For Quick Alerts
  ALLOW NOTIFICATIONS  
  For Daily Alerts

  ಯಶ್ ಮಗಳ ಜಾತಕದಲ್ಲಿ 'ಸಿಂಹಾಸನ ಯೋಗ': ಮಗಳ ಭವಿಷ್ಯ ಹೇಗಿದೆ?

  By ಪಂಡಿತ್ ವಿಠ್ಠಲ ಭಟ್
  |
  ಯಶ್ ರಾಧಿಕಾ ಪಂಡಿತ್ ಮಗುವಿನ ಜಾತಕದ ವಿಶ್ಲೇಷಣೆ | FILMLBEAT KANNADA

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹೆಣ್ಣು ಮಗು ಆಗಿರುವುದಕ್ಕೆ ತೀವ್ರ ಸಂತಸದಲ್ಲಿರುವ ಯಶ್ ಮತ್ತು ಕುಟುಂಬ ಮನೆಗೆ ಮಹಾಲಕ್ಷ್ಮಿ ಬಂದಿದೆ ಎಂದು ಸಂಭ್ರಮಿಸುತ್ತಿದ್ದಾರೆ.

  ಯಶ್-ರಾಧಿಕಾ ಮಗಳ ಜಾತಕ, ರಾಶಿ, ನಕ್ಷತ್ರ ಹೀಗೆ ಹಲವು ಕುತೂಹಲಕಾರಿ ವಿಷ್ಯಗಳು ಅಭಿಮಾನಿಗಳನ್ನ ಕಾಡುವುದು ಸಹಜ. ಯಶ್ ಮಗಳ ಜಾತಕ ಹೇಗಿದೆ, ರಾಶಿ ಫಲಗಳು ಏನು ಹೇಳುತ್ತದೆ, ಮಗಳ ಭವಿಷ್ಯ ಹೇಗಿರಬಹುದು ಎಂಬ ಎಲ್ಲಾ ಅಂಶಗಳನ್ನ ಪಂಡಿತ್ ವಿಠ್ಠಲ ಭಟ್ ಅವರು ತಿಳಿಸಿದ್ದಾರೆ.

  ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ

  ಡಿಸೆಂಬರ್ 2, 2018ರಂದು ಬೆಳಗ್ಗೆ 6.20ಕ್ಕೆ ಯಶ್ -ರಾಧಿಕಾ ತಾರಾ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಕಾರ್ತೀಕ ಮಾಸದ ಕೃಷ್ಣ ದಶಮಿಯಂದು ಆಯುಷ್ಮಾನ್ ಯೋಗ ಹಾಗೂ ಭದ್ರ ಕರಣ, ಹಸ್ತಾ ನಕ್ಷತ್ರದ 1ನೇ ಪಾದ, ಕನ್ಯಾ ರಾಶಿ ಹಾಗೂ ವೃಶ್ಚಿಕ ಲಗ್ನದಲ್ಲಿ ಮಗುವಿನ ಜನನವಾಗಿದೆ. ಹುಟ್ಟಿದ ಸಮಯಕ್ಕೆ ಜಾತಕವನ್ನು ಸಿದ್ಧಪಡಿಸಿದ ಮೇಲೆ ಲಗ್ನದಿಂದ ಹಾಗೂ ರಾಶಿಯಿಂದ ಹೀಗೆ ಎರಡರಿಂದಲೂ ಫಲ ನುಡಿಯುವ ಪದ್ಧತಿ ಇದೆ. ಹೆಚ್ಚಿನ ವಿವರ ತಿಳಿಯಲು ಮುಂದೆ ಓದಿ....

  ಉತ್ತಮವಾದ ಫಲಗಳನ್ನು ಸೂಚಿಸುತ್ತಿದೆ

  ಉತ್ತಮವಾದ ಫಲಗಳನ್ನು ಸೂಚಿಸುತ್ತಿದೆ

  ಈ ಮಗುವಿನ ಜಾತಕವು ಚಂದ್ರನ ಮನೆಯಿಂದ ನೋಡುವಾಗ ಉತ್ತಮವಾದ ಫಲಗಳನ್ನು ಸೂಚಿಸುತ್ತಿದೆ. ಗ್ರಹ ಸ್ಥಿತಿ ಗಮನಿಸುವುದಾದರೆ, ಲಗ್ನದಲ್ಲೇ ರವಿ, ಬುಧ ಹಾಗೂ ಗುರು ಗ್ರಹಗಳಿವೆ. ಅಲ್ಲಿಂದ ಎರಡನೇ ಮನೆಯಲ್ಲಿ ಶನಿ ಹಾಗೂ ಹನ್ನೆರಡನೇ ಮನೆಯಲ್ಲಿ ಶುಕ್ರ, ಹನ್ನೊಂದರಲ್ಲಿ ಚಂದ್ರ, ಒಂಬತ್ತರಲ್ಲಿ ರಾಹು, ಮೂರರಲ್ಲಿ ಕೇತು, ನಾಲ್ಕರಲ್ಲಿ ಕುಜ ಇದೆ. ಇಷ್ಟು ವಿಚಾರವು ಗ್ರಹ ಸ್ಥಿತಿಯನ್ನು ತಿಳಿಸುವುದಕ್ಕೆ ಸಂಬಂಧಿಸಿದ್ದಾಯಿತು. ಇನ್ನುಳಿದಂತೆ ಆ ಗ್ರಹಗಳು ನೀಡುವ ಫಲವೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

  ಯಶ್ ಆಸೆ ಈಡೇರಿತು : ಸಂತಸ ಹಂಚಿಕೊಂಡ ರಾಕಿಂಗ್ ಕುಟುಂಬ

  ಜೀವನ ಪರ್ಯಂತ ವಿಶೇಷವಾಗಿರಲಿದೆ

  ಜೀವನ ಪರ್ಯಂತ ವಿಶೇಷವಾಗಿರಲಿದೆ

  ಜೀವನ ಪರ್ಯಂತ ವಿಶೇಷ ಹಾಗೂ ಉತ್ತಮ ಫಲ ದೊರೆಯುತ್ತದೆ. ಜನ್ಮ ಲಗ್ನದಲ್ಲೇ ಗುರು ಇರುವುದು ಅತ್ಯುತ್ತಮ ವಿಚಾರ. ವೃಶ್ಚಿಕ ಮಾಸದ ಸೂರ್ಯೋದಯ ಕಾಲದಲ್ಲಿ ಶಿಶು ಜನನ ಆಗಿರುವುದರಿಂದ ಮಗುವಿನ ಜನ್ಮ ಲಗ್ನ ವೃಶ್ಚಿಕ ಆಗುತ್ತದೆ. ಆದುದರಿಂದ ಜನ್ಮ ಲಗ್ನದಲ್ಲಿಯೇ ಗುರು ಗ್ರಹ ಸ್ಥಿತ ಆಗಿರುವುದು ಬಹಳ ವಿಶೇಷ ಹಾಗೂ ಉತ್ತಮ ಫಲಗಳನ್ನು ಜೀವನ ಪರ್ಯಂತ ನೀಡುತ್ತವೆ. ಇನ್ನು ಜನ್ಮ ಲಗ್ನದಲ್ಲೇ ಗುರು ಗ್ರಹ ಇದೆ ಇದು ಅತ್ಯುತ್ತಮ ವಿಚಾರ.

  ಹಠದ ಸ್ವಭಾವ ಸ್ವಲ್ಪ ಹೆಚ್ಚು

  ಹಠದ ಸ್ವಭಾವ ಸ್ವಲ್ಪ ಹೆಚ್ಚು

  ಎಲ್ಲ ದೋಷಗಳಿಗೆ ಗುರುವಿನಿಂದ ರಕ್ಷಣೆ ದೊರೆಯುತ್ತದೆ. ಹಠದ ಸ್ವಭಾವ ಸ್ವಲ್ಪ ಹೆಚ್ಚಾಗಿರುತ್ತದೆ. ಗುರು ಗ್ರಹದಿಂದಾಗಿ ಕೆಡುಕು ಎಂದೂ ಇಲ್ಲ ಹಾಗೂ ವ್ಯಕ್ತಿಯಲ್ಲಿ ಹೆಚ್ಚಿನ ಸದ್ಗುಣಗಳನ್ನು ಗುರು ನೀಡುತ್ತಾನೆ. ವೃಶ್ಚಿಕ ಲಗ್ನ ಸ್ವತಃ ಸ್ವಲ್ಪ ಹಠದ ಸ್ವಭಾವ. ಹಾಗೆ ಹೆಚ್ಚು ಹಠ ಮಾಡಿದರೂ ಎಲ್ಲಿಯೂ ಸಿಟ್ಟು ಹೆಚ್ಚಾಗದಂತೆ ಸಂಪೂರ್ಣವಾಗಿ ಗುರು ನೋಡಿಕೊಳ್ಳುತ್ತಾನೆ. ಯಾವುದೇ ಕೆಟ್ಟ ದೃಷ್ಟಿ ಅಥವಾ ಕೆಟ್ಟ ಸ್ವಭಾವದ ಜನರು ಇವರ ಹತ್ತಿರ ಸಹ ಸುಳಿಯದಂತೆ ಹಾಗೂ ಯಾವುದೇ ದೊಡ್ಡ ದೋಷಗಳು ಇರಲಿ ಅವುಗಳಿಂದ ತಕ್ಕ ಮಟ್ಟಿಗೆ ಗುರು ರಕ್ಷಣೆ ನೀಡುತ್ತಾನೆ.

  ಮನೆಗೆ ಬಂದ ರಾಜಕುಮಾರಿ : ಇಂದಿನ ಕಾರ್ಯಕ್ರಮ ರದ್ದುಗೊಳಿಸಿದ ಯಶ್

  ಸಿಂಹಾಸನ ಯೋಗ ಇದೆ

  ಸಿಂಹಾಸನ ಯೋಗ ಇದೆ

  ಮಗು ಹಾಗೂ ಯಶ್ ಭವಿಷ್ಯ ಉಜ್ವಲವಾಗಲಿದೆ. ಮಗುವಿನ ಜಾತಕದಲ್ಲಿ ಇದೆ ಸಿಂಹಾಸನ ಯೋಗ. ಈ ಪುಟ್ಟ ಲಕ್ಷ್ಮಿಯ ಜನನದಿಂದಾಗಿ ತಂದೆಯವರಾದ ಯಶ್ ಅವರಿಗೆ ಮತ್ತಷ್ಟು ಒಳ್ಳೆಯ ಭವಿಷ್ಯ ಇದೆ. ಅದಕ್ಕೆ ಕಾರಣ ಈ ಮಗುವಿನ ಜಾತಕದಲ್ಲಿ ಇರುವ ಸಿಂಹಾಸನ ಯೋಗ! ಮಗುವಿನ ಜಾತಕದಲ್ಲಿ ಲಗ್ನ ದಶಮಾಧಿಪತಿ (ಸಿಂಹ ರಾಶಿಯ ಅಧಿಪತಿ) ಆದ ರವಿಯು ಜನ್ಮ ಲಗ್ನದಲ್ಲಿಯೇ ಇರುವುದರಿಂದಾಗಿ ಅದನ್ನು ನಾವು ಸಿಂಹಾಸನ ಯೋಗ ಎಂದು ಕರೆಯುತ್ತೇವೆ ಅಂಥ ಅಧ್ಭುತವಾದ ಸಿಂಹಾಸನ ಯೋಗವನ್ನು ಯಶ್ ಅವರ ಮಗಳ ಜಾತಕದಲ್ಲಿ ಕಾಣಬಹುದು. ಈ ಯೋಗದಿಂದಾಗಿ ಸ್ವತಃ ಮಗುವಿಗೆ ಹಾಗೂ ಮಗುವಿನ ತಂದೆಗೆ ಅದ್ಭುತವಾದ ಯಶಸ್ಸು, ಕೀರ್ತಿ ವೃದ್ಧಿ ಲಭಿಸುತ್ತದೆ.

  ಪಂಚಮಾರಿಷ್ಟ ಕೇತು ಶಾಂತಿ ಅಗತ್ಯ

  ಪಂಚಮಾರಿಷ್ಟ ಕೇತು ಶಾಂತಿ ಅಗತ್ಯ

  ಪಂಚಮಾರಿಷ್ಟ ಕೇತು ಶಾಂತಿ ಮಾಡಬೇಕಾಗುತ್ತದೆ. ಗಣಪತಿ ಆರಾಧನೆ ಬಹಳ ಮುಖ್ಯ. ಇನ್ನು ದೋಷ ಏನಾದರೂ ಇದೆಯೇ ಎಂದು ನೋಡಿದರೆ, ಚಂದ್ರನಿಂದ ಐದನೇ ಮನೆಯಲ್ಲಿ ಅಂದರೆ ಮಕರ ರಾಶಿಯಲ್ಲಿ ಪಾಪ ಗ್ರಹವಾದ ಕೇತು ಇರುವುದರಿಂದ ಪಂಚಮಾರಿಷ್ಟ ಕೇತು ಗ್ರಹ ಶಾಂತಿ ಮಾಡಿಸಬೇಕಾಗುತ್ತದೆ. ಕೇತು ಛಾಯಾಗ್ರಹವಾದ್ದರಿಂದ ಅದಕ್ಕೆ ಬಲವಿಲ್ಲ ಎಂಬ ಅಭಿಪ್ರಾಯ ಕೆಲವು ಜ್ಯೋತಿಷಿಗಳಲ್ಲಿ ಇದೆ.

  ವಿಠ್ಠಲ ಭಟ್ ವೈಯಕ್ತಿಕ ಅಭಿಪ್ರಾಯ

  ವಿಠ್ಠಲ ಭಟ್ ವೈಯಕ್ತಿಕ ಅಭಿಪ್ರಾಯ

  ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಶಾಂತಿ ಮಾಡಿಸಬೇಕು. ನಾಮಕರಣ ಕಾಲದಲ್ಲಿ ಕೇತು ಗ್ರಹ ಶಾಂತಿ, ಗಣಪತಿ ಆರಾಧನೆ, ಷನ್ನಾರಿಕೇಳ ಫಲ ಗಣಪತಿ ಆರಾಧನೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದನ್ನು ಹೊರತು ಪಡಿಸಿದರೆ ಮಗುವಿನ ಜಾತಕದಿಂದ ಇಡೀ ಕುಟುಂಬಕ್ಕೆ ಒಳಿತಾಗುತ್ತದೆ.

  English summary
  Kannada actor yash and radhika blessed with baby girl on 2nd December 2018. Here is analysis of baby by well known astrologer Pandit Vittala Bhat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X