»   » ನಟಿ ಅಮೂಲ್ಯ-ಜಗದೀಶ್ ಜೋಡಿಯ ನಿಶ್ಚಿತಾರ್ಥ ಸಂಭ್ರಮ

ನಟಿ ಅಮೂಲ್ಯ-ಜಗದೀಶ್ ಜೋಡಿಯ ನಿಶ್ಚಿತಾರ್ಥ ಸಂಭ್ರಮ

Posted By:
Subscribe to Filmibeat Kannada

ಕಳೆದ ತಿಂಗಳಿನಲ್ಲಷ್ಟೇ ನಟಿ ಅಮೂಲ್ಯ ಮತ್ತು ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಮಗ ಜಗದೀಶ್ ಅವರೊಂದಿಗೆ ತಾಂಬೂಲ ಶಾಸ್ತ್ರ ನೆರೆವೇರಿತ್ತು. ಇಂದು (ಮಾರ್ಚ್ 6) ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಸಂಪ್ರದಾಯವಾಗಿ ನೆರೆವೇರುತ್ತಿದೆ.

ಹೌದು, ಕನ್ನಡ ಚಿತ್ರರಂಗಕ್ಕೆ ಬಾಲನಟಿ ಆಗಿ ಎಂಟ್ರಿಕೊಟ್ಟು, 'ಚೆಲುವಿನ ಚಿತ್ತಾರ'ದ ಮೂಲಕ ತೆರೆ ಮೇಲೆ ನಾಯಕಿ ಆಗಿ ಬಡ್ತಿ ಪಡೆದು, 'ಶ್ರಾವಣಿ ಸುಬ್ರಮಣ್ಯ', 'ಗಜಕೇಸರಿ', 'ಖುಷಿ ಖುಷಿಯಾಗಿ', 'ಮಳೆ' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಅಮೂಲ್ಯ ಇಂದಿನಿಂದ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಸದ್ಯದಲ್ಲೇ ನಟಿ ಅಮೂಲ್ಯ ಹಸೆಮಣೆ ಕೂಡ ಏರಲಿದ್ದಾರೆ.[ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?]

ಅಮೂಲ್ಯ ಮತ್ತು ಜಗದೀಶ್ ಅವರ ನಿಶ್ಚಿತಾರ್ಥದ ವಿಶೇಷತೆಗಳೇನು ಎಂದು ಇಲ್ಲಿದೆ ನೋಡಿ....

ಅಮ್ಮು ಮತ್ತು ಜಗ್ಗಿ ನಿಶ್ಚಿತಾರ್ಥ!

ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಮತ್ತು ಜಗದೀಶ್ ಅವರು ನಿಶ್ಚಿತಾರ್ಥ ಕಾರ್ಯಕ್ರಮ ಇಂದು (ಮಾರ್ಚ್ 6) ನೆರೆವೇರಲಿದೆ. ಬೆಂಗಳೂರಿನ ಕೆಂಗೇರಿ ಬಳಿಯಿರುವ 'ಶ್ರೀ ಸಾಯಿ ಪ್ಯಾಲೇಸ್'ನಲ್ಲಿ ನವ ಜೋಡಿಗಳು ಎಂಗೇಜ್ ಆಗುತ್ತಿದ್ದಾರೆ.[ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ]

ಸಂಜೆ 6.30ಕ್ಕೆ ನಿಶ್ಚಿತಾರ್ಥ!

ಮಧ್ಯಾಹ್ನ 2 ಗಂಟೆಯಿಂದ ಶಾಸ್ತ್ರ, ಸಂಪ್ರದಾಯಗಳನ್ನ ಆರಂಭಿಸಿರುವ ಎರಡು ಕುಟುಂಬದವರು ಗಣಪನ ಹೋಮ ಸೇರಿದಂತೆ ಹಲವು ಶಾಸ್ತ್ರಗಳನ್ನ ನೆರೆವೇರಿಸಲಿದ್ದಾರೆ. ಇನ್ನೂ ಸಂಜೆ 6.30ರ ಶುಭ ಘಳಿಗೆಯಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.[ಮದುವೆ ನಂತರ ನಟನೆಗೆ ಗುಡ್ ಬೈ ಹೇಳ್ತಾರಾ ನಟಿ ಅಮೂಲ್ಯ.?]

ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರ!

ಅಂದ್ಹಾಗೆ, ಅಮೂಲ್ಯ ಮತ್ತು ಜಗದೀಶ್ ರವರ ನಿಶ್ಚಿತಾರ್ಥ ಒಕ್ಕಲಿಗ ಕುಟುಂಬಕ್ಕೆ ಸಂಪ್ರದಾಯದಂತೆ ನಡೆಯಲಿದೆ.

ಶಿಲ್ಪಾ ಗಣೇಶ್ ಆಯ್ಕೆ ಮಾಡಿದ ಸೀರೆಯಲ್ಲಿ ಅಮೂಲ್ಯ!

'ಇಂಡೋ ಏಷ್ಯಾನ್ ಸ್ಟೈಲ್'ನಲ್ಲಿ ವದು ಜಗದೀಶ್ ಮಿಂಚುತ್ತಿದ್ರೆ, ಟ್ರಡಿಷ್ನಲ್ ಲುಕ್ ನಲ್ಲಿ ರೇಷ್ಮೆ ಸೀರೆಯುಟ್ಟು ಅಮೂಲ್ಯ ಕಂಗೊಳಿಸುತ್ತಿದ್ದರು. ವಿಶೇಷ ಅಂದ್ರೆ, ಅಮೂಲ್ಯ ತೊಟ್ಟಿರುವ ಸೀರೆಯನ್ನ ಶಿಲ್ಪಾ ಗಣೇಶ್ ಅವರು ಸೆಲೆಕ್ಟ್ ಮಾಡಿದ್ದಾರಂತೆ.

ಯಾರ್ಯಾರಿಗೆ ಆಹ್ವಾನ?

ಅಮೂಲ್ಯ ಹಾಗೂ ಜಗದೀಶ್ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಬಂಧು-ಮಿತ್ರರು, ಕುಟುಂಬದವರು, ಕೆಲವು ರಾಜಕಾರಣಿಗಳು ಮತ್ತು ಚಿತ್ರರಂಗದ ಕೆಲವು ಗಣ್ಯರು ಮಾತ್ರ ಭಾಗಿಯಾಗಲಿದ್ದಾರೆ.

ಮದುವೆ ಯಾವಾಗ?

ಈಗಾಗಲೇ ಅಮೂಲ್ಯ ಮತ್ತು ಜಗ್ಗದೀಶ್ ಅವರ ಮದುವೆಯ ದಿನಾಂಕ ನಿಗಧಿಯಾಗಿದೆ. ಎರಡು ಕುಟುಂಬದವರು ಸಮ್ಮತಿ ಮೆರೆಗೆ ಎರಡು ದಿನಾಂಕಗಳನ್ನ ಅಂತಿಮಗೊಳಿಸಿದ್ದು, ಮೇ 11, 12 ಅಥವಾ ಮೇ 20, 21 ರಂದು ಮದುವೆ ಆಗಲಿದ್ದಾರಂತೆ.

English summary
Kannada Actress Amulya is getting hitched to Jagadish, son of EX Corporator Ramachandra today (march 6th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada