»   » ಕನ್ನಡ ರಾಜ್ಯೋತ್ಸವ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಕೊಡುಗೆ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಕೊಡುಗೆ

Posted By:
Subscribe to Filmibeat Kannada

ಕನಸುಗಾರ ರವಿಚಂದ್ರನ್ ರವರ ಹೊಸ ಕನಸು 'ಅಪೂರ್ವ'. ವರ್ಷದಿಂದ ಸಖತ್ ಸ್ಟೈಲಿಶ್ ಆಗಿ ರೆಡಿಯಾಗಿರುವ 'ಅಪೂರ್ವ' ಸಿನಿಮಾ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತೆರೆ ಕಾಣಲಿದೆ.

ಹಾಗ್ನೋಡಿದ್ರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿರುವ 'ಅಪೂರ್ವ' ಏಪ್ರಿಲ್ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದ್ರೆ, ತಾಂತ್ರಿಕ ಕಾರಣಗಳಿಂದ ಚಿತ್ರದ ಬಿಡುಗಡೆ ಪೋಸ್ಟ್ ಪೋನ್ ಆಗಿದೆ.


apoorva

ಹ್ಹಾ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರವಿಚಂದ್ರನ್ 'ಅಪೂರ್ವ' ಬಿಡುಗಡೆ ಮಾಡುತ್ತಿರುವುದಕ್ಕೂ ಒಂದು ಕಾರಣ ಇದೆ. 'ಅಪೂರ್ವ' ಚಿತ್ರದ ಸಂಕಲನದಲ್ಲಿ ರವಿಚಂದ್ರನ್ ಹೊಸ ಪ್ರಯೋಗ ಮಾಡಿದ್ದಾರೆ. ಚಲನಚಿತ್ರ ಇತಿಹಾಸದಲ್ಲೇ ಇದು ನೂತನ ಪ್ರಯೋಗವಾಗಿದ್ದು, 'ಅಪೂರ್ವ' ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಮೈಲಿಗಲ್ಲು ಆಗಲಿದೆ ಅನ್ನುವ ವಿಶ್ವಾಸ ರವಿಚಂದ್ರನ್ ರವರಿಗಿದೆ. ಇದೇ ಕಾರಣಕ್ಕೆ ಕನ್ನಡ ರಾಜ್ಯೋತ್ಸವದಂದು 'ಅಪೂರ್ವ' ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ ಕ್ರೇಜಿ ಸ್ಟಾರ್. [ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]


ಆದ್ರೆ, ನವೆಂಬರ್ 1 ನೇ ತಾರೀಖು ಭಾನುವಾರ. ರವಿವಾರದಂದು ಇದುವರೆಗೂ ಯಾರೂ ಸಿನಿಮಾ ಬಿಡುಗಡೆ ಮಾಡಿಲ್ಲ. ಹೀಗಾಗಿ, ಆಕ್ಟೋಬರ್ 30ನೇ ತಾರೀಖು 'ಅಪೂರ್ವ' ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರೆ ರವಿಚಂದ್ರನ್.


19ರ ಹರೆಯದ ಹುಡುಗಿ ಮತ್ತು 61ರ ಮುದುಕನ ನಡುವಿನ ಅಪರೂಪದ ಪ್ರೇಮ ಕಥೆ 'ಅಪೂರ್ವ'. ಒಂದೇ ಲಿಫ್ಟ್ ನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು, 'ಅಪೂರ್ವ' ಮೂಲಕ ದಾಖಲೆಗಳನ್ನ ಸೃಷ್ಟಿಸುವುದಕ್ಕೆ ರವಿಚಂದ್ರನ್ ಉತ್ಸುಕರಾಗಿದ್ದಾರೆ.

English summary
Kannada Actor V.Ravichandran directorial 'Apoorva' is all set to release in October. Since, November 1st (Kannada Rajyotsava) is on Sunday, V.Ravichandran has planned to release the movie in October last week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada