»   » ಹೀರೋ ಆಯ್ತು ಇದೀಗ ವಿಲನ್ ಆಗ್ತಾರಂತೆ ವಿಜಯ ರಾಘವೇಂದ್ರ

ಹೀರೋ ಆಯ್ತು ಇದೀಗ ವಿಲನ್ ಆಗ್ತಾರಂತೆ ವಿಜಯ ರಾಘವೇಂದ್ರ

Posted By:
Subscribe to Filmibeat Kannada

ಸದಾ ಕೌಟುಂಬಿಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟ ವಿಜಯ ರಾಘವೇಂದ್ರ ಅವರು ಇದೀಗ ಕೊಂಚ ಬದಲಾವಣೆ ಇರಲಿ ಅಂತ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಲು ಆಸಕ್ತಿ ತೋರಿದ್ದಾರೆ.

ಹೌದು ನಿರ್ದೇಶಕ ವಿರಾಜ್ ಅವರ ಚೊಚ್ಚಲ ನಿರ್ದೇಶನದ 'ಯದಾ ಯದಾ ಹಿ ಧರ್ಮಸ್ಯ' ಎಂಬ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಶುಕ್ರವಾರ (ಏಪ್ರಿಲ್ 15) ದಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ವಿನಯ್ ರಾಜ್ ಕುಮಾರ್ ಅವರು ಕ್ಲ್ಯಾಪ್ ಮಾಡಿದ್ದಾರೆ.['ಟಾಸ್' ಹಾಕಿದ 'ಚಿನ್ನಾರಿ ಮುತ್ತಾ' ವಿಜಯ ರಾಘವೇಂದ್ರ]

Kannada Actor Vijay Raghavendra turns Villain in his Next Movie

'ಯದಾ ಯದಾ' ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ಅವರು ಹೊಸ ಅವತಾರದಲ್ಲಿ ಮಿಂಚುತ್ತಿರುವುದಕ್ಕೆ ಬಹಳ ಉತ್ಸುಕರಾಗಿದ್ದು, ಇವರು ಇಂತಹ ಪಾತ್ರದಲ್ಲಿ ಮಿಂಚುತ್ತಿರುವುದು ಇದೇ ಮೊದಲ ಬಾರಿಯಂತೆ.

'ಭೂಗತ ಲೋಕದ ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಕೂಡ ಸಾಮಾನ್ಯ ಜನರಿಗೆ ರಕ್ಷಕ. ಇದಕ್ಕಾಗಿಯೇ ವಿಜಯ್ ಅವರು ತಮ್ಮ ಇಮೇಜ್ ಅನ್ನು ಬದಲಾಯಿಸಿಕೊಳ್ಳಲಿದ್ದಾರೆ' ಎನ್ನುತ್ತಾರೆ ನಿರ್ದೇಶಕ ವಿರಾಜ್ ಅವರು.[ವಿಮರ್ಶೆ: ಹಳ್ಳಿ ಸೊಗಡಿನ ಕಲರ್ ಫುಲ್ 'ವಂಶೋದ್ಧಾರಕ']

ಏಪ್ರಿಲ್ 25ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಬೆಂಗಳೂರು, ಮಡಿಕೇರಿ, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆಸಲಿದ್ದು, ಚಿತ್ರದಲ್ಲಿ ರವಿಶಂಕರ್, ಸಾಧು ಕೋಕಿಲಾ, ಸುಧಾ ಬೆಳವಾಡಿ ಮುಂತಾದವರು ಪ್ರಮುಖ ತಾರಾಗಣದಲ್ಲಿ ಮಿಂಚಲಿದ್ದಾರೆ.

ವಿಶೇಷವಾಗಿ ಈ ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ನಟ ವಿಜಯ ರಾಘವೇಂದ್ರ ಅವರು ಸಿಕ್ಸ್ ಪ್ಯಾಕ್ ತಯಾರಿಯಲ್ಲಿ ತೊಡಗಿದ್ದಾರೆ.

English summary
Kannada Actor Vijay Raghavendra, who is usually seen playing lovable characters in family-oriented movies, is for the first time set to play a character with negative shades in Yada Yada Hi Dharmasya to be helmed by debutant Viraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada