»   » ಉಪೇಂದ್ರರ ಬಿಸಿ-ಬಿಸಿ 'ಉಪ್ಪಿ2'ಗೆ 50ರ ಸಂಭ್ರಮ

ಉಪೇಂದ್ರರ ಬಿಸಿ-ಬಿಸಿ 'ಉಪ್ಪಿ2'ಗೆ 50ರ ಸಂಭ್ರಮ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಉಪ್ಪಿ-2' ಚಿತ್ರ ಭರ್ಜರಿ 50 ದಿನಗಳನ್ನು ಪೂರೈಸಿದೆ. ನಟಿ-ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಬಂಡವಾಳ ಹೂಡಿದ್ದ 'ಉಪ್ಪಿ-ಟ್ಟು' ಗಾಂಧಿನಗರದ ಮಂದಿಗೆ ರುಚಿಸಿದ್ದಲ್ಲದೆ, ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿತ್ತು.

ಬಹಳ ದಿನಗಳ ನಂತರ ನಿರ್ದೇಶನದತ್ತ ಕಣ್ಣು ಹಾಯಿಸಿದ್ದ ಉಪೇಂದ್ರ ಅವರು ನಾನು-ನೀನು unknown ಅನ್ನೋ ಡಿಫರೆಂಟ್ ಕಾನ್ಸೆಪ್ಟ್ ಮೂಲಕ ತಮ್ಮ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿ ತಲೆಯಲ್ಲಿ ಹುಳ ಬಿಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಕೊಡುಗೆಯಾಗಿ ನೀಡಿದರು.[ಅಮೆರಿಕನ್ನಡಿಗರಿಗೆ ಉಪ್ಪಿ2 ಟೇಸ್ಟು ತೋರಿಸಲಿದ್ದಾರೆ ಉಪ್ಪಿ]


Upendra

ಆಗಸ್ಟ್ 14 ರಂದು ಕರ್ನಾಟಕ ಹಾಗೂ ಆಂಧ್ರಪ್ರದೇಶದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದ್ದ ರಿಯಲ್ ಸ್ಟಾರ್ 'ಉಪ್ಪಿ-2' ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುವ ಮೂಲಕ ಇದೀಗ ಸತತ ಭರ್ಜರಿ 50 ದಿನಗಳನ್ನು ಪೂರೈಸಿದೆ.


ಇನ್ನು ಉಪೇಂದ್ರ ಅವರು ಕರ್ನಾಟಕದಲ್ಲಿ ಸುದ್ದಿ ಮಾಡಿದ್ದು ಮಾತ್ರವಲ್ಲದೇ, ಆಂಧ್ರಪ್ರದೇಶ ಹಾಗೂ ಅಮೇರಿಕಾದಲ್ಲೂ ಚಿತ್ರ ಬಿಡುಗಡೆ ಮಾಡಿ ಪ್ರಶಂಸೆ ಗಿಟ್ಟಿಸಿಕೊಂಡು ಪ್ರೇಕ್ಷಕರನ್ನು ಕಮಾಲ್ ಮಾಡಿದ್ದಾರೆ.[2015ರ 'ಮೋಸ್ಟ್ ಕಾಂಟ್ರವರ್ಶಿಯಲ್' ಹಾಡು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ]


ಕಥೆ-ಚಿತ್ರಕಥೆ-ನಿರ್ದೇಶನ ಮಾಡಿದ್ದ ಉಪ್ಪಿ ಅವರ ಉಪ್ಪಿ-ಟ್ಟು ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಉತ್ತಮ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.


ರಿಯಲ್ ಸ್ಟಾರ್ ಉಪೇಂದ್ರ ಅವರು ಅಮೇರಿಕದಲ್ಲಿ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಚಿತ್ರದ ಪ್ರಚಾರ ಕಾರ್ಯಕ್ಕೆ ಯುಎಸ್ಎ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರೇಕ್ಷಕರಿಂದ ಹಾಗೂ ಅಭಿಮಾನಿಗಳಿಂದ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು.[ರಿಯಲ್ ಸ್ಟಾರ್ ಉಪ್ಪಿ2ಗೆ ಮತ್ತೆ ಒಗ್ಗರಣೆ ಹಾಕಿಲ್ಲ ]


Upendra

ಒಟ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ತೆರೆಕಂಡ ಮೇಲೆ ಸ್ಯಾಂಡಲ್ ವುಡ್ ಗೆ ಶುಭಶಕುನ ಘಳಿಗೆ ಪ್ರಾರಂಭವಾಗಿದ್ದು, ಉಪೇಂದ್ರ ಅವರ 'ಉಪ್ಪಿ-ಟ್ಟು' ಸೇರಿದಂತೆ ಇನ್ನು ಹಲವಾರು ಕನ್ನಡ ಚಿತ್ರಗಳು ಉತ್ತಮ ರೆಸ್ಪಾನ್ಸ್ ಗಳಿಸುವ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ.


ಅದೇನೇ ಇರಲಿ ಕನ್ನಡ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರು ಇದೇ ರೀತಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಶುಭಹಾರೈಸಿದರೆ, ಸದ್ಯದಲ್ಲಿಯೇ ಕನ್ನಡ ಚಿತ್ರರಂಗದ ಏಳಿಗೆ ಗ್ಯಾರಂಟಿ ಅಂತ ನಮ್ಮ ಅನಿಸಿಕೆ ಇದಕ್ಕೆ ನೀವೇನಂತೀರಾ?.

English summary
Upendra's directorial 'Uppi 2' which was released on August 14 has completed a successful 50 day run at the box-office. 'Uppi 2' is the first film produced by Priyanka Upendra and Upendra had directed the film apart from acting and scripting it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada