»   » 'ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್

'ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಶೂಟಿಂಗ್ ಭರದಿಂದ ಸಾಗಿದ್ದು, ಸುದೀಪ್ ಅವರು ಸತತವಾಗಿ ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಗಜಕೇಸರಿ' ಚಿತ್ರದ ಖ್ಯಾತಿಯ ನಿರ್ದೇಶಕ ಕೃಷ್ಣ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ಅಂದಹಾಗೆ ಇದೀಗ 'ಹೆಬ್ಬುಲಿ' ಚಿತ್ರದ ಫಸ್ಟ್ ಲುಕ್ ಔಟ್ ಆಗಿದ್ದು, ಪೋಸ್ಟರ್ ನಲ್ಲಿ ಸುದೀಪ್ ಅವರು ವಿಭಿನ್ನ ಅವತಾರದಲ್ಲಿ ಮಿಂಚಿದ್ದಾರೆ. ಈ ಹೊಚ್ಚ ಹೊಸ ಪೋಸ್ಟರ್ ನಲ್ಲಿ ಸುದೀಪ್ ಅವರ ಹೇರ್ ಸ್ಟೈಲ್ ಮಾತ್ರ ಬಹಳ ಡಿಫರೆಂಟ್ ಆಗಿದೆ.['ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!]


Kannada Actor Sudeep's 'Hebbuli' first look posters

ಒಟ್ನಲ್ಲಿ ಫಸ್ಟ್ ಲುಕ್ ನಲ್ಲಿಯೇ ಚಿಂದಿ ಉಡಾಯಿಸಿರುವ ಕಿಚ್ಚ ಸುದೀಪ್ ಅವರು ಇನ್ನು ಸಿನಿಮಾದಲ್ಲಿ ಅದ್ಯಾವ ರೀತಿ ಆರ್ಭಟ ಮಾಡಿರಬಹುದು ಅನ್ನೋದು ಅಭಿಮಾನಿಗಳ ಲೆಕ್ಕಾಚಾರ.


ಸುದೀಪ್ ಅವರು ಈ ಚಿತ್ರಕ್ಕಾಗಿ ಹೇರ್ ಸ್ಟೈಲ್ ಬದಲಾಯಿಸಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ. ಇದೀಗ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಅಂದರೆ 'ಹೆಬ್ಬುಲಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್.[ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ]


Kannada Actor Sudeep's 'Hebbuli' first look posters

ಆರ್ಮಿ ಡ್ರೆಸ್ಸ್ ಹಾಕಿ ಕೈಯಲ್ಲಿ ಒಂದು ಮೆಶಿನ್ ಗನ್ ಹಿಡಿದು ಗುರಿಯತ್ತ ದೃಷ್ಟಿ ನೆಟ್ಟಿರುವ ಕಿಚ್ಚ ಸುದೀಪ್ ಅವರ ಖಡಕ್ ಲುಕ್ ಇಡೀ ಪೋಸ್ಟರ್ ನಲ್ಲಿ ಹೈಲೈಟ್ ಆಗುತ್ತಿದೆ. ಸದ್ಯಕ್ಕೆ ಎರಡು ಪೋಸ್ಟರ್ ರಿಲೀಸ್ ಮಾಡಿರುವ ನಿರ್ದೇಶಕ ಎಸ್.ಕೃಷ್ಣ ಅವರು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.


ಛಾಯಾಗ್ರಾಹಕ ಡರೇನ್ ಸೆಂಟೋಫಂಟಿ ಅವರು ಕಿಚ್ಚ ಸುದೀಪ್ ಅವರ ಫೋಟೋ ಶೂಟ್ ನಡೆಸಿದ್ದು, ಫಸ್ಟ್ ಲುಕ್ ಪೋಸ್ಟರ್ ಗಳು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿದೆ. ಪೋಸ್ಟರ್ ಬಿಡುಗಡೆ ಆಗಿದ್ದನ್ನು ನೋಡಿ 'ಹೆಬ್ಬುಲಿ' ಸಿನಿಮಾ ಬಿಡುಗಡೆ ಆದಷ್ಟೇ ಸಂಭ್ರಮ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು.[ವಿಷ್ಣು ಸ್ಮಾರಕ ಸ್ಥಳಾಂತರ ಬಗ್ಗೆ ಕೊನೆಗೂ ಬಾಯ್ಬಿಟ್ಟ ಸುದೀಪ್]


Kannada Actor Sudeep's 'Hebbuli' first look posters

ಚಿತ್ರದಲ್ಲಿ ಸುದೀಪ್ ಅವರು ಆರ್ಮಿ ಅಧಿಕಾರಿಯಾಗಿ ಮಿಂಚಿದ್ದು, ಇವರಿಗೆ ನಾಯಕಿಯಾಗಿ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಮಿಂಚಿದ್ದಾರೆ. ರವಿಚಂದ್ರನ್ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

English summary
Kannada Actor Sudeep's Kannada Movie 'Hebbuli' first look posters out. Kannada Actor Sudeep, Kannada Actor ravichandran, Actress Amala Paul in the lead role. The movie is directed by S.Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada