»   » 'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ

'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ

Posted By:
Subscribe to Filmibeat Kannada
ಅಪಾರ ಕೀರ್ತಿ ಗಳಿಸಿ ಮೆರೆದ' ನಟ ಸುದರ್ಶನ್ ವಿಧಿವಶ | Filmibeat Kannada

ಕನ್ನಡದ ಹಿರಿಯ ನಟ ಆರ್.ಎನ್.ಸುದರ್ಶನ್ (78) ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್ ಅವರು ಬೆಂಗಳೂರಿನ ತಿಲಕ್ ನಗರದಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಮನೆಯಲ್ಲಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದ ಸುದರ್ಶನ್ ಅವರನ್ನ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

Kannada Actor Sudharshan passes away

ಸುದರ್ಶನ್ ಅವರು ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 'ವಿಜಯನಗರ ವೀರಪುತ್ರ', 'ನಗುವ ಹೂವು', 'ಮರೆಯಾದ ದೀಪಾವಳಿ', 'ಮಠ', 'ಸೂಪರ್' ಅಂತಹ ಚಿತ್ರಗಳಲ್ಲಿ ಸುದರ್ಶನ್ ನಟಿಸಿದ್ದರು.

ಸದ್ಯ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಗ್ನಿಸಾಕ್ಷಿ' ಧಾರವಾಹಿಯಲ್ಲಿ 'ಸ್ವಾಮೀಜಿ' ಪಾತ್ರವನ್ನ ಸುದರ್ಶನ್ ನಿರ್ವಹಿಸುತ್ತಿದ್ದರು.

English summary
Kannada Actor Sudharshan passes away
Please Wait while comments are loading...