For Quick Alerts
  ALLOW NOTIFICATIONS  
  For Daily Alerts

  'ವಿಸ್ಮಯ': ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಜೊತೆ 'ಹೆಬ್ಬುಲಿ' ಸುದೀಪ್

  By Suneetha
  |

  ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸದ್ಯಕ್ಕೆ 'ಹೆಬ್ಬುಲಿ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಈ ಬಿಜಿ ಶೆಡ್ಯೂಲ್ ನಲ್ಲೂ ಕಿಚ್ಚ ಅವರು ಸ್ಟಾರ್ ನಟರ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಮಾತಾಡಿಸಿಕೊಂಡು ಬರುತ್ತಿದ್ದಾರೆ.

  ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸೆಟ್ ಗೆ ಇದ್ದಕ್ಕಿದ್ದಂತೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಇದೀಗ ಖ್ಯಾತ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ 'ವಿಸ್ಮಯ' ಶೂಟಿಂಗ್ ಸೆಟ್ ಗೆ ಹಾಜರಾಗಿ ಮತ್ತೆ ಅಚ್ಚರಿ ಮೂಡಿಸಿದ್ದಾರೆ.[ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...]

  ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ 'ವಿಸ್ಮಯ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಬಹುಭಾಷಾ ನಿರ್ದೇಶಕ ಅರುಣ್ ವೈದ್ಯನಾಥನ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ತಮಿಳಿನಲ್ಲಿ ಈ ಸಿನಿಮಾ 'ನಿಪುಣನ್' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ.

  ಅಂದಹಾಗೆ ಕಿಚ್ಚ ಸುದೀಪ್ ಮಾತ್ರವಲ್ಲದೇ ನಟ ಶರತ್ ಕುಮಾರ್ ಅವರು ಕೂಡ ಇತ್ತೀಚೆಗೆ 'ವಿಸ್ಮಯ' ಶೂಟಿಂಗ್ ಸೆಟ್ ಗೆ ಹಾಜರಾಗಿ ಅರ್ಜುನ್ ಸರ್ಜಾ ಅವರಿಗೆ ಸರ್ ಪ್ರೈಸ್ ನೀಡಿದ್ದಾರೆ.

  ಒಟ್ನಲ್ಲಿ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಮತ್ತು ಶರತ್ ಕುಮಾರ್ ಅವರು ಯಾವುದೇ ಸೂಚನೆ ಕೊಡದೇ ಶೂಟಿಂಗ್ ಸೆಟ್ ಗೆ ದಿಢೀರ್ ಭೇಟಿ ನೀಡಿದ್ದನ್ನು ಕಂಡು ಇಡೀ 'ವಿಸ್ಮಯ' ಚಿತ್ರತಂಡ ವಿಸ್ಮಯದಿಂದ ನೋಡಿದೆ. ಮುಂದೆ ಓದಿ..

  ಸುದೀಪ್-ಅರ್ಜುನ್ ಸರ್ಜಾ

  ಸುದೀಪ್-ಅರ್ಜುನ್ ಸರ್ಜಾ

  'ಹೆಬ್ಬುಲಿ' ಚಿತ್ರದ ಶೂಟಿಂಗ್ ನ ಬಿಜಿ ಶೆಡ್ಯೂಲ್ ನಲ್ಲಿಯೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅರ್ಜುನ್ ಸರ್ಜಾ ಅವರ 'ವಿಸ್ಮಯ' ಶೂಟಿಂಗ್ ಸೆಟ್ ಗೆ ಹಾಗೆ ಸುಮ್ಮನೆ ಫ್ರೆಂಡ್ಲಿ ವಿಸಿಟ್ ಕೊಟ್ಟಿದ್ದಾರೆ.[ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ]

  ಗೆಳೆಯರ ಮಾತು-ಕತೆ

  ಗೆಳೆಯರ ಮಾತು-ಕತೆ

  ಅಂದಹಾಗೆ ನಟ ಅರ್ಜುನ್ ಸರ್ಜಾ ಮತ್ತು ಕಿಚ್ಚ ಸುದೀಪ್ ಅವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದಾರೆ. ಈ ಮೊದಲು ಧ್ರುವ ಸರ್ಜಾ ಅವರ ಮೊದಲ ಚಿತ್ರ 'ಅದ್ಧೂರಿ'ಯ ಲಾಂಚ್ ಸಂದರ್ಭದಲ್ಲೂ ಹಾಜರಿದ್ದು, ಶುಭ ಹಾರೈಸಿದ್ದರು. ಇದೀಗ 'ವಿಸ್ಮಯ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕುಳಿತು ಕೆಲ ಹೊತ್ತು ಕುಶಲೋಪರಿ ಮಾತುಗಳನ್ನಾಡಿದ್ದಾರೆ.

  ಚಿತ್ರತಂಡದ ಜೊತೆ ಸುದೀಪ್ ಸಂವಾದ

  ಚಿತ್ರತಂಡದ ಜೊತೆ ಸುದೀಪ್ ಸಂವಾದ

  ನಿರ್ದೇಶಕ ಅರುಣ್ ವೈದ್ಯನಾಥನ್ ಸೇರಿದಂತೆ ಇಡೀ ಚಿತ್ರತಂಡದ ಜೊತೆ ಸುದೀಪ್ ಅವರು ಕೆಲಹೊತ್ತು ಮಾತನಾಡಿದರು.[33 ವರ್ಷದ ಮಹಿಳೆಯ ಪಾತ್ರದಲ್ಲಿ ಮಿಂಚಲಿರುವ ಶ್ರುತಿ ಹರಿಹರನ್..!]

  ಟೀ ಸವಿದ ಕಿಚ್ಚ

  ಟೀ ಸವಿದ ಕಿಚ್ಚ

  ಕೆಲಹೊತ್ತು ಮಾತನಾಡಿ, ಚಿತ್ರದ ಬಗ್ಗೆ ಚರ್ಚಿಸಿದ ಸುದೀಪ್ ಅವರು ಟೀ ಸವಿದು ಚಿತ್ರಕ್ಕೆ ಶುಭ ಹಾರೈಸಿ ಹೊರಟುಬಿಟ್ಟರು.

  ಶರತ್ ಕುಮಾರ್ ವಿಸಿಟ್

  ಶರತ್ ಕುಮಾರ್ ವಿಸಿಟ್

  ಕಿಚ್ಚ ಸುದೀಪ್ ಅವರು ವಿಸಿಟ್ ಮಾಡಿ ಹೋದ ಬೆನ್ನಲ್ಲೇ ಖ್ಯಾತ ನಟ ಶರತ್ ಕುಮಾರ್ ಅವರು ಕೂಡ 'ವಿಸ್ಮಯ' ಸೆಟ್ ಗೆ ಭೇಟಿ ನೀಡಿದ್ದಾರೆ.

   ನಟಿ ವರಲಕ್ಷ್ಮಿ ಶರತ್ ಕುಮಾರ್

  ನಟಿ ವರಲಕ್ಷ್ಮಿ ಶರತ್ ಕುಮಾರ್

  ಈ ಚಿತ್ರದಲ್ಲಿ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಗಳ ನಟನೆಯ ಚಿತ್ರದ ಶೂಟಿಂಗ್ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಶರತ್ ಭೇಟಿ ನೀಡಿದ್ದರು.

  ನಟ ಪ್ರಸನ್ನ

  ನಟ ಪ್ರಸನ್ನ

  ಖ್ಯಾತ ನಟಿ ಸ್ನೇಹಾ ಅವರ ಪತಿ ನಟ ಪ್ರಸನ್ನ ಅವರು ಕೂಡ ಶರತ್ ಕುಮಾರ್ ಅವರ ಜೊತೆ 'ವಿಸ್ಮಯ' ಶೂಟಿಂಗ್ ಸೆಟ್ ನಲ್ಲಿ ಕಂಡುಬಂದರು. ನಟ ಪ್ರಸನ್ನ ಅವರು ಈ ಚಿತ್ರದಲ್ಲಿ ಪಾತ್ರ ವಹಿಸಿದ್ದು, ಈ ಮೂಲಕ ಕನ್ನಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

  ಶರತ್ ಕುಮಾರ್-ಅರ್ಜುನ್ ಸರ್ಜಾ

  ಶರತ್ ಕುಮಾರ್-ಅರ್ಜುನ್ ಸರ್ಜಾ

  ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್, ನಟ ಅರ್ಜುನ್ ಸರ್ಜಾ, 'ಯು-ಟರ್ನ್' ಚಿತ್ರದ ಖ್ಯಾತಿಯ ನಟ ರೋಜರ್ ನಾರಾಯಣ್, ನಟ ಪ್ರಸನ್ನ ಮತ್ತು ನಟಿ ವರಲಕ್ಷ್ಮಿ ಒಂದಾಗಿ ಕಾಣಿಸಿಕೊಂಡಿದ್ದು ಹೀಗೆ.

  ವಿಸ್ಮಯ ಪೋಸ್ಟರ್

  ವಿಸ್ಮಯ ಪೋಸ್ಟರ್

  ಯಾವುದೇ ಸಿನಿಮಾ ಮಾಡಿದರೂ ಸಾಮಾಜಿಕ ಕಾಳಜಿ ಹಾಗೂ ಕ್ರಿಯಾಶೀಲ ಕೆಲಸಕ್ಕೆ ಮಹತ್ವ ಕೊಡುವವರು ನಟ ಅರ್ಜುನ್ ಸರ್ಜಾ. ಅಂತಾದ್ದೇ ಕ್ರಿಯಾಶೀಲ ಚಿತ್ರಗಳ ಮೂಲಕ ಹೆಸರು ಮಾಡಿರುವ ನಿರ್ದೇಶಕ ಅರುಣ್ ವೈದ್ಯನಾಥನ್ ಮತ್ತು ಅರ್ಜುನ್ ಸರ್ಜಾ 'ವಿಸ್ಮಯ' ಚಿತ್ರದ ಮೂಲಕ ಕೈ ಜೋಡಿಸಿರುವುದರಿಂದ ಇದೀಗ ಅಭಿಮಾನಿಗಳಲ್ಲೂ ಭಾರಿ ಕುತೂಹಲ ಮೂಡಿದೆ.

  ಶ್ರುತಿ ಹರಿಹರನ್ ನಾಯಕಿ

  ಶ್ರುತಿ ಹರಿಹರನ್ ನಾಯಕಿ

  ಈ ಚಿತ್ರದಲ್ಲಿ ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಪತ್ನಿ ಪಾತ್ರ ವಹಿಸಿದ್ದು, ಅರ್ಜುನ್ ಸರ್ಜಾ ಅವರು ಮಫ್ತಿಯ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ವರಲಕ್ಷ್ಮಿ, ತಮಿಳು ನಟ ಪ್ರಸನ್ನ, ಸುಹಾಸಿನಿ ಮತ್ತು ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.[ಅರ್ಜುನ್ ಸರ್ಜಾ ಅವರ ಹೆಂಡತಿಯಾದ ಲೂಸಿಯಾ ಬೆಡಗಿ]

  English summary
  Kannada Actor Sudeep made surprise visit to Actor Arjun Sarja starrer Kannada Movie 'Vismaya'. The movie is directed by Arun Vaidyanathan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X