»   » ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್

ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಈಗ ಕೊಂಚ ರಫ್ ಅಂಡ್ ಟಫ್ ಆಗಿದ್ದಾರೆ. ಸದಾ ರೊಮ್ಯಾಂಟಿಕ್ ಮೂಡ್ ನಲ್ಲಿರುತ್ತಿದ್ದ ರವಿಮಾಮ, ಈಗ ಖಾಕಿ ತೊಟ್ಟು ಖೇಡಿಗಳ ರುಂಡ ಚೆಂಡಾಡುತ್ತಿದ್ದಾರೆ.

ಹೌದು, ರವಿಚಂದ್ರನ್ ಹಾಗೆ ಖಾಕಿ ತೊಟ್ಟಿರುವುದು 'ಲಕ್ಷ್ಮಣ' ಚಿತ್ರಕ್ಕಾಗಿ. ಅನೂಪ್ ರೇವಣ್ಣಗೆ ತಂದೆ ಪಾತ್ರ ನಿರ್ವಹಿಸುತ್ತಿರುವ ರವಿಚಂದ್ರನ್ ಸಿನಿಮಾದಲ್ಲಿ ಎಸಿಪಿ ಆಗೂ ಮಿಂಚಲಿದ್ದಾರೆ.

lakshmana

ಕಳೆದ ಸೋಮವಾರದಿಂದ ರವಿಚಂದ್ರನ್ 'ಲಕ್ಷ್ಮಣ' ತಂಡವನ್ನು ಸೇರಿಕೊಂಡಿದ್ದು, ಮೊದಲ ಹಂತದಲ್ಲಿ ಫೋಟೋಶೂಟ್ ನಡೆದಿದೆ. ಈಗ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ರವಿಚಂದ್ರನ್ ಖಾಕಿ ತೊಟ್ಟು ರೌಡಿಗಳ ಬೆನ್ನು ಮೂಳೆ ಮುರಿಯುತ್ತಿರುವ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

lakshmana

ಹಾಗ್ನೋಡಿದ್ರೆ, ರವಿಚಂದ್ರನ್ ಖಾಕಿ ಖದರ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ, 'ಶಾಂತಿ ಕ್ರಾಂತಿ', 'ಅಭಿಮನ್ಯು', 'ಚಿನ್ನ' ಚಿತ್ರಗಳಲ್ಲಿ ಪೊಲೀಸ್ ಪಾತ್ರ ನಿರ್ವಹಿಸಿದ್ದ ರವಿಚಂದ್ರನ್, ಇದೀಗ ವರ್ಷಗಳ ಗ್ಯಾಪ್ ನಂತರ ಎಸಿಪಿ ಆಗಿದ್ದಾರೆ. ['ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್]

'ಲಕ್ಷ್ಮಣ' ಚಿತ್ರದ ಮೂಲಕ ರಾಜಕಾರಣಿ ಹೆಚ್.ಎಂ.ರೇವಣ್ಣ ಪುತ್ರ ಅನೂಪ್ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಆರ್.ಚಂದ್ರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ 'ಲಕ್ಷ್ಮಣ' ಬಿಜಿಯಾಗಿದ್ದಾನೆ.

English summary
Kannada Actor V.Ravichandran is playing the role of an Assistant Commissioner of Police in R.Chandru directorial 'Lakshmana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada