»   » ಮಧ್ಯರಾತ್ರಿಯಲ್ಲಿ ಉಪ್ಪಿ2 ತಿನ್ನೋಕೆ ನೀವು ರೆಡಿನಾ?

ಮಧ್ಯರಾತ್ರಿಯಲ್ಲಿ ಉಪ್ಪಿ2 ತಿನ್ನೋಕೆ ನೀವು ರೆಡಿನಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇದೀಗ ರಿಯಲ್ ಸ್ಟಾರ್ 'ಉಪ್ಪಿ 2' ಹವಾ ಎಷ್ಟರಮಟ್ಟಿಗೆ ಇದೆ ಅಂದ್ರೆ ಅಭಿಮಾನಿಗಳು ಊಟ, ನಿದ್ದೆ ಬಿಟ್ಟು ಮಧ್ಯರಾತ್ರಿಯಲ್ಲೂ 'ಉಪ್ಪಿಟ್ಟು' ನೋಡಲು ತಯಾರಾಗಿದ್ದಾರೆ, ಅಷ್ಟರಮಟ್ಟಿಗೆ ರಿಯಲ್ ಸ್ಟಾರ್ ನಿರ್ದೇಶನ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ.

ಅಂದಹಾಗೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಕಾಣುತ್ತಿರುವ 'ಉಪ್ಪಿ 2' ಚಿತ್ರಕ್ಕೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.


ಕರ್ನಾಟಕದಾದ್ಯಂತ ಸುಮಾರು 250 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಟ್ಟು 400 ಚಿತ್ರಮಂದಿರಗಳಲ್ಲಿ ತೆಲುಗು ವರ್ಷನ್ ತೆರೆ ಕಾಣುತ್ತಿದೆ.['ಉಪ್ಪಿ2', 'ಓಂ' ಉಪ್ಪಿ ಅಭಿಮಾನಿಗಳಿಗೆ ಈ ವಾರ ಹಬ್ಬ]


Kannada actor Upendra's 'Uppi 2' Midnight Shows

ಇದೀಗ ಉಪೇಂದ್ರ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರ ಬಿಡುಗಡೆಯ ದಿನ (ಆಗಸ್ಟ್ 14) ಮಧ್ಯರಾತ್ರಿ ಚಿತ್ರ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ, ಎಂದು 'ಉಪ್ಪಿ 2' ಚಿತ್ರದ ವಿತರಕ ಶ್ರೀಕಾಂತ್ ಹೇಳಿದ್ದಾರೆ.


ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಹವಾ ನೋಡ್ತಾ ಇದ್ರೆ ಕನ್ನಡ ಚಿತ್ರರಂಗದಲ್ಲಿ ಒಂದು ಚರಿತ್ರೆ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜೊತೆಗೆ ಗಾಂಧಿನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಅಂದರೂ ಸರಿಯೇ.[ರಿಯಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಗೆ ವಿಶ್ ಮಾಡಿದ ಕಿಚ್ಚ]


ಅಭಿಮಾನಿಗಳಲ್ಲಿ 'ಉಪ್ಪಿ 2' ಕ್ರೇಜ್ ಎಷ್ಟಿದೆ ಅಂದರೆ ಉತ್ತರ ಹಳ್ಳಿಯ ಉಪೇಂದ್ರ ಅವರ ಅಭಿಮಾನಿ ಬಳಗವನ್ನು ನೋಡಿಕೊಳ್ಳುತ್ತಿರುವ ಕಿಶೋರ್ ಎಂಬಾತ ಉಪೇಂದ್ರ ಅವರ ದೊಡ್ಡ ಅಭಿಮಾನಿ ಆಗಿದ್ದು, ಸಿನಿಪೊಲಿಸ್ ನಲ್ಲಿ ಮೊದಲ ದಿನದ ಮೊದಲ ಶೋ ನೋಡಲು ಸುಮಾರು 400 ಟಿಕೆಟ್ ಬುಕ್ ಮಾಡಿ ಉಪ್ಪಿ ಅವರ ಉಳಿದ ಅಭಿಮಾನಿ ಭಕ್ತರಿಗೆ ಅಚ್ಚರಿ ಉಂಟು ಮಾಡಿದ್ದಾನೆ.


Kannada actor Upendra's 'Uppi 2' Midnight Shows

ಒಟ್ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಇಂತಹ ಬೆಳವಣಿಗೆ ಅಗುತ್ತಿರುವುದು ಕಂಡರೆ ಇನ್ನೂ ಇಂತಹದೇ ತುಂಬಾ ಚಿತ್ರಗಳು ಕನ್ನಡದಲ್ಲಿ ಬಂದರೆ ಕನ್ನಡ ಚಿತ್ರರಂಗದಲ್ಲಿ ಒಂದು ಮಹತ್ತರ ಬದಲಾವಣೆ ಗ್ಯಾರಂಟಿ.[ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್]


ಅದೇನೇ ಇರಲಿ ಸದ್ಯಕ್ಕೆ 'ಉಪ್ಪಿ 2' ತೆರೆ ಮೇಲೆ ಬರುತ್ತಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರ ವಿಶೇಷತೆಗಳನ್ನು ಪ್ರೇಕ್ಷಕ ವರ್ಗದವರು ಅದ್ಯಾವ ರೀತಿ ಸ್ವೀಕರಿಸಿ ಗೆಲ್ಲಿಸುತ್ತಾರೆ ಅನ್ನೋದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

English summary
Kannada movie 'Uppi 2' releasing more than 250 theatres in Karnataka. And also release across Andhra Pradesh and Telangana in the least 400 theatres. According to the report there is a lot of demand from Upendra fans who are asking for a midnight show for 'Uppi 2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada