»   » ಥಿಯೇಟರ್ ನಲ್ಲಿ ಬಿಸಿ ಬಿಸಿ 'ಉಪ್ಪಿಟ್ಟು' ತಿಂದ ಪ್ರೇಕ್ಷಕರು

ಥಿಯೇಟರ್ ನಲ್ಲಿ ಬಿಸಿ ಬಿಸಿ 'ಉಪ್ಪಿಟ್ಟು' ತಿಂದ ಪ್ರೇಕ್ಷಕರು

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಎಲ್ಲೆಡೆ ಇಂದು ಹಬ್ಬದ ವಾತಾವರಣ ಕಂಡು ಬರುತ್ತಿದೆ. ತುಂಬಾ ದಿನಗಳ ನಂತರ ಅಭಿಮಾನಿಗಳ ಕುತೂಹಲ ಹಾಗೂ ನಿರೀಕ್ಷೆಗಳಿಗೆ ಇಂದು ತೆರೆ ಬಿದ್ದಿದೆ.

ಹೌದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಇಂದು ಮಧ್ಯರಾತ್ರಿಯಲ್ಲಿಯೇ ತೆರೆ ಮೇಲೆ ಅಪ್ಪಳಿಸಿದೆ. ಚುಮು ಚುಮು ಚಳಿಯನ್ನು ಲೆಕ್ಕಿಸದೇ ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಮುಂದೆ ಉಪ್ಪಿ ಅಭಿಮಾನಿಗಳು ಜಮಾಯಿಸಿದ್ದರು.

ಉಪೇಂದ್ರ ಅವರ ನಿರ್ದೇಶಿಸಿ ನಟಿಸುತ್ತಿರುವ ವಿಶೇಷ ಚಿತ್ರ 'ಉಪ್ಪಿ 2' ಇಂದು ತೆರೆ ಮೇಲೆ ಬಂದಿದ್ದು, ಉಪ್ಪಿ ಮೇನಿಯಾ ನೋಡಿ ರಿಯಲ್ ಸ್ಟಾರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಅಂದ ಹಾಗೆ ಉಪೇಂದ್ರ ಅವರು ಇಂದು ನಿರಾಳವಾಗಿ ಉಸಿರಾಡುತ್ತಿದ್ದಾರೆ ಅದು ಯಾಕಂತೀರಾ, ಏನಪ್ಪಾ ಅಂದ್ರೆ ಜನರ ತಲೆಯಲ್ಲಿ ಹುಳ ಬಿಟ್ಟು ಅವರಿಗೆ ಟೆನ್ಶನ್ ಕೊಡುವ ಬದಲು ಚಿತ್ರ ಬಿಡುಗಡೆಯಾಗುವವರೆಗೂ ಇವರೇ ಫುಲ್ ಟೆನ್ಶನ್ ಮಾಡಿಕೊಂಡಿದ್ದರಂತೆ.

ಎಲ್ಲಿ ತಮ್ಮ ಚಿತ್ರ ತಂಡದವರು ಅಪ್ಪಿ-ತಪ್ಪಿ ಬಾಯಿ ಬಿಟ್ಟು ರಹಸ್ಯ ಬಿಚ್ಚಿಟ್ಟುಬಿಡುತ್ತಾರೆ ಅಂತ. ಅದರಲ್ಲೂ 'ಉಪ್ಪಿ 2' ಪ್ರತ್ರಿಕಾಗೋಷ್ಠಿಯಲ್ಲಿ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮಾತನಾಡುವಾಗಲಂತೂ ಉಪ್ಪಿ ಕುಂತಲ್ಲೇ ಚಡಪಡಿಸುತ್ತಿದ್ದರಂತೆ.

ಇನ್ನೂ ಇಂದು ಚಿತ್ರ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ಸಂಭ್ರಮವನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ....

ಈಶ್ವರಿ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ

ಬೆಂಗಳೂರಿನ ಈಶ್ವರಿ ಚಿತ್ರಮಂದಿರದಲ್ಲಿ 'ಉಪ್ಪಿ 2' ಚಿತ್ರದ ಮೊದಲ ಪ್ರದರ್ಶನದ ವೇಳೆ ಕಂಡು ಬಂದ ಅಭಿಮಾನಿಗಳ ಕ್ರೇಜ್ ಹೇಗಿದೆ ನೋಡಿ.

'ನಾನು' ಜೊತೆ 'ನೀನು' ಮಾತುಕತೆ

ನಸುಕಿನಲ್ಲಿ ಚುಮು ಚುಮು ಚಳಿಯನ್ನು ಲೆಕ್ಕಿಸದೇ 'ಉಪ್ಪಿ 2' ಚಿತ್ರ ನೋಡಲು ಬಂದ ಅಭಿಮಾನಿಗಳು ಉಪೇಂದ್ರ ಅವರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ಆಟೋಗ್ರಾಫ್ ಜೊತೆಗೆ ಸೆಲ್ಫಿ ತೆಗೆದುಕೊಂಡರು.

ಎಲ್ಲೆಲ್ಲೂ 'ನೀನು' ನನ್ನಲ್ಲೂ 'ನೀನು'

ಎಲ್ಲೆಡೆ ಉಪ್ಪಿ ಮೇನಿಯಾ ಪ್ರಾರಂಭವಾಗಿದೆ ಅಭಿಮಾನಿಗಳು ಬೃಹತ್ ಕಟೌಟ್ ಗಳನ್ನು ಹಾಕಿ ಸಂಭ್ರಮಪಡುತ್ತಿದ್ದಾರೆ. ಅಭಿಮಾನಿ ದೇವರುಗಳು ಅವರೊಳಗೂ ತಮ್ಮ ಗಾಡ್ ಫಾದರ್ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಕಾಣುತ್ತಿದ್ದಾರೆ.

ಮುಂಜಾನೆಯಿಂದಲೇ ಪ್ರಾರಂಭವಾದ 'ಉಪ್ಪಿಟ್ಟು' ಮೇನಿಯಾ

ನಸುಕಿನ ಜಾವದಲ್ಲೇ ಎದ್ದು ತರಾತುರಿಯಲ್ಲಿಯೇ ಚಿತ್ರಮಂದಿರಗಳತ್ತ ದೌಡಾಯಿಸಿದ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು. ವಿಶೇಷವಾಗಿ ಚಿತ್ರಮಂದಿರಗಳ ಬಾಗಿಲು ತೆರೆಯುವುದಕ್ಕೂ ಮುನ್ನವೇ ಪ್ರೇಕ್ಷಕರು ಜಮಾಯಿಸಿದ್ದನ್ನು ಉಪ್ಪಿ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

'ಉಪ್ಪಿ 2' ಫಸ್ಟ್ ಹಾಫ್ ನಲ್ಲಿ ಪಾಸಿಟಿವ್ ರೆಸ್ಪಾನ್ಸ್

ರಿಯಲ್ ಸ್ಟಾರ್ ಉಪೇಂದ್ರ ಅವರ ನಿನ್ನೊಳಗಿನ ಪ್ರಪಂಚ 'ಉಪ್ಪಿ 2' ಫಸ್ಟ್ ಹಾಫ್ ನಲ್ಲಿ ಉತ್ತಮವಾಗಿದೆ ಅಂತ ಸಿನಿಮಾ ನೋಡಿದವರ ಅಭಿಪ್ರಾಯ. ಜೊತೆಗೆ ಮೊದಲ ಅರ್ಧ ಭಾಗ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ ಅಂತ ಟ್ವಿಟ್ಟರ್ ನಲ್ಲಿ ಲೈವ್ ಕಮೆಂಟ್.

English summary
Kannada actor Upendra's 'Uppi 2' Realesed. In the movie got very good response from the Audiuence all over Karnataka. 'Uppi 2' features Kannada actor Upendra, Actress Parul Yadav, Actress Kristina Akheeva in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada