»   » ನಟಿ ವಿಂಧ್ಯಾ ಚಂಚಲ ಸ್ವಭಾವದರು: ನಟ ಶ್ರೀಕಿ

ನಟಿ ವಿಂಧ್ಯಾ ಚಂಚಲ ಸ್ವಭಾವದರು: ನಟ ಶ್ರೀಕಿ

Posted By:
Subscribe to Filmibeat Kannada

ತೆರೆಕಾಣಬೇಕಿರುವ 'ಮನದ ಮರೆಯಲ್ಲಿ' ಚಿತ್ರದಲ್ಲಿ ನಟಿ ವಿಂಧ್ಯಾ ಜೊತೆ ಅಭಿನಯಿಸಿರುವ ಚಿತ್ರದ ನಾಯಕ ನಟ ಶ್ರೀಕಿ ಉರುಫ್ ಶ್ರೀಕಾಂತ್ ಅಕೆಯ ಆತ್ಮಹತ್ಯೆಗೆ ಪ್ರಯತ್ನಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಭದ್ರಾವತಿಯಲ್ಲಿರುವ ಅವರು ವಿಂಧ್ಯಾ ಚಿತ್ರೀಕರಣದಲ್ಲಿ ಹೇಗಿರುತ್ತಿದ್ದರು ಎಂಬ ಬಗ್ಗೆ ವಿವರ ನೀಡಿದ್ದಾರೆ.

ವಿಂಧ್ಯಾ ಆತ್ಮಹತ್ಯೆಗೆ ಯತ್ನಿಸಿರುವ ಮೇಸೇಜು ನನಗೆ ಈಗಷ್ಟೇ ಬಂತು. ಮಂಜುನಾಥ್ ಎಂಬುವವರನ್ನು ಅವರು ಲವ್ ಮಾಡುತ್ತಿದ್ದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಮೂಲಕ ನನಗೂ ಈಗಷ್ಟೇ ಗೊತ್ತಾಯಿತು. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು? ]

Vindhya with Sreekanth

ಶೂಟಿಂಗ್ ಸ್ಟಾಟ್ ನಲ್ಲಿ ನಾನು ಅವರು ಪಾತ್ರದ ಬಗ್ಗೆ ಮಾತ್ರ ಚರ್ಚಿಸುತ್ತಿದ್ದೆವು. ಆದರೆ ಅವರ ವೈಯಕ್ತಿಕ ವಿಚಾರಗಳ ಯಾವತ್ತೂ ಚರ್ಚಿಸಿರಲಿಲ್ಲ. ಈಗ ನ್ಯೂಸ್ ನಲ್ಲಿ ನೋಡಿದ ಮೇಲಷ್ಟೇ ನನಗೆ ಅವರು ಲವ್ ಮಾಡುತ್ತಿರುವ ವಿಚಾರ ಗೊತ್ತಾಯಿತು ಎಂದಿದ್ದಾರೆ.

ಶೂಟಿಂಗ್ ಸ್ಪಾಟ್ ನಲ್ಲಿ ಮಂಜುನಾಥ್ ಎಂಬುವವರು ಎಂದೂ ಕಾಣಿಸಿಕೊಂಡಿರಲಿಲ್ಲ, ಬರುತ್ತಲೂ ಇರಲಿಲ್ಲ. ಆದರೆ ವಿಂಧ್ಯಾ ಅವರಿಗೆ ಮಾತ್ರ ಖಡಕ್ ಡಿಸಿಷನ್ ತೆಗೆದುಕೊಳ್ಳುವಷ್ಟು ಬುದ್ಧಿ ಇರಲಿಲ್ಲ. ಅವರು ಇನ್ನೂ ಒಂಥರಾ ಚೆಲ್ಲುಚೆಲ್ಲಾಗಿ ಆಡುತ್ತಿದ್ದರು. ಅವರು ಫಿಕಲ್ ಮೈಂಡೆಡ್.

ಒಂದು ಸನ್ನಿವೇಶವನ್ನು ಹೇಳಿದಾಗ ಓಕೆ ಓಕೆ ಮಾಡ್ತೀನಿ ಅಂತಿದ್ದರು. ಆದರೆ ಆಕ್ಷನ್ ಕಟ್ ಹೇಳಿದಾಗ ಅವರಿಗೆ ಅದಕ್ಕೆ ತಕ್ಕ ಹಾವ ಭಾವ ಪ್ರದರ್ಶಿಸಲು ಸಾಧ್ಯವಾಗುತ್ತಿರಲಿಲ್ಲ. ಶೂಟಿಂಗ್ ಟೈಮ್ ನಲ್ಲಿ ಫೋನ್ ಕಾಲ್ ಬರುತ್ತಿದ್ದಂತಹ ಘಟನೆಗಳೇನೂ ನನ್ನ ಗಮನಕ್ಕೆ ಬಂದಿಲ್ಲ.

ಶೂಟಿಂಗ್ ಮುಗಿಯುವ ತನಕ ಫೋನನ್ನು ಬೇರೆಯವರ ಕೈಗೆ ಕೊಡುತ್ತಿದ್ದರು. ಸಂಜೆವರೆಗೂ ಆಕೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಆದರೆ ಆಕೆಗೆ ಮಂಜುನಾಥ್ ಎಂಬುವವರಿಂದ ಕರೆಬರುತ್ತಿದ್ದದ್ದು ನನಗೆ ಗೊತ್ತಿಲ್ಲ.

ಮೊನ್ನೆ ನ್ಯೂಸ್ ಚಾನಲ್ ನಲ್ಲಿ ನೋಡಿದಾಗಲೇ ಆಕೆಯ ಲವ್ ವಿಚಾರ ಗೊತ್ತಾಗಿದ್ದು. ಇಷ್ಟು ದಿನ ಅವರ ಫ್ಯಾಮಿಲಿ ಜೊತೆಗೂ ನನಗೆ ಕಾಂಟ್ಯಾಕ್ಟ್ ಇರಲಿಲ್ಲ. ವಿಂಧ್ಯಾ ಅವರಿಗೆ ತಂದೆತಾಯಿ ಇದ್ದರು ಎಂಬುದಷ್ಟೇ ಗೊತ್ತಿತ್ತು. ಸದ್ಯಕ್ಕೆ ನಾನು ಭದ್ರಾವತಿಯಲ್ಲಿದ್ದೇನೆ. ಬೆಳಗ್ಗೆಯಷ್ಟೇ ವಿಂಧ್ಯಾ ಆತ್ಮಹತ್ಯೆಗೆ ಯತ್ನಿಸಿರುವುದು ನನಗೆ ಗೊತ್ತಾಯಿತು ಎಂದಿದ್ದಾರೆ ಶ್ರೀಕಿ. (ಒನ್ಇಂಡಿಯಾ ಕನ್ನಡ)

English summary
Kannada actress Vindhya, who has attempted to suicide, is fickle minded and she is inconstant in her way said the co-star Sreekanth aka Sreeki of the movie 'Manada Mareyalli'. He also clarifies that I don't know much about her love matter. 
Please Wait while comments are loading...