»   » 'ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್

'ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಹುಡುಗ 'ರಾಕಿಂಗ್ ಸ್ಟಾರ್' ಯಶ್ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. 10 ವರ್ಷಗಳಿಂದಲೂ ಆತ್ಮೀಯ ಗೆಳತಿ ಆಗಿರುವ ನಟಿ ರಾಧಿಕಾ ಪಂಡಿತ್ ರವರ ಕೈ ಹಿಡಿದಿದ್ದಾರೆ ಯಶ್.

ಇಂದು ಮಧ್ಯಾಹ್ನ 11.30 ರಿಂದ 12.30 ವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹಸೆ ಮಣೆ ಏರಿದರು. 12.30ರ ಸುಮಾರಿಗೆ ರಾಧಿಕಾ ಪಂಡಿತ್ ರವರ ಕೊರಳಿಗೆ ಯಶ್ ಮಾಂಗಲ್ಯಧಾರಣೆ ಮಾಡಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. [ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ರಾಧಿಕಾ-ಯಶ್]

kannada-actor-yash-ties-knot-with-radhika-pandit

ಬೆಂಗಳೂರಿನ ಪ್ರತಿಷ್ಟಿತ ದಿ ತಾಜ್ ವೆಸ್ಟ್ ಎಂಡ್ ನಲ್ಲಿ ಯಶ್-ರಾಧಿಕಾ ಪಂಡಿತ್ ಮದುವೆ ಅದ್ಧೂರಿಯಾಗಿ ನಡೆಯಿತು. ಇಬ್ಬರ ಗಟ್ಟಿಮೇಳಕ್ಕೆ ಹೋಟೆಲ್ ನ ಹೊರಾಂಗಣದಲ್ಲಿ ಸೋಮನಾಥೇಶ್ವರ ದೇಗುಲದ ಸೆಟ್ ನಿರ್ಮಾಣ ಮಾಡಲಾಗಿತ್ತು.[ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ]

kannada-actor-yash-ties-knot-with-radhika-pandit-023165

ವರ ಪೂಜೆ, ಕಾಶಿ ಯಾತ್ರೆ ಮುಗಿಸಿದ ಬಳಿಕ ಮದುವೆ ಮಂಟಪಕ್ಕೆ ಯಶ್ ಆಗಮಿಸಿದರು. ಗೌರಿ ಪೂಜೆ ನೆರವೇರಿಸಿ ರಾಧಿಕಾ ಪಂಡಿತ್ ಮಂಟಪಕ್ಕೆ ಬಂದರು.[ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ]

kannada-actor-yash-ties-knot-with-radhika-pandit-023165

ಶಿವ-ಪಾರ್ವತಿ, ಗಣಪತಿ ಹಾಗೂ ನಂದಿ ಮೂರ್ತಿ ಸಮ್ಮುಖದಲ್ಲಿ ಹೊಸ ಬಾಳಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಕಾಲಿಟ್ಟರು.

kannada-actor-yash-ties-knot-with-radhika-pandit-023165

ಒಕ್ಕಲಿಗ ಹಾಗೂ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆಯಿತು. ನಾಳೆ ಡಿಸೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಡಿಸೆಂಬರ್ 11 ರಂದು ಅಭಿಮಾನಿಗಳಿಗೆ ಹಾಗೂ ಒಕ್ಕೂಟದ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸಲಾಗಿದೆ.

English summary
Kannada Actor Yash has tied knot with his long-time girl friend Kannada Actress Radhika Pandit today (December 9th) in Taj West End Hotel Bengaluru.
Please Wait while comments are loading...