»   » ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?

ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?

Posted By:
Subscribe to Filmibeat Kannada

ಕಳೆದ ಎರಡು ವಾರಗಳ ಹಿಂದೆಯಷ್ಟೇ.. ಅಂದ್ರೆ ಮಾರ್ಚ್ 6 ರಂದು ಸ್ಯಾಂಡಲ್ ವುಡ್ ನ 'ಬೇಬಿ ಡಾಲ್' ಅಮೂಲ್ಯ ರವರ ನಿಶ್ಚಿತಾರ್ಥ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಮಗ ಜಗದೀಶ್ ರವರೊಂದಿಗೆ ಅದ್ಧೂರಿಯಾಗಿ ನೆರವೇರಿತ್ತು.[ನಟಿ ಅಮೂಲ್ಯ-ಜಗದೀಶ್ ಜೋಡಿಯ ನಿಶ್ಚಿತಾರ್ಥ ಸಂಭ್ರಮ]

ಇದೀಗ ಇವರಿಬ್ಬರ ಮದುವೆ ದಿನಾಂಕ ನಿಗಧಿಯಾಗಿದೆ. ಏಪ್ರಿಲ್ ತಿಂಗಳಲ್ಲಿ ಅಮೂಲ್ಯ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಅದು ಈಗ ನಿಜವಾಗಿದ್ದು, ಕುಟುಂಬಸ್ಥರು ಮದುವೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರಂತೆ. ಮುಂದೆ ಓದಿ.....

ಮೇ 12 ರಂದು ಮದುವೆ!

ಮೂಲಗಳ ಪ್ರಕಾರ ಮೇ 12 ರಂದು ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಏಪ್ರಿಲ್ 12 ಅಥವಾ 21ನೇ ತಾರೀಖು ಎಂಬ ಎರಡು ದಿನಾಂಕವನ್ನ ಗೊತ್ತುಪಡಿಸಲಾಗಿತ್ತು. ಆದ್ರೆ, ಅಂತಿಮವಾಗಿ ಮೇ 12 ರಂದು ವಿವಾಹವಾಗಲು ನಿಶ್ಚಿಯಿಸಿದ್ದಾರಂತೆ.[ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?]

ಮದುವೆ ಎಲ್ಲಿ ಗೊತ್ತಾ?

ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಬ್ಬರ ವಿವಾಹ ನೆರವೇರಿಸಲು ಹಿರಿಯರು ನಿಶ್ಚಯಿಸಿದ್ದಾರಂತೆ. ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಅಮೂಲ್ಯ ಮತ್ತು ಜಗದೀಶ್ ಮದುವೆಯಾಗಲಿದ್ದಾರೆ.[ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.? ]

ಗಣ್ಯರಿಗಾಗಿ ಆರತಕ್ಷತೆ!

ಅಮೂಲ್ಯ-ಜಗದೀಶ್ ಅವರ ಮದುವೆ ನಂತರ ಚಿತ್ರರಂಗದವರಿಗಾಗಿ ಆರತಕ್ಷತೆ ಏರ್ಪಡಿಸಿದ್ದಾರೆ. ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆಯಂತೆ.[ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ]

ಮಾರ್ಚ್ 6 ರಂದು ನಿಶ್ಚಿತಾರ್ಥ

ಮಾರ್ಚ್ 6ರಂದು ಅಮೂಲ್ಯ ಮತ್ತು ಜಗದೀಶ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಸಂಪ್ರದಾಯವಾಗಿ ನೆರವೇರಿತ್ತು. ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಪ್ರಿಯಾಂಕಾ ಉಪೇಂದ್ರ, ಮಾಳವಿಕಾ ಅವಿನಾಶ್, ಪ್ರಥಮ್, ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.

English summary
Kannada Actress Amulya and jagadish Marriage date fixed. Amulya and jagadish is going to marry soon that too in the month of April 10 and 11th says sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada