For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ನಲ್ಲಿ 'ಡಾನ್' ಆದ ರಾಕಿಂಗ್ ಸ್ಟಾರ್ ಯಶ್!!

  By Suneetha
  |

  ಚಂದನವನದ ರಾಕಿಂಗ್ ಸ್ಟಾರ್ ಯಶ್ ಅವರು ಮತ್ತೆ ತಮ್ಮ ಜಬರ್ದಸ್ತ್ ಡ್ಯಾನ್ಸ್ ಮೂಲಕ ಡಾನ್ ಆಗಿದ್ದಾರೆ. ಈಗಾಗಲೇ ಯಶ್ ಅವರ ಬಹುನೀರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರದಲ್ಲಿ ರಾಕಿಂಗ್ ಸ್ಟಾರ್ ತಮ್ಮ ಸಖತ್ ಡ್ಯಾನ್ಸ್ ಪರ್ಫಾಮೆನ್ಸ್ ತೋರಿದ್ದಾರೆ.

  ಅಂದಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಪ್ರೊಫೆಶನಲ್ ಡ್ಯಾನ್ಸರ್ ಅಂತೂ ಖಂಡಿತ ಅಲ್ಲ. ಆದರೂ ಲೀಲಾಜಾಲವಾಗಿ ಮಾಡುವ ತಮ್ಮ ಸ್ಟೈಲಿಷ್ ಸ್ಟೆಪ್ ಗಳಿಂದ ಪ್ರೇಕ್ಷಕರನ್ನು ವಶೀಕರಣ ಮಾಡಿ, ಮೋಡಿ ಮಾಡುತ್ತಾರೆ.

  ಇನ್ನು 'ಮಾಸ್ಟರ್ ಪೀಸ್' ಚಿತ್ರದಲ್ಲಿ ಯಶ್ ಅವರ ಇಂಟ್ರೊಡಕ್ಷನ್ ಹಾಡಿದ್ದು, ಅದಕ್ಕೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಜೊತೆಗೆ ಈ ಹಾಡಿನ ಶೂಟಿಂಗ್ ಬೆಂಗಳೂರಿನ ಸುತ್ತಮುತ್ತ ಹಾಗೂ ಕೆಲವೊಂದು ಸೀನ್ ಗಳ ಚಿತ್ರೀಕರಣ ದುಬೈನಲ್ಲಿ ಮಾಡಲಾಗಿದೆ.[ಯಶ್ ಗೆ, ಈ ವರ್ಷ 'ಮಾಸ್ಟರ್ ಪೀಸ್', ಬ್ಲಾಕ್ ಬಸ್ಟರ್ ಸಿನಿಮಾ ಆಗುತ್ತಾ?]

  ಯಶ್ ಅವರ ಅಭಿಮಾನಿಗಳು ಅವರನ್ನು ತುಂಬಾ ಇಷ್ಟ ಪಡಲು ಕಾರಣ ಅವರ ಡ್ಯಾನ್ಸ್ ಅಂತೆ. "ಬರೀ ನಟನೆಯನ್ನು ಜನ ಇಷ್ಟ ಪಡುವುದಿಲ್ಲ ಬದ್ಲಾಗಿ ನಟನೆ ಜೊತೆಗೆ ಇಲ್ಲಿ ಡ್ಯಾನ್ಸ್ ಕೂಡ ಎಲ್ಲರಿಗೂ ಇಷ್ಟವಾಗುತ್ತದೆ. ಅದಕ್ಕಾಗಿ ನಾನು ನನ್ನ ನಟನೆಯ ಜೊತೆಗೆ ನನ್ನ ಡ್ಯಾನ್ಸ್ ಸ್ಕಿಲ್ ಅನ್ನು ಕೂಡ ಕಂಬೈನ್ ಮಾಡಿಕೊಂಡಿದ್ದೇನೆ. ಮತ್ತೆ ನನ್ನ ಡ್ಯಾನ್ಸ್, ನಾನು ಮಾಡುವ ಪಾತ್ರದ ಮೇಲೆ ಡಿಪೆಂಡ್ ಆಗಿರುತ್ತದೆ. ಎಂದು ಯಶ್ ನುಡಿಯುತ್ತಾರೆ.

  ಆದರೆ ಯಶ್ ಅವರು ತಮ್ಮ ಕೌಶಲ್ಯವನ್ನು ಒಂದು ಐಡಿಯಲ್ ಆಗಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಅದಕ್ಕೆ ಉತ್ತಮ ನಿದರ್ಶನ ಅಂದರೆ, ಅವರ 'ಕಿರಾತಕ', 'ಲಕ್ಕಿ' ನಂತರ 'ಗೂಗ್ಲಿ' ಹಾಗೂ 'ಗಜಕೇಸರಿ' ಚಿತ್ರದಲ್ಲಿ ತಮ್ಮ ಡ್ಯಾನ್ಸ್, ಜೊತೆಗೆ ಟ್ಯಾಲೆಂಟ್ ಅನ್ನು ಪ್ರೇಕ್ಷಕರಿಗೆ ತೋರಿದ್ದಾರೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]

  ಇದೀಗ ಚೊಚ್ಚಲ ನಿರ್ದೇಶಕ ಮಂಜು ಮಾಂಡವ್ಯ ಅವರ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಯಶ್ ಅವರ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗಲಿಲ್ಲವಂತೆ, ನಟ ಯಶ್ ಅವರ ಮೊಣಕಾಲಿಗೆ ಗಾಯ ಆಗಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚು ಸ್ಟ್ರೈನ್ ತೆಗೆದುಕೊಳ್ಳಲು ಹೋಗಲಿಲ್ಲವಂತೆ.[ಮತ್ತೆ ಮೋಡಿ ಮಾಡಲಿರುವ 'ಮಿ.ಅಂಡ್ ಮಿಸಸ್' ರಾಮಾಚಾರಿ ಜೋಡಿ]

  'ಇದೀಗ ಸದ್ಯಕ್ಕೆ ನನ್ನ ಮೊಣಕಾಲಿನ ಗಾಯ ನನ್ನ ಡ್ಯಾನ್ಸ್ ಪರ್ಫಾಮೆನ್ಸ್ ಗೆ ತಡೆಯಾಗಿದೆ, ಆದಷ್ಟು ಬೇಗ ಗುಣಮುಖನಾಗಿ ಮತ್ತೆ ಅದೇ ಹಳೇ ಖದರ್ ತೋರಿಸುತ್ತೇನೆ, ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಅನ್ನು ನನ್ನ ಪ್ರೀತಿಯ ಅಭಿಮಾನಿಗಳಿಗೆ ನೀಡುತ್ತೇನೆ ಎಂದು ಯಶ್ ನುಡಿಯುತ್ತಾರೆ.

  'ನನ್ನ ಪ್ರಕಾರ ಡ್ಯಾನ್ಸ್ ಅಂದ್ರೆ ಅದು ಬರೀ ಡ್ಯಾನ್ಸ್ ಅಲ್ಲ ಬದಲಾಗಿ ಅದು ಒಂದು ಹಾರ್ಡ್ ವರ್ಕ್, ಜೊತೆಗೆ ನಾನು ನಂಬಿರುವ ಪ್ರಕಾರ ಪ್ರತಿಯೊಬ್ಬ ನಟನು ತನ್ನ ಉತ್ತಮ ನಟನೆಯಿಂದ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವುದು, ಜೊತೆಗೆ ಇದರೊಂದಿಗೆ ಡ್ಯಾನ್ಸ್ ಸ್ಕಿಲ್ ಒಂದು ಬೋನಸ್ ಪಾಯಿಂಟ್ ಆಗುತ್ತೆ'.

  'ನನಗೆ ಡ್ಯಾನ್ಸ್ ಫಾರ್ಮ್ ನ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲ, ಆದರೆ ಯಾವುದೇ ರೀತಿಯ ಡ್ಯಾನ್ಸ್ ಅನ್ನು ಕೂಡ ನಾನು ಇಷ್ಟಪಡುತ್ತೇನೆ. ಅಲ್ಲದೇ ಜನ ನನ್ನ ಡ್ಯಾನ್ಸ್ ಅನ್ನು ಇಷ್ಟಪಡ್ತಾರೆ ಅನ್ನೋದೇ ನನಗೆ ಎಕ್ಸಾಟ್ರಾ ಬೋನಸ್' ಎಂದು ರಾಕಿಂಗ್ ಸ್ಟಾರ್ ಯಶ್ ನುಡಿಯುತ್ತಾರೆ.

  ಈಗಾಗಲೇ 'ಮಾಸ್ಟರ್ ಪೀಸ್' ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಯಶ್ ಹಾಗೂ ಚಿತ್ರತಂಡ ಸಾಂಗ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ. ಇನ್ನು ಡಿಸೆಂಬರ್ 24 ರಂದು ಈ ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ. ಕಳೆದ ವರ್ಷ ಅದೇ ದಿನದಂದು 'ಮಿ.ಅಂಡ್ ಮಿಸಸ್ ರಾಮಾಚಾರಿ' ಬಿಡುಗಡೆಯಾಗಿದ್ದು, ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಅದಕ್ಕಾಗಿ ಅದು ಯಶ್ ಅವರಿಗೆ ಲಕ್ಕಿ ಡೇ ಎಂದು 'ಮಾಸ್ಟರ್ ಪೀಸ್' ಕೂಡ ಆ ದಿನದಂದೇ ತೆರೆ ಕಾಣುತ್ತಿದೆ.

  English summary
  Yash will again don his dancing shoes for his upcoming film Masterpiece. Not a trained dancer, his strength has been his natural ability to go along with any music, and time and again he has mesmerised the audience with his scintinallating moves. For the introduction song in the film, choreographed by Imran Sardhariya, Yash is shooting in and around Bengaluru, and will be shooting a few portions at locations in Dubai. The movie is directed by Manju Mandavya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X