»   » ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.!

ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.!

Posted By:
Subscribe to Filmibeat Kannada

ಕಳೆದ ಕೆಲ ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಹಾಗೂ ಕನ್ನಡ ಸುದ್ದಿ ವಾಹಿನಿಗಳ ಮಧ್ಯೆ ಏಟು-ಎದಿರೇಟು ನಡೆಯುತ್ತಿರುವ ವಿಚಾರ ನಿಮಗೆ ಗೊತ್ತಿಲ್ಲ ಅಂತೇನಿಲ್ಲ.

''ರೈತರ ಸಮಸ್ಯೆ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಪ್ರೈಮ್ ಟೈಮ್ ನಲ್ಲಿ ಅವಕಾಶ ಕೊಟ್ಟರೆ, ನಾನು ಬರಲು ಸಿದ್ಧ ಅಂತ್ಹೇಳಿ ನಟ ಯಶ್ ಹಾಕಿದ ಚಾಲೆಂಜ್ ನ ಕನ್ನಡದ ಕೆಲ ಸುದ್ದಿ ವಾಹಿನಿಗಳು ಸಕಾರಾತ್ಮಕವಾಗಿ ಸ್ವೀಕರಿಸಿ, ''ನಮ್ಮ ಚಾನಲ್ ಗೆ ಬನ್ನಿ, ಪ್ರೈಮ್ ಟೈಮ್ ನಲ್ಲಿ ಸಮಯ ಕೊಡ್ತೀವಿ'' ಅಂತ ಯಶ್ ಅವರಿಗೆ ರೆಡ್ ಕಾರ್ಪೆಟ್ ಹಾಸಿದ್ದವು. [ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

ಅದಾದಮೇಲೆ, ''ನಾನೇ ವೇದಿಕೆ ಸಿದ್ಧ ಪಡಿಸುತ್ತೇನೆ. ಎಲ್ಲಾ ಚಾನೆಲ್ ಹೆಡ್ ಗಳು ಚರ್ಚೆಗೆ ಬರಲಿ' ಅಂತ ಯಶ್ ಹೊಸ ವರಸೆ ಆರಂಭಿಸಿದ್ದರು. ಅಲ್ಲಿಗೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಗೆ ತಲುಪಿದ್ದ ಯಶ್ v/s ಮಾಧ್ಯಮಗಳ ವಿವಾದ ಇಂದು ಮತ್ತೆ ಭುಗಿಲೆದ್ದಿತು. [ಯಶ್ ವರ್ಸಸ್ ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?]

ಇಂದು ನಡೆದ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಟ ಯಶ್ ಭಾಗವಹಿಸಿದರು. ಈ ವೇಳೆ, ವಾದ-ವಾಗ್ವಾದ-ಪ್ರತಿವಾದ ಎಲ್ಲಾ ಮುಗಿದ ನಂತರ ತಾವು ಮೊದಲು ಆಡಿದ ಮಾತಿನಂತೆ 'ವಾಹಿನಿಗಳಿಗೆ ಹೋಗಿ ಚರ್ಚೆಯಲ್ಲಿ ಪಾಲ್ಗೊಳ್ಳಲು' ಯಶ್ ನಿರ್ಧರಿಸಿದರು. ಅದರಂತೆ, ಇಂದು ಮೊದಲು 'ಈ'ಟಿವಿ ಸುದ್ದಿ ವಾಹಿನಿಗೆ ಯಶ್ ಕಾಲಿಟ್ಟಿದ್ದಾರೆ. ಸಂಪಾದಕ ರಂಗನಾಥ್ ಭಾರದ್ವಾಜ್ ಜೊತೆ ರೈತರ ಸಮಸ್ಯೆ ಕುರಿತು ಚರ್ಚೆ ಆರಂಭಿಸಿದ್ದಾರೆ.

ಅಂದು ವಾಹಿನಿಗಳಿಗೆ ಮುಖ ಮಾಡಲಿಲ್ಲ.!

ಪ್ರೈಮ್ ಟೈಮ್ ನಲ್ಲಿ ರೈತರ ಪರ ನಿರಂತರ ಅಭಿಯಾನ ಮಾಡುವ ಕುರಿತು ಮಾಧ್ಯಮಗಳಿಗೆ ಯಶ್ ಚಾಲೆಂಜ್ ಹಾಕಿದ್ದು, ಅದನ್ನ ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ಸ್ವೀಕರಿಸಿ, ಯಶ್ ಗೆ ಆಹ್ವಾನ ಕೊಟ್ಟಿದ್ದು ಹಳೇ ವಿಷಯ. ಅಂದು ವಾಹಿನಿಗಳ ಕಡೆಗೆ ಮುಖ ಮಾಡದ ಯಶ್ ಇಂದು 'ಈ'ಟಿವಿ ಸ್ಟುಡಿಯೋಗೆ ಕಾಲಿಟ್ಟಿದ್ದಾರೆ. [ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

ವಾದ-ವಾಗ್ವಾದ ಆದ್ಮೇಲೆ ಒಪ್ಪಿದ್ದು.!

ಇಂದು ನಡೆದ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಯಶ್ ಹಾಗೂ ಮಾಧ್ಯಮ ಪ್ರತಿನಿಧಿಗಳ ಮಧ್ಯೆ ವಾಗ್ವಾದ ನಡೆಯಿತು. ಕೊನೆಗೆ ಚಾನಲ್ ಗಳಿಗೆ ಬರಲು ಯಶ್ ಒಪ್ಪಿಕೊಂಡರು. ['ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು]

ಮೊದಲ ಆಯ್ಕೆ 'ಈ'ಟಿವಿ

ರಾಕಿಂಗ್ ಸ್ಟಾರ್ ಹಾಕಿದ್ದ ಸವಾಲನ್ನ ಪಬ್ಲಿಕ್ ಟಿವಿ, ಪ್ರಜಾ ಟಿವಿ, ಬಿಟಿವಿ ಸೇರಿದಂತೆ ಕೆಲವು ಸುದ್ದಿ ವಾಹಿನಿಗಳು ಸ್ವೀಕರಿಸಿತ್ತು. ಪತ್ರಿಕಾಗೋಷ್ಟಿಯಲ್ಲಿ ಚಾನೆಲ್ ಗಳಿಗೆ ಹೋಗಲು ಯಶ್ ಒಪ್ಪಿಕೊಂಡಿದ ನಂತರ ಎಲ್ಲಾ ಚಾನೆಲ್ ಗಳಿಂದಲೂ ಯಶ್ ಗೆ ಆಹ್ವಾನವಿತ್ತು. ಅದರಲ್ಲಿ, 'ಈ'ಟಿವಿ ವಾಹಿನಿಯನ್ನ ಯಶ್ ಮೊದಲು ಆಯ್ಕೆ ಮಾಡಿಕೊಂಡಿದ್ದಾರೆ. [ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!]

ಮೊದಲು ಆಹ್ವಾನ ಕೊಟ್ಟಿದ್ದು ಪಬ್ಲಿಕ್ ಟಿವಿ

ಯಶ್ ಹಾಕಿದ ಚಾಲೆಂಜ್ ನ ಮೊದಲು ಸ್ವೀಕರಿಸಿದ್ದು ಪಬ್ಲಿಕ್ ಟಿವಿ. ಹೀಗಾಗಿ ನಟ ಯಶ್ ರವರ ಮೊದಲ ಪ್ರಾಮುಖ್ಯತೆ ಪಬ್ಲಿಕ್ ಟಿವಿ ಆಗ್ಬೇಕಿತ್ತು. ಪತ್ರಿಕಾಗೋಷ್ಟಿ ನಡೆಯುವಾಗಲೂ, ಯಶ್ ಇದನ್ನೇ ಹೇಳಿದ್ದರು. ಆದರೆ ಈಗ ಪಬ್ಲಿಕ್ ಟಿವಿ ಬಿಟ್ಟು 'ಈ'ಟಿವಿ ಕಡೆ ಯಶ್ ಮುಖ ಮಾಡಿದ್ದಾರೆ. [ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್]

ಪಬ್ಲಿಕ್ ಟಿವಿಯಲ್ಲಿ ಸಮಯ ನಿಗದಿಯಾಗ್ಲಿಲ್ಲ.!

'ಪಬ್ಲಿಕ್ ಟಿವಿ' ಮೊದಲು ಆಹ್ವಾನ ಕೊಟ್ಟಿದ್ದರಿಂದ, ಅಲ್ಲಿಗೆ ಮೊದಲು ಹೋಗ್ತೀನಿ' ಅಂತ ಯಶ್ ಹೇಳಿದ್ದರು. ಆದ್ರೆ, ಪಬ್ಲಿಕ್ ಟಿವಿಯಲ್ಲಿ ಚರ್ಚೆಗೆ ಸಮಯ ನಿಗದಿ ಆಗ್ಲಿಲ್ಲ. ಪಬ್ಲಿಕ್ ಟಿವಿ ಕ್ಯಾಪ್ಟನ್ ಎಚ್.ಆರ್.ರಂಗನಾಥ್ ಪ್ರವಾಸದಲ್ಲಿದ್ದಾರೆ.

ಪ್ರಜಾ ಟಿವಿಗೆ ಹೋಗ್ಲಿಲ್ಲ!

ರಾಕಿಂಗ್ ಸ್ಟಾರ್ ಹಾಕಿದ ಸವಾಲನ್ನ ಪಬ್ಲಿಕ್ ಟಿವಿ ನಂತರ ಸ್ವೀಕರಿಸಿದ್ದು ಪ್ರಜಾ ಟಿವಿ. ಬಹಿರಂಗ ಪತ್ರದ ಮೂಲಕ ಯಶ್ ಗೆ ಪ್ರಜಾ ಟಿವಿ ಆಹ್ವಾನ ನೀಡಿತ್ತು. ಅಂದು ಪ್ರಜಾ ಟಿವಿ ಸ್ಟುಡಿಯೋಗೆ ಯಶ್ ಹೋಗ್ಲಿಲ್ಲ. ನಾಳೆ (ನವೆಂಬರ್ 5) ಪ್ರಜಾ ಟಿವಿ ಸ್ಟುಡಿಯೋದಲ್ಲಿ ನಡೆಯುವ ರೈತರ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸುವ ಸಾಧ್ಯತೆ ಇದೆ. [ಪ್ರಜಾ ಟಿವಿಯ 'ಖಾಲಿ ಕುರ್ಚಿ' ಪ್ರೋಗ್ರಾಂಗೆ ಯಶ್ ಕೊಟ್ಟ ಟ್ವಿಸ್ಟ್ ಏನು?]

English summary
Finally, Kannada Actor Yash has agreed to take part in Discussion related to Farmer's issues in all Kannada News Channels. Accordingly, Yash has first entered ETV News Studio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada