Don't Miss!
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂದಿನ 21 ದಿನದಲ್ಲಿ ಅದಿತಿ ಪ್ರಭುದೇವ ಜೀವನ ಶೈಲಿಯೇ ಬದಲಾಗುತ್ತಂತೆ: ಬಿಟ್ಟುಕೊಟ್ಟ ಗುಟ್ಟೇನು?
ಸಿನಿಮಾದಲ್ಲಿ ನಟಿಸೋ ನಟಿಯರಿಗೆ ಸೌಂದರ್ಯ ತುಂಬಾನೇ ಮುಖ್ಯ. ಎಷ್ಟು ದಿನ ಫಿಟ್ ಅಂಡ್ ಫೈನ್ ಆಗಿ ಇರುತ್ತಾರೋ ಅಷ್ಟು ದಿನ ಬೇಡಿಕೆಯ ನಟಿಯಾಗಿರುತ್ತಾರೆ. ಹಾಗಂತ ಕೇವಲ ಕೆಲಸಕ್ಕೆ ಸೀಮಿತ ಅಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ಈಗ ಅದಿತಿ ಪ್ರಭುದೇವ ಕೂಡ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳುವುದಕ್ಕೆ ಕೆಲವು ಗುರಿಗಳನ್ನು ಹಾಕೊಂಡಿದ್ದಾರೆ.
ಶೂಟಿಂಗ್ ಹೋದರೆ, ಅಂದಕೊಂಡು ಸಮಯದಲ್ಲೇ ಸಿನಿಮಾ ಮುಗಿಯುತ್ತೆ ಅಂತಲ್ಲ. ಸರಿಯಾದ ಸಮಯಕ್ಕೆ ಊಟ ಮಾಡಬಹುದು ಅನುಮಾನ, ನಿದ್ದೆನೂ ಅಷ್ಟೇ ಅಂದುಕೊಂಡಾಗ ಮಾಡುವುದು ಅಸಾಧ್ಯ. ಹೀಗಾಗಿ ಅದಿತಿ ಪ್ರಭುದೇವ ಅದೆಷ್ಟೇ ಕಷ್ಟ ಆದರೂ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತರಲೇ ಬೇಕು ಅಂತ ತೀರ್ಮಾನಿಸಿದ್ದಾರೆ. ಅದು ಬರೀ 21 ದಿನಗಳಲ್ಲಿ. ಅಷ್ಟಕ್ಕೂ 21 ದಿನಗಳಲ್ಲೇ ಗುರಿ ಮುಟ್ಟುವ ಸಾಹಸ ಏಕೆ ಅನ್ನುವುದನ್ನು ಅವರೇ ಹೇಳಿದ್ದಾರೆ.

21 ದಿನಗಳಲ್ಲಿ ಲೈಫ್ ಸ್ಟೈಲ್ ಬದಲಾಗುತ್ತೆ
ಕಳೆದ ಎರಡು ತಿಂಗಳಿನಿಂದ ಅದಿತಿ ಪ್ರಭುದೇವ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆಯಾಗಿದ್ಯಂತೆ. ಅದಕ್ಕೆ 21 ದಿನಗಳಲ್ಲಿ ಮತ್ತೆ ಲೈಫ್ ಸ್ಟೈಲ್ ಅನ್ನು ಟ್ರ್ಯಾಕ್‌ಗೆ ತರಲು ಸಜ್ಜಾಗಿದ್ದಾರೆ. "ಮುಂದಿನ 21 ದಿನ ನಾನು ನನ್ನ ಅಭ್ಯಾಸಗಳನ್ನು ಲೈಫ್ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳಬೇಕು ಅಂದುಕೊಂಡಿದ್ದೇನೆ. ಕಳೆದ ಎರಡು ತಿಂಗಳಲ್ಲಿ ನನ್ನ ಲೈಫ್ ಸ್ಟೈಲ್‌ನಲ್ಲಿ ನನಗೆ ಗೊತ್ತಿಲ್ಲದಂತೆ ಕೆಲವು ಬದಲಾವಣೆಗಳು ಆಗಿ ಹೋಗಿವೆ. ನನಗೆ ಶೂಟಿಂಗ್, ಅದು ಇದು ಅಂತ ಕಾರಣ ಕೊಡಲು ಇಷ್ಟವಿಲ್ಲ. ನನ್ನ ಬೇಜವಾಬ್ದಾರಿ ಅಂತ ಹೇಳಬಹುದು. ಅದು ನನಗೆ ಗೊತ್ತಿಲ್ಲದಂತೆ ಆಗಿದ್ದು ಅಂತ ಹೇಳಬಹುದು. ಇವತ್ತಿಂದ ಇನ್ನು 21 ದಿನಗಳು ನಾನು ನನ್ನ ಲೈಫ್ ಸ್ಟೈಲ್‌ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇನೆ." ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಅದಿತಿಗೆ 21ದಿನವೇ ಯಾಕೆ ಬೇಕು?
ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅನ್ನುವುದು ಉತ್ತಮ ಆಲೋಚನೆ. ಆದರೆ, ಇಷ್ಟೇ ದಿನಗಳಲ್ಲಿ ಲೈಫ್ ಸ್ಟೈಲ್ ಬದಲಾಗಬೇಕು ಅಂತ ಕಟ್ಟುಪಾಡುಗಳನ್ನು ಯಾಕೆ ಹಾಕಿಕೊಳ್ಳಬೇಕು? ಈ ಪ್ರಶ್ನೆ ಅದಿತಿ ಪ್ರಭುದೇವ ಏನಂತಾರೆ ಕೇಳಿ. "21 ದಿನಗಳು ನಾವು ಯಾವುದೇ ಬದಲಾವಣೆಗಳನ್ನು ಮಾಡಿಕೊಂಡರೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. 90 ದಿನ ಮಾಡಿದರೆ ಅದು ನಮ್ಮ ಲೈಫಿನ ಒಂದು ಭಾಗವಾಗುತ್ತೆ ಅಂತ ಹೇಳುತ್ತಾರೆ. ನಾನು ಈಗ 90 ದಿನಗಳ ಗೋಲ್‌ಗೆ ಹೋಗಲ್ಲ. 21 ದಿನಗಳ ಗೋಲ್‌ಗೆ ಹೋಗುತ್ತೇನೆ." ಮುಂದಿನ ಮೂರು ವಾರದಲ್ಲಿ ಏನೇನು ಬದಲಾವಣೆ ಆಗುತ್ತೆ ಅನ್ನುವುದನ್ನೂ ಅದಿತಿ ತಿಳಿಸಿಕೊಡುತ್ತಾರಂತೆ.

ಕರಿದ ಪದಾರ್ಥಗಳಿಗೆ ಅದಿತಿ ಗುಡ್ ಬೈ
ಅಷ್ಟಕ್ಕೂ ಈ 21 ದಿನಗಳಲ್ಲಿ ಅದಿತಿ ಪ್ರಭುದೇವ ಏನೇನು ಮಾಡುತ್ತಾರೆ ಅನ್ನುವ ಕುತೂಹಲ ಹುಟ್ಟುವುದು ಸಹಜ. ಅದಕ್ಕೆ ಆಹಾರದಲ್ಲಿ, ವ್ಯಾಯಾಮದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. "ಜಂಕ್ ಫುಡ್ ಅಂದರೆ, ಕರಿದ ಪದಾರ್ಥಗಳು, ಹೊರಗಡೆ ತಿಂಡಿ ತಿನ್ನುವುದಿಲ್ಲ. 7 ರಿಂದ 9 ಗಂಟೆಗಳ ಕಾಲ ನಿದ್ದೆ ಆಗಬೇಕು. ಹಾಗೇ ಡ್ಯಾನ್ಸ್ ಮಾಡ್ತಿಯೋ, ವಾಕ್ ಮಾಡ್ತಿಯೋ, ಕಾರ್ಡಿಯೋ ವ್ಯಾಯಾಮ ಮಾಡುತ್ತೇವೋ ಗೊತ್ತಿಲ್ಲ. ಮೂವತ್ತು ನಿಮಿಷ ಪ್ರತಿದಿನ ವ್ಯಾಯಾಮ ಮಾಡಲೇಬೇಕು. ಇದರೊಂದಿಗೆ 10 ರಿಂದ 15 ನಿಮಿಷಗಳ ಕಾಲ ಮೆಡಿಟೇಷನ್." ಮಾಡಲು ಅದಿತಿ ನಿರ್ಧಾರ ಮಾಡಿದ್ದಾರೆ.

ಸಿಟ್ಟು ಮಾಡಿಕೊಳ್ಳಲ್ಲ ಅದಿತಿ ಪ್ರಭುದೇವ
"ಸಿಟ್ಟು ಆಗುವ ಹಾಗಿಲ್ಲ. ಅಳುವ ಹಾಗಿಲ್ಲ. ಯಾವುದೇ ರೀತಿಯ ನೆಗೆಟಿವ್ ಆಲೋಚನೆ ಮಾಡುವ ಹಾಗಿಲ್ಲ. ವಾರಕ್ಕೆ ಒಂದು ದಿನವಾದರೂ ಉಪವಾಸ ಮಾಡಬೇಕು. ಇದಿಷ್ಟೂ ನನ್ನ 21 ದಿನಗಳ ಟಾರ್ಗೆಟ್. ಫೆಬ್ರವರಿ 8 -9ರ ವೇಳೆಗೆ ಈ ಚಾಲೆಂಜ್ ಮುಗಿಯುತ್ತೆ. ಆ ಮೇಲೆ ಏನೆಲ್ಲಾ ಬದಲಾವಣೆ ಆಯ್ತು ಅಂತ ನಿಮಗೆ ತಿಳಿಸುತ್ತೇನೆ. ನನ್ನಲ್ಲಿ ಏನೆಲ್ಲಾ ಪಾಸಿಟಿವ್ ಅಂಶ ಕಾಣಿಸಿತು ಅನ್ನುವುದನ್ನು ತಿಳಿಸುತ್ತೇನೆ. ಒಳ್ಳೆಯದು ಮಾಡಿದಾಗ ಒಳ್ಳೆ ರಿಸಲ್ಟ್ ಬಂದೇ ಬರುತ್ತೆ." ಅಂತ ಅದಿತಿ ಹೇಳಿದ್ದಾರೆ. ಮುಂದಿನ 21 ದಿನಗಳಲ್ಲಿ ಏನು ಬದಲಾವಣೆ ಆಗುತ್ತೆ ಅನ್ನುವುದನ್ನು ನೋಡೋಣ.