಸಂತೋಷವಾಗಿರಿ" ಎಂದು ವಿಶ್ ಮಾಡುವ ಜೊತೆಗೆ ಟ್ವಿಟ್ಟರ್ ನಲ್ಲಿ ಕಬೀರ್ ಸಿಂಗ್ ಕಾಲನ್ನು ಎಳೆದಿದ್ದಾರೆ ಸುದೀಪ್.

  ಸದ್ಯಕ್ಕಿಲ್ಲ ಸುದೀಪ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ

  ನಿಮ್ಮ ಆಶೀರ್ವಾದ ಬೇಕು ಸರ್

  ನಿಮ್ಮ ಆಶೀರ್ವಾದ ಬೇಕು ಸರ್

  ಸುದೀಪ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ನಟ ಕಬೀರ್ "ನಿಮ್ಮ ಆಶೀರ್ವಾದ ಬೇಕು ಸರ್, ನೀವು ಮತ್ತು ಪ್ರೀಯಾ ಇಬ್ಬರು ನನ್ನ ಮನೆಗೆ ಡಿನ್ನರ್ ಗೆ ಬರಬೇಕು, ಕಾಯುತ್ತಿದ್ದೇನೆ ನಾನು" ಎಂದ ಹೇಳಿದ್ದಾರೆ. ಸುದೀಪ್ ಮತ್ತು ಕಬೀರ್ ಇಬ್ಬರು ಉತ್ತಮ ಗೆಳೆಯರು. ಸುದೀಪ್ ಸಿನಿಮಾ ಮೂಲಕ ಕಬೀರ್ ಕನ್ನಡಕ್ಕೆ ಕಾಲಿಟ್ಟಿದ್ದು ಕಬೀರ್.

  ಕಬೀರ್-ಡಾಲಿಗೆ ಪ್ರಿಯಾ ಸುದೀಪ್ ವಿಶ್

  ಕಬೀರ್-ಡಾಲಿಗೆ ಪ್ರಿಯಾ ಸುದೀಪ್ ವಿಶ್

  ಇನ್ನು ಕಬೀರ್ ಸಿಂಗ್ ಮತ್ತು ಡಾಲಿ ಸಿಧು ಜೋಡಿಗೆ ಕಿಚ್ಚ ಸುದೀಪ್ ಪತ್ನಿ ಪ್ರೀಯಾ ಸುದೀಪ್ ಕೂಡ ಶುಭ ಹಾರೈಸಿದ್ದಾರೆ. ಕಿಚ್ಚ ಫನ್ನಿ ಟ್ವೀಟ್ ಮಾಡಿದ ಬೆನ್ನಲ್ಲೆ ಪ್ರಿಯಾ ಅವರು ಕೂಡ ಶುಭ ಹಾರೈಸಿದ್ದಾರೆ. ಆದಷ್ಟು ಬೇಗ ಕಬೀರ್ ದುಹಾನ್ ಸಿಂಗ್ ಮತ್ತು ಡಾಲಿ ಸಿಧು ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಕಬೀರ್ ಸಿಂಗ್ ಡಿನ್ನರ್ ಗೆ ಆಹ್ವಾನಿಸಿದ್ದಾರೆ. ಹಾಗಾಗಿ ಕಿಚ್ಚ ದಂಪತಿ ಕಬೀರ್ ಮನೆಯಲ್ಲಿ ಡಿನ್ನರ್ ಗೆ ಭಾಗಿಯಾಗುವ ಸಾಧ್ಯತೆ ಇದೆ.

  ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿಗಳಿವು.!

  ಹೆಬ್ಬುಲಿ ಮೂಲಕ ಕನ್ನಡಕ್ಕೆ ಎಂಟ್ರಿ

  ಹೆಬ್ಬುಲಿ ಮೂಲಕ ಕನ್ನಡಕ್ಕೆ ಎಂಟ್ರಿ

  ಕಬೀರ್ ದುಹಾನ್ ಸಿಂಗ್ ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಅಬ್ಬರಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು ಕಬೀರ್. ಈಗ ಕಿಚ್ಚ ಅಭಿನಯದ ಬಹು ನಿರೀಕ್ಷೆಯ 'ಪೈಲ್ವಾನ್' ಸಿನಿಮಾದಲ್ಲು ಸುದೀಪ್ ಜೊತೆ ಕಾಣಿಸಿಕೊಂಡಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ಅವರ 'ಉದ್ಘರ್ಷ' ಚಿತ್ರದಲ್ಲೂ ವಿಲನ್ ಅಗಿ ಅಬ್ಬರಿಸಿದ್ದರು.

  English summary
  Kannada actor Sudeep funny message to villain kabir duhan singh and Dolly sidhu for their engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X