»   » ಡಬ್ಬಿಂಗ್ ಮಾಡೋರಿಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಂಕರ್!

ಡಬ್ಬಿಂಗ್ ಮಾಡೋರಿಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಂಕರ್!

Posted By:
Subscribe to Filmibeat Kannada

ಕನ್ನಡ ಸಿನಿಮಾ ಕಲಾವಿದರು ಡಬ್ಬಿಂಗ್ ವಿರೋಧಿಸಿ ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮೊನ್ನೆ ತಾನೆ ಡಬ್ಬಿಂಗ್ ಸಿನಿಮಾ ಬಿಡುಗಡೆಯಾದ ಹಿನ್ನಲೆ ಕನ್ನಡ ಹೋರಾಟಗಾರ ವಾಟಳ್ ನೇತೃತ್ದದಲ್ಲಿ ಇಂದು ಪ್ರತಿಭಟನೆ ನಡೆಯಿತು.['ಅಯ್ಯಯ್ಯೋ... ಅನ್ಯಾಯ' ಎಂದು ಡಬ್ಬಿಂಗ್ ವಿರುದ್ಧ ಕೂಗಿದ ಕನ್ನಡ ತಾರೆಯರು]

ಜಗ್ಗೇಶ್, ದರ್ಶನ್, ಬುಲೆಟ್ ಪ್ರಕಾಶ್, ರವಿಶಂಕರ್, ಸೃಜನ್ ಲೊಕೇಶ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವರೆಲ್ಲರದ್ದು ಒಂದೇ ಕೂಗು ಡಬ್ಬಿಂಗ್ ಬೇಡ. ಹಾಗಾದ್ರೆ, ಯಾವೆಲ್ಲ ಕಲಾವಿದರು

ರವಿಶಂಕರ್

''ನಾವು ಎಲ್ಲ ಭಾಷೆಗಳನ್ನ ತುಂಬಾ ಗೌರವಿಸುತ್ತೇವೆ. ತಮಿಳು, ತೆಲುಗು, ಹಿಂದಿ, ಮಲಾಯಳಂ ಎಲ್ಲ ಸಿನಿಮಾಗಳು ರಿಲೀಸ್ ಆಗುತ್ತಿದೆ. ಅದನ್ನ ಬಿಟ್ಟು ಡಬ್ಬಿಂಗ್ ಮಾಡಿ ರಿಲೀಸ್ ಮಾಡ್ಬೇಕು ಅಂದ್ರೆ ನಾವು ಒಪ್ಪಲ್ಲ. ನಮ್ಮ ಇಂಡಸ್ಟ್ರಿ, ನಮ್ಮ ಕನ್ನಡ, ನಮಗೆ ಒಳ್ಳೆ ತಾಕತ್ ಇದೆ. ಅದಕ್ಕಾಗಿ ಎಲ್ಲರೂ ಹೋರಾಟ ಮಾಡ್ತಿದ್ದೀವಿ. ಇದು ಬರಿ ಸ್ಯಾಂಪಲ್ ಮಾತ್ರ. ಆಮೇಲೆ ನಮ್ಮ ಪವರ್ ಏನೂ ಅಂತ ತೋರಿಸ್ತಿವಿ''-ರವಿಶಂಕರ್['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.!]

ಸೃಜನ್ ಲೋಕೇಶ್

''ಡಬ್ಬಿಂಗ್ ಗೆ ಪ್ರೋತ್ಸಾಹ ನೀಡುವುದಿಲ್ಲ ಅಂತ ನಿಮಗೆ ನೀವೇ ಪ್ರಮಾಣ ಮಾಡಿಕೊಳ್ಳಿ. ಡಬ್ಬಿಂಗ್ ಇಲ್ಲಿ ಬರೋಕೆ ಸಾಧ್ಯವೇ ಇಲ್ಲ. ಭಾಷೆಯ ವಿಷಯ ಬಂದಾಗ ಕನ್ನಡಿಗರು ಎಷ್ಟು ಉಗ್ರವಾಗಿ ಹೋರಾಟ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಲಕ್ಷಾಂತರ ಜನರು ಕನ್ನಡ ಸಿನಿಮಾ, ಸೀರಿಯಲ್ ಗಳಿಂದ ಊಟ ಮಾಡುತ್ತಿದ್ದಾರೆ. ಡಬ್ಬಿಂಗ್ ಬಂದರೆ ಆ ಎಲ್ಲ ಕುಟುಂಬಗಳು ಬೀದಿಗೆ ಬರುತ್ತದೆ. ಅವರೆಲ್ಲ ಎಲ್ಲಿ ಹೋಗಬೇಕು.? ದಯವಿಟ್ಟು ಎಲ್ಲ ಕನ್ನಡಿಗರು ಈ ಹೋರಾಟಕ್ಕೆ ಪ್ರೋತ್ಸಾಹಿಸಿ. ಡಬ್ಬಿಂಗ್ ವಿರೋಧಿಸಿ''-ಸೃಜನ್ ಲೋಕೇಶ್[ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಡಿಚ್ಚಿ ಕೊಟ್ಟ 'ದಾಸ' ದರ್ಶನ್.!]

ಮಂಡ್ಯ ರಮೇಶ್

''ಡಬ್ಬಿಂಗ್ ಬೇಡ ಅಂತ ಎಲ್ಲರೂ ಭದ್ರವಾಗಿ ಮನಸ್ಸು ಮಾಡಿದ್ರೆ, ಡಬ್ಬಿಂಗ್ ತಡೆಯುವುದು ಕಷ್ಟ ಅಲ್ಲವೇ ಅಲ್ಲ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ಯಾರೂ ಕೆಲಸ ಮಾಡಬಾರದು''[ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್]

ತಬಲ ನಾಣಿ

''ನಮ್ಮ ತನವನ್ನ ಕಾಪಾಡಿಕೊಳ್ಳಬೇಕು. ನಮ್ಮಲ್ಲಿ ಸಮೃದ್ಧಿಯಾಗಿರುವಾಗ, ಬೇರೆ ಭಾಷೆಯನ್ನ ಕನ್ನಡದಲ್ಲಿ ಬಿಟ್ಟು, ಇಷ್ಟು ಜನ ಟೆಕ್ನಿಷಿಯನ್ ಗಳನ್ನ ಹಾಳು ಮಾಡುವುದು ಸರಿಯಲ್ಲ. ದಯವಿಟ್ಟು ಈ ಕನಸನ್ನ ಬಿಟ್ಟು ಬಿಡಿ. ಯಾರೋ ನಾಲ್ಕಾರು ಜನ ಹೋರಾಡುತ್ತಿದ್ದೀರಿ. ಇಲ್ಲಿ ಕನ್ನಡ ಸಮೃದ್ಧವಾಗಿದೆ. ಅವರ ಮುಖದಲ್ಲಿ ನಮ್ಮ ಕನ್ನಡ ನೋಡಬೇಕೆಂದಿರುವುದು ಏನೂ ಇಲ್ಲ. ಮೊನ್ನೆನೂ ಜನ ಯಾರನ್ನ ನೋಡಿಲ್ಲ. ಇದು ಬರಿ ಸ್ಯಾಂಪಲ್ ಅಷ್ಟೇ. ಮುಂದೆ ಬೇರೆ ಮಟ್ಟಕ್ಕೆ ತಲುಪುತ್ತೆ. ಏನೇ ಆದ್ರೂ ಬಿಡುವುದಿಲ್ಲ. ಡಬ್ಬಿಂಗ್ ವಿರೋಧಿಗಳೇ ನಾವು-ತಬಲ ನಾಣಿ[ಶ್ರೀಲಂಕಾ, ಮಲೇಶಿಯಾದಿಂದ ಜಗ್ಗೇಶ್ ಗೆ ಬಂದಿದೆ ಬೆದರಿಕೆ ಕರೆ.! ಯಾಕೆ.?]

ಮಿತ್ರ-ಹಾಸ್ಯ ನಟ

''ಭಾರತದ ಎಲ್ಲ ಭಾಷೆಗಳನ್ನ ಅರ್ಥ ಮಾಡಿಕೊಳ್ಳುವ ಒಬ್ಬರೇ ಅದು ಕನ್ನಡಿಗರು. ನಮಗೆ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾಗಳನ್ನ ಕನ್ನಡದಲ್ಲಿ ನೋಡುವ ಗತಿ ಇನ್ನು ಬಂದಿಲ್ಲ. ಖಂಡಿತವಾಗಿ ನಾವು ಇದೆಲ್ಲವನ್ನ ಖಂಡಿಸುತ್ತೇವೆ.

ದರ್ಶನ್-ಪುನೀತ್ ಸಿನಿಮಾ ಸ್ಥಗಿತ!

ಡಬ್ಬಿಂಗ್ ವಿರೋಧಿಸಿ ಹೋರಾಟ ಮಾಡುತ್ತಿರುವ ಹಿನ್ನಲೆ ಇಂದು ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಅಂಜನಿಪುತ್ರ ಹಾಗೂ ದರ್ಶನ್ ಅಭಿನಯಿಸುತ್ತಿರುವ ತಾರಕ್ ಚಿತ್ರಗಳು ಸೇರಿದಂತೆ ಬಹುತೇಕ ಚಿತ್ರಗಳ ಚಿತ್ರೀಕರಣ ಸ್ಥಗಿತಗೊಂಡಿದೆ.

English summary
Kannada Actors Ravi Shankar, Thabala Naani, Mandya Ramesh speaks against Dubbing in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada