»   » ಮತ್ತೊಂದು ಆಟಕ್ಕೆ 'ದಿಲ್ ವಾಲಾ' ಸುಮಂತ್ ಸಿದ್ಧ

ಮತ್ತೊಂದು ಆಟಕ್ಕೆ 'ದಿಲ್ ವಾಲಾ' ಸುಮಂತ್ ಸಿದ್ಧ

Posted By:
Subscribe to Filmibeat Kannada

ಈ ಚಿತ್ರವು ನಾಯಕ ಸುಮಂತ್ ಅವರಿಗೆ ಎರಡನೇ ಚಿತ್ರ. ನಿರ್ದೇಶಕ ಅನಿಲ್ ಕುಮಾರ್ ಅವರು ಈ ಮೊದಲು, ಕೋಟಿ ರಾಮು ಬ್ಯಾನರಿನಲ್ಲಿ ಮಾಲಾಶ್ರೀ ನಟನೆಯ 'ಶಕ್ತಿ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಸಂಭಾಷಣೆಯನ್ನೂ ಕೂಡ ಬರೆದಿದ್ದ ಅನಿಲ್, ಈ ಚಿತ್ರಕ್ಕೆ ಕೂಡ ಸ್ಕ್ರಿಪ್ಟ್ ಕೆಲಸದ ಜೊತೆಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದೆ.

'ಆಟ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ನಟ ಸುಮಂತ್ ಮತ್ತೊಂದು ಚಿತ್ರದ ಮೂಲಕ ಮರುಪ್ರವೇಶ ಮಾಡುತ್ತಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು ಮಗ ಸುಮಂತ್, ಈ ಮೊದಲು ಬಂದಿದ್ದ 'ಆಟ' ಚಿತ್ರದ ಮೂಲಕ ಗ್ರಾಂಡ್ ಎಂಟ್ರಿ ಕೊಡಲು ಪ್ರಯತ್ನಿಸಿದ್ದರೂ ಆ ಚಿತ್ರ ಇನ್ನಿಲ್ಲದಂತೆ ನೆಲಕಚ್ಚಿರುವುದರಿಂದ ಮುಂಬರುವ ಚಿತ್ರವನ್ನು ಮರುಪ್ರವೇಶ ಎನ್ನವುದೇ ಹೆಚ್ಚು ಸೂಕ್ತ. ಬರಲಿರುವ ಸುಮಂತ್ ಚಿತ್ರಕ್ಕೆ 'ದಿಲ್ ವಾಲಾ' ಎಂದು ಹೆಸರಡಿಲಾಗಿದೆ.

ಮಗನ ಈ ದಲ್ ವಾಲಾ ಚಿತ್ರವನ್ನು ನಿರ್ಮಿಸಲಿರುವವರು ನಿರ್ಮಾಪಕ ಶೈಲೇಂದ್ರಬಾಬು. ಈ ಚಿತ್ರವು ಸದ್ಯದಲ್ಲೇ ಮುಹೂರ್ತ ಆಚರಿಸಿಕೊಳ್ಳಲಿದೆ. ಈ ಚಿತ್ರವು ಒಂದೊಳ್ಳೆಯ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಹೊಂದಿದೆ ಎಂದಿದ್ದಾರೆ ನಿರ್ದೇಶಕ ಅನಿಲ್. ಈ ಚಿತ್ರವು ಖಂಡಿತವಾಗಿಯೂ ಗೆಲ್ಲಲಿದೆ ಎಂಬ ವಿಶ್ವಾಸ ಅಪ್ಪ ಶೈಲೇಂದ್ರಬಾಬು ಹಾಗೂ ಮಗ ಸುಮಂತ್ ಇಬ್ಬರಲ್ಲೂ ಇದೆ. ಚಿತ್ರ ಬಿಡುಗಡೆ ಮುನ್ನ ನಿರೀಕ್ಷೆಯೇನೋ ಸರಿ, ಆದರೆ ಬಿಡುಗಡೆ ನಂತರವಷ್ಟೇ ಪಕ್ಕಾ ಫಲಿತಾಂಶ ತಿಳಿಯಲಿದೆ.

ಬರಲಿರುವ ಚಿತ್ರವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ನಟ ಸುಮಂತ್ ಹಾಗೂ ನಿರ್ದೇಶಕ ಅನಿಲ್ ಕುಮಾರ್ ಅವರಿಗೆ ಏನೂ ಕೊರತೆಯಾಗದಂತೆ ಚಿತ್ರ ನಿರ್ಮಿಸುವ ಪಣ ತೊಟ್ಟಿದ್ದಾರಂತೆ ಶೈಲೇಂದ್ರಬಾಬು. ಈ ಬಗ್ಗೆ ಮಾತನಾಡಿರುವ ಅವರು, ಚಿತ್ರ ಚೆನ್ನಾಗಿ ಮೂಡಿಬರಬೇಕು, ಅದಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಅಭಯ ನೀಡಿದ್ದಾರಂತೆ. (ಏಜೆನ್ಸೀಸ್)

English summary
Kannada Actor Sumanth new movie to launch soon in Anil Kumar, Malashri's 'Shakthi' film fame director Direction. This movie titled as ‘Dilwaala’ – a love story with full of youth entertainment. Sudhakar S Raj camera and Arjun JanyaMusic for this. 
 
Please Wait while comments are loading...