For Quick Alerts
  ALLOW NOTIFICATIONS  
  For Daily Alerts

  ನೃತ್ಯ ನಿರ್ದೇಶಕಿಯಾದ 'ಗಾಳಿಪಟ' ನಟಿ ಭಾವನಾ

  |

  ಸ್ಯಾಂಡಲ್ ವುಡ್ ನಟಿ ಭಾವನಾ ಈಗ ಅಭಿನಯದ ಜೊತೆಗೆ ನೃತ್ಯ ನಿರ್ದೇಶಕಿಯಾಗಿಯು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿಮಣಿಯರು ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಕಡೆಯು ಗಮನ ಹರಿಸುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ನಟಿಯರ ಸಾಲಿಗೀಗ ನಟಿ ಭಾವನಾ ರಾವ್ ಕೂಡ ಸೇರಿಕೊಂಡಿದ್ದಾರೆ.

  ಹೌದು, ನಟಿ ಭಾವನಾ ನೃತ್ಯ ನಿರ್ದೇಶಕಿಯಾಗಿದ್ದಾರೆ. ಭಾವನಾ ಉತ್ತಮ ನೃತ್ಯಗಾರ್ತಿ ಕೂಡ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೆಜ್ಜೆ ಹಾಕಿರುವ ಭಾವನಾ ಹೆಜ್ಜೆ ಎನ್ನುವ ನೃತ್ಯ ಶಾಲೆಯನ್ನು ತೆರೆದಿದ್ದಾರೆ. ಈ ಮೂಲಕ ಡಾನ್ಸ್ ಹೇಳಿಕೊಡುವ ಕೆಲಸವೂ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಭಾವನಾ ಅವರಿಗೆ ಸಿನಿಮಾ ಕೋರಿಯೋಗ್ರಫಿ ಮಾಡಿಬೇಕು ಎನ್ನುವುದು ದೊಡ್ಡ ಕನಸಾಗಿತ್ತಂತೆ.

  'ಗಾಳಿಪಟ' ಭಾವನ ಬಾಲಿವುಡ್ ಗೆ, ಯಾವ ಸಿನಿಮಾ?, ಯಾರು ಹೀರೋ?

  ಆ ಕನಸೀಗ ಭಾವನಾಗೆ ನನಸಾಗಿದೆ. ನಟಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಯಾನ' ಚಿತ್ರದ ಮೂಲಕ ಭಾವನ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ. 'ಯಾನ' ಚಿತ್ರದ ಹಾಡೊಂದಕ್ಕೆ ಭಾವನಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ನೃತ್ಯ ನಿರ್ದೇಶನ ಮಾಡಿರುವ ಭಾವನಾ ಅವರಿಗೆ ಇದು ಸವಾಲಿನ ಕೆಲಸವಾಗಿತ್ತಂತೆ. ನಿರ್ದೇಶಕರು ಹೇಳಿದ ಹಾಗೆ ನಟಿಸುವುದು ಸುಲಭ, ಆದ್ರೆ ನೃತ್ಯ ಸಂಯೋಜನೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಅಂತಾನೆ ಭಾವನಾ.

  ಭಾವನಾ ನೃತ್ಯ ಸಂಯೋಜನೆ ಮಾಡಿರುವ ಹಾಡನ್ನು ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರಕ್ಕ ಜೋಶ್ವಾ ಶ್ರೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಟ್ರೈಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಸಧ್ಯದಲ್ಲೆ ತೆರೆಗೆ ಬರಲಿದೆ.

  English summary
  Kannada actress Bhavana Rao choreographed the Yaanaa film. This film is directed by Vijayalakshmi Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X