For Quick Alerts
  ALLOW NOTIFICATIONS  
  For Daily Alerts

  ಯಂಗ್ ರೆಬಲ್ ಸ್ಟಾರ್ ಟೀಸರ್ ನೋಡಿ ಏನಂದ್ರು ಸೀನಿಯರ್ಸ್

  |

  ಪ್ರೇಮಿಗಳ ದಿನಕ್ಕೆ ಜೂನಿಯರ್ ರೆಬಲ್ ಸ್ಟಾರ್ ಅಧಿಕೃತವಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ನಟನೆಯ 'ಅಮರ್' ಚಿತ್ರದ ಮೊದಲ ಟೀಸರ್ ಮೂಲಕ ಹೊರಬಂದಿದೆ. ಮಾಸ್ ಹೀರೋ ಆಗಿ 'ಅಮರ್' ಅಭಿಮಾನಿಗಳ ಮುಂದೆ ಬಂದಿದ್ದಾರೆ.

  'ಅಮರ್' ಸಿನಿಮಾ ಟೀಸರ್ ಇಂದು ಬೆಳಗ್ಗೆ ಬಿಡುಗಡೆಯಾಗಿದೆ. ಪಕ್ಕಾ ಕಮರ್ಷಿಯಲ್ ಚಿತ್ರದ ಫೀಲ್ ನೀಡುತ್ತಿರುವ ಟೀಸರ್ ಅಭಿಮಾನಿಗಳಿಗೆ ಬಹಳ ಇಷ್ಟ ಆಗಿದೆ. ಮರಿ ರೆಬಲ್ ಸ್ಟಾರ್ ಗತ್ತು ಎಲ್ಲರ ಗಮನ ಸೆಳೆದಿದೆ. ಟೀಸರ್ ನಲ್ಲಿ ಅಂಬರೀಶ್ ಅವರ ಡೈಲಾಗ್ ಅನ್ನೇ ಅಭಿಷೇಕ್ ಹೇಳಿರುವುದು ಮಜಾ ನೀಡುತ್ತಿದೆ.

  ವಿಡಿಯೋ : 'ನೋ ವೇ ಚಾನ್ಸೆ ಇಲ್ಲ..' ಡೈಲಾಗ್ ಹೇಳ್ತಾನೆ ಬಂದ 'ಅಮರ್'

  ಇನ್ನು ಟೀಸರ್ ಬಗ್ಗೆ ಕನ್ನಡ ಚಿತ್ರರಂಗದ ನಟರು ಟ್ವೀಟ್ ಮಾಡಿದ್ದಾರೆ. ದರ್ಶನ್, ಸುದೀಪ್, ಯಶ್ ಜೊತೆಗೆ ಅಭಿ ಸಮಕಾಲಿನ ನಟರು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಮುಂದೆ ಓದಿ...

  ಅಭಿಯನ್ನು ಬರಮಾಡಿಕೊಳ್ಳಿ - ದರ್ಶನ್

  ''ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ ‘ಅಮರ್' ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ'' - ದರ್ಶನ್, ನಟ

  ನನ್ನ ಪುಟ್ಟ 'ಅಮರ್ ಎಂದ ಯಶ್

  ''ಪ್ರಿಯ ಅಭಿ.. ಟೀಸರ್ ಬಿಡುಗಡೆಯೊಂದಿಗೆ ಚಿತ್ರಯಾನದ ಮೊದಲ ಅಡಿಯಿಡುತ್ತಿರುವ ಈ ಶುಭ ಘಳಿಗೆ ಇದು. ಎಲ್ಲರಿಗಿಂತಲೂ ಹೆಚ್ಚಾಗಿ ನಾಳೆಯ ಟೀಸರ್ ಗಾಗಿ ಕೌತುಕದಿಂದ ಕಾಯ್ತಾ ಇದೀನಿ. ಪೋಸ್ಟರ್ ಗಳು ಸಖತ್ತಾಗಿವೆ. ನನ್ನ ಶುಭ ಹಾರೈಕೆಗಳು 'ಎಂದೆಂದಿಗೂ-ನಿನ್ನೊಂದಿಗೆ' ಇರುತ್ತವೆ. ನೀನೆಂದೂ ನನ್ನ ಪುಟ್ಟ 'ಅಮರ್.'' - ಯಶ್, ನಟ

  ಪ್ರೀತಿಯ ತಮ್ಮನನ್ನು ಬೆಳೆಸಿ ಎಂದು ಕೇಳಿಕೊಂಡ ದರ್ಶನ್

  ಡೆಡಿಕೇಶನ್ ಮೆಚ್ಚಿದ ಸುದೀಪ್

  ಅಭಿ ತನ್ನನ್ನು ತಾನು ಚೆನ್ನಾಗಿ ರೂಪುಗೊಳ್ಳಿಸಿಕೊಂಡಿದ್ದಾನೆ. ಎಂದಿರುವ ಸುದೀಪ್ ಅಭಿಷೇಕ್ ಡೆಡಿಕೇಶನ್ ಹಾಗೂ ಡಿಟರ್ಮಿನೇಶನ್ ಅನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲರಂತೆ ಟೀಸರ್ ನೋಡಲು ನಾನು ಉತ್ಸುಕನಾಗಿದ್ದೇನೆ. ಎಂದು ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

  ಅಂಬರೀಶ್ ಅಣ್ಣನ ಮತ್ತೊಂದು ಛಾಯೆ - ಸತೀಶ್ ನೀನಾಸಂ

  ''ಅಮರ್' ಇದೊಂದು ಟೀಸರ್ ಅನ್ನೋದಕ್ಕಿಂತ ಒಂದು ಹೊಸ ಜರ್ನಿ ರೆಬಲ್ ಸ್ಟಾರ್ ಅಂಬರೀಶ್ ಅಣ್ಣನ ಮತ್ತೊಂದು ಛಾಯೆ. ವೆಲ್ ಕಮ್ ಟು ಸ್ಯಾಂಡಲ್ ವುಡ್, ಗೆಳೆಯ ಅಭಿಷೇಕ್.'' - ಸತೀಶ್ ನೀನಾಸಂ, ನಟ

  'ಅಮರ್' ಚಿತ್ರ ತಂಡಕ್ಕೆ ಶುಭವಾಗಲಿ - ನಿರೂಪ್ ಭಂಡಾರಿ

  ''ಇಲ್ಲಿದೆ ಅಭಿಷೇಕ್ ಅಂಬರೀಷ್ ಚೊಚ್ಚಲ ಸಿನಿಮಾ ‘ಅಮರ್' ಚಿತ್ರದ ಟೀಸರ್. ಅಭಿಷೇಕ್, ಸಂದೇಶ್ ಪ್ರೊಡಕ್ಷನ್ ಮತ್ತು 'ಅಮರ್' ಚಿತ್ರ ತಂಡಕ್ಕೆ ಶುಭವಾಗಲಿ!! Young rebel star is here. My best wishes to him'' - ನಿರೂಪ್ ಭಂಡಾರಿ, ನಟ

  ತಂದೆಯಂತೆ ಮಗ - ಗಣೇಶ್

  ''ಥೇಟ್ ಅಪ್ಪನದೇ ಕಣ್ಣು, ಶುಭವಾಗಲಿ ಯಂಗ್ ರೆಬಲ್ ಸ್ಟಾರ್ ರಾಕ್ ಶುರುವಾಗಿದೆ.'' ಎಂದು ನಟ ಧನಂಜಯ್ ವಿಶ್ ಮಾಡಿದ್ದಾರೆ. ಗಣೇಶ್ ಕೂಢ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಂದೆಯಂತೆ ಮಗ ಎಂದು ಅಭಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

  English summary
  Kannada actors tweets about Abhishek Ambareesh's 'Amar' kannada moive teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X