For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ವೈವಾಹಿಕ ಬದುಕು ಆರಂಭಿಸಿದ 'ಆ ದಿನಗಳು' ನಟಿ ಅರ್ಚನಾ ಶಾಸ್ತ್ರಿ

  |

  ಸಿನಿ ರಂಗದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗಷ್ಟೆ ಕನ್ನಡ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟ ಧ್ರುವ ಸರ್ಜಾ ಹಸೆಮಣೆ ಏರಲು ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ, 'ಆ ದಿನಗಳು' ಖ್ಯಾತಿಯ ನಟಿ ಅರ್ಚನಾ ಶಾಸ್ತ್ರಿ ಅಲಿಯಾಸ್ ಅರ್ಚನಾ ವೇದಾ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

  'ಆ ದಿನಗಳು' ಚಿತ್ರದಲ್ಲಿ ಮಲ್ಲಿಕಾ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ತೆಲುಗು ಮತ್ತು ತಮಿಳು ಸಿನಿ ಅಂಗಳಧಲ್ಲಿ ಸಿಕ್ಕಾಪಟ್ಟೆ ಫೇಮಸ್. 'ಮಿಂಚು', 'ಮೇಘವರ್ಷಿಣಿ', 'ಮೈತ್ರಿ' ಮುಂತಾದ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಅರ್ಚನಾ ವೇದಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

  ಹೈದರಾಬಾದ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅರ್ಚನಾ ವೇದಾ-ಜಗದೀಶ್ ಸಪ್ತಪದಿ ತುಳಿದರು. ಅರ್ಚನಾ ವೇದಾ ಮದುವೆಯ ಫೋಟೋಗಳು ಇಲ್ಲಿದೆ, ನೋಡಿರಿ...

  ಮೇಡ್ ಫಾರ್ ಈಚ್ ಅದರ್

  ಮೇಡ್ ಫಾರ್ ಈಚ್ ಅದರ್

  ಅರ್ಚನಾ ವೇದಾ ಮತ್ತು ಜಗದೀಶ್ ರವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಮದುವೆ ಆಗಿದ್ದಾರೆ. ತಮ್ಮ ಪ್ರೀತಿಯ ವಿಷಯವನ್ನು ಕುಟುಂಬದವರಿಗೆ ಹೇಳಿ, ಒಪ್ಪಿಗೆ ಪಡೆದು, ಹಿರಿಯರ ಆಶೀರ್ವಾದದೊಂದಿಗೆ ಅರ್ಚನಾ ಕೊರಳಿಗೆ ಜಗದೀಶ್ ತಾಳಿ ಕಟ್ಟಿದ್ದಾರೆ. ಮದುವೆಯಲ್ಲಿ ಕೆಂಪು ಸೀರೆಯಲ್ಲಿ ಅರ್ಚನಾ ಕಂಗೊಳಿಸಿದರೆ, ಬಳಿ ರೇಶ್ಮೆ ಪಂಚೆ-ಶಲ್ಯದಲ್ಲಿ ವರ ಜಗದೀಶ್ ಕಾಣಿಸಿಕೊಂಡರು.

  ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಆ ದಿನಗಳು' ಖ್ಯಾತಿಯ ನಟಿದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಆ ದಿನಗಳು' ಖ್ಯಾತಿಯ ನಟಿ

  ಸಂಭ್ರಮದ ಕ್ಷಣ

  ಸಂಭ್ರಮದ ಕ್ಷಣ

  ಮುಹೂರ್ತ ಸಮಾರಂಭದಲ್ಲಿ ಅರ್ಚನಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ ಬಳಿಕ ನವ ಜೋಡಿ ಸಂಭ್ರಮಿಸಿದ್ದು ಹೀಗೆ. ಪತ್ನಿ ಅರ್ಚನಾ ವೇದಾ ಹಣೆಗೆ ಪತಿ ಜಗದೀಶ್ ಮುತ್ತಿಟ್ಟರು. ಅಂದ್ಹಾಗೆ, ಜಗದೀಶ್ ಹೆಲ್ತ್ ಕೇರ್ ಕಂಪನಿಯೊಂದರಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಆ ದಿನಗಳು : ಅಗ್ನಿ ಶ್ರೀಧರ್ ಬಿಚ್ಚಿಟ್ಟ ರೌಡಿಸಂನ ಸತ್ಯಕತೆ!

  ಆರತಕ್ಷತೆ ಸಮಾರಂಭ

  ಆರತಕ್ಷತೆ ಸಮಾರಂಭ

  ಹೈದರಾಬಾದ್ ನಲ್ಲೇ ಅರ್ಚನಾ ವೇದಾ-ಜಗದೀಶ್ ರವರ ಆರತಕ್ಷತೆ ಸಮಾರಂಭ ನಡೆಯಿತು. ತೆಲುಗು ಸಿನಿ ಅಂಗಳದ ಹಲವು ನಟ-ನಟಿಯರು ರಿಸೆಪ್ಷನ್ ಗೆ ಆಗಮಿಸಿ ನವ ವಧು-ವರರಿಗೆ ಆಶೀರ್ವಾದ ಮಾಡಿದರು. ರಿಸೆಪ್ಷನ್ ನಲ್ಲಿ ನೀಲಿ ಬಣ್ಣದ ಉಡುಗೆಯಲ್ಲಿ ವಧು ಅರ್ಚನಾ ಮಿರಿ ಮಿರಿ ಮಿಂಚಿದರೆ, ವರ ಜಗದೀಶ್ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದರು.

  ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅರ್ಚನಾ ಬಿಜಿ

  ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅರ್ಚನಾ ಬಿಜಿ

  ಸ್ಯಾಂಡಲ್ ವುಡ್ ಮಾತ್ರ ಅಲ್ಲ.. ಕಾಲಿವುಡ್ ಮತ್ತು ಟಾಲಿವುಡ್ ನಲ್ಲೂ ಅರ್ಚನಾ ವೇದಾ ಬಹುಬೇಡಿಕೆಯ ನಟಿ. 'ನೂವಸ್ತಾನಂಟೆ ನೇನೊದ್ದಂಟಾನಾ', 'ಯಮದೊಂಗ', 'ವೇಗಂ', 'ಪರಮವೀರ ಚಕ್ರ', 'ಬಲುಪು' ಮುಂತಾದ ಚಿತ್ರಗಳಲ್ಲಿ ಅರ್ಚನಾ ಅಭಿನಯಿಸಿದ್ದಾರೆ. ಅರ್ಚನಾ ಕೈಯಲ್ಲಿ ಸದ್ಯ ಮೂರು ತೆಲುಗು ಚಿತ್ರಗಳಿವೆ.

  English summary
  Kannada Actress Archana Veda got married to Jagadeesh in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X