For Quick Alerts
  ALLOW NOTIFICATIONS  
  For Daily Alerts

  ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ 'ಮದುವೆ' ಹುಡುಗ ಸೂರಜ್

  By Suneetha
  |

  ಸಾಹಿತ್ಯ ಬರಹಗಾರ ಕವಿರಾಜ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ನಿಮಗೆ ನೆನಪಿರಬೇಕಲ್ವಾ?. ಅದರಲ್ಲಿ ನಾಯಕ ನಟನಾಗಿ ಅಮೂಲ್ಯ ಜೊತೆ ರೊಮ್ಯಾನ್ಸ್ ಮಾಡಿದ್ದ ಚಾಕ್ಲೇಟ್ ಹೀರೋ ನೆನಪಿದ್ದಾರ?.

  ಅವರೇ ಬೆಳ್ಳಗೆ, ಮುದ್ದು-ಮುದ್ದಾಗಿದ್ದ ಮೈಸೂರಿನ ಹುಡುಗ ಮಾಡೆಲ್ ಕಮ್ ನಟ ಸೂರಜ್ ಗೌಡ ಅವರು. ಮೊದಲ ಬಾರಿಗೆ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಅದೇ ಸೂರಜ್ ಗೌಡ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]

  ಹೌದು ಈ ಬಾರಿ ಕೂಡ ಚೊಚ್ಚಲ ನಿರ್ದೇಶಕರ ಜೊತೆ ಕೈ ಜೋಡಿಸಿರುವ ಸೂರಜ್ ಗೌಡ 'ಪ್ರದೇಶ ಸಮಾಚಾರ' ಎಂಬ ಚಿತ್ರದಲ್ಲಿ ಮಿಂಚಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.[ಸ್ಯಾಂಡಲ್ ವುಡ್ ನ ಹೊಸ ಹೀರೋ ಸೂರಜ್ ಸಂದರ್ಶನ]

  ಈ ಮೊದಲು ಹಲವಾರು ಚಿತ್ರಗಳಿಗೆ ಸಹನಿರ್ದೇಶಕರಾಗಿ ದುಡಿದು ಅನುಭವ ಇರುವ ಅರ್ಜುನ್ ಅವರು 'ಪ್ರದೇಶ ಸಮಾಚಾರ' ಎಂಬ ವಿಭಿನ್ನ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ....

  ಸೂರಜ್ ಗೌಡ ಅವರ ಮನದ ಮಾತು

  ಸೂರಜ್ ಗೌಡ ಅವರ ಮನದ ಮಾತು

  'ಪ್ರೇಕ್ಷಕರ ಮನಸ್ಸಿನಿಂದ ಹೆಚ್ಚು ದಿನ ದೂರ ಉಳಿಯಲು ನನಗೆ ಇಷ್ಟವಿಲ್ಲ. ನನ್ನ ಚೊಚ್ಚಲ ಸಿನಿಮಾ ಬಿಡುಗಡೆ ಆಗಿ ಸುಮಾರು ತಿಂಗಳುಗಳೇ ಕಳೆಯಿತು. ಆದ್ದರಿಂದ ಹೊಸ ಯೋಜನೆ ಕೈಗೆತ್ತಿಕೊಂಡಿದ್ದೇನೆ. ನನ್ನ ಜೊತೆ ಚಿತ್ರರಂಗಕ್ಕೆ ಕಾಲಿಟ್ಟ ಹಲವಾರು ನಟರು ಇನ್ನೂ ಎರಡನೇ ಚಿತ್ರಕ್ಕೆ ಸಹಿ ಮಾಡಬೇಕಿದೆ. ಅದೃಷ್ಟವಶಾತ್ ನನಗೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದೆ' ಎನ್ನುತ್ತಾರೆ ನಟ ಸೂರಜ್ ಗೌಡ.[ಅಂತೂ ಚಿತ್ತಾರದ ಬೆಡಗಿ ಅಮೂಲ್ಯಗೆ ಸೂಕ್ತ ವರ ಸಿಕ್ಕ!]

  ಸ್ವಾತಂತ್ರ್ಯ ದಿನದ ಒಂದು ರಾತ್ರಿ..

  ಸ್ವಾತಂತ್ರ್ಯ ದಿನದ ಒಂದು ರಾತ್ರಿ..

  ಪೂರ್ಣ ಮಿಡಿಯಾ ಹೌಸ್ ನಿರ್ಮಿಸುತ್ತಿರುವ 'ಪ್ರದೇಶ ಸಮಾಚಾರ' ಸಿನಿಮಾ ರೋಮ್ಯಾಂಟಿಕ್ ಕಮ್ ಹಾಸ್ಯ ಚಿತ್ರವಾಗಿದೆ. ಜೊತೆಗೆ ಇದಕ್ಕೆ ಥ್ರಿಲ್ಲರ್ ತಿರುವು ಇರುವುದು ವಿಶೇಷ, ಸ್ವಾತಂತ್ರ್ಯ ದಿನದ ಒಂದು ರಾತ್ರಿ ನಡೆಯುವ ಕಥೆ ಇದಾಗಿದೆ ಎಂದು ಸೂರಜ್ ನುಡಿಯುತ್ತಾರೆ.

  ಇತಿಹಾಸ ಮರುಕಳಿಸಲಿದೆ

  ಇತಿಹಾಸ ಮರುಕಳಿಸಲಿದೆ

  ಇನ್ನು ಚಿತ್ರದ ಸ್ಕ್ರಿಪ್ಟ್ ಅಧ್ಭುತವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು 1947ರ ಸಂದರ್ಭಕ್ಕೆ ಚಿತ್ರ ಕೊಂಡೊಯ್ಯಲಿದೆ ಎನ್ನುತ್ತಾರೆ ನಟ ಸೂರಜ್ ಗೌಡ.

  ರಘು ದೀಕ್ಷಿತ್

  ರಘು ದೀಕ್ಷಿತ್

  ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದು, ಅವರೂ ಕೂಡ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಸಿಕ್ಸ್ ಪ್ಯಾಕ್ ತಯಾರಿ

  ಸಿಕ್ಸ್ ಪ್ಯಾಕ್ ತಯಾರಿ

  ರೋಮ್ಯಾಂಟಿಕ್ ಹಾಗೂ ಹಾಸ್ಯಭರಿತವಾಗಿದ್ದ 'ಮದುವೆಯ ಮಮತೆಯ ಕರೆಯೋಲೆ' ಬಾಕ್ಸಾಫೀಸ್ ನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಇದೀಗ 'ಪ್ರದೇಶ ಸಮಾಚಾರ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ತಯಾರಿಯಲ್ಲಿ ಸೂರಜ್ ಅವರು ಬ್ಯುಸಿಯಾಗಿದ್ದಾರೆ.

  English summary
  Kannada Actor Suraj Gowda, who didn’t want to leave a long gap after his debut, film 'Maduveya Mamatheya Kareyole', has signed up for his second film 'Pradesha Samachara'. This will be a directorial debut for Arjun, who has previously worked as an associate in a few projects.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X